Advertisement

2 ವರ್ಷಕ್ಕೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ: ಸಿಎಂ

12:06 AM Feb 06, 2020 | Lakshmi GovindaRaj |

ಶ್ರೀ ವಿಜಯ ಪ್ರಧಾನ ವೇದಿಕೆ: ಎರಡು ವರ್ಷಕ್ಕೊಮ್ಮೆ ಸರ್ಕಾರದಿಂದ ರಾಜ್ಯ ಮಟ್ಟದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಚಿಂತನೆ ನಡೆದಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದರು. 3 ದಿನಗಳ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ, ಉತ್ಸವದ ಜತೆಗೆ ವಿವಿಧ ನಿಗಮ ಮಂಡಳಿ ನೇಮಕ ಹಾಗೂ ಪ್ರಶಸ್ತಿ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡಲಾಗುವುದೆಂದರು.

Advertisement

ಸರ್ಕಾರಿ ಶಾಲೆ ಬಲಪಡಿಸಲು ಸರ್ಕಾರ ಸಾಕಷ್ಟು ದಿಟ್ಟ ಹೆಜ್ಜೆ ಇಟ್ಟಿದೆ. ಮೂಲ ಸೌಕರ್ಯ, ಶಿಕ್ಷಕರ ತರಬೇತಿ ಮೊದಲಾದ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಮುದಾಯದ ಬೆಂಬಲವಿಲ್ಲದೆ ಸರ್ಕಾರಿ ಶಾಲೆ ಉಳಿಸುವುದು ಕಷ್ಟಸಾಧ್ಯ. ಹೀಗಾಗಿ, ಪೋಷಕರು ಸರ್ಕಾರಿ ಶಾಲೆ ಕುರಿತು ಒಲವು ಬೆಳೆಸಿಕೊಂಡಾಗ, ನಿಜಕ್ಕೂ ಕನ್ನಡಕ್ಕೆ ಶಕ್ತಿ ಬರುತ್ತದೆ. ಶಾಲೆಗಳೂ ಪ್ರಗತಿ ಮುಖವಾಗುತ್ತವೆ. ಮಕ್ಕಳ ಭವಿಷ್ಯವೂ ಉಜ್ವಲವಾಗುತ್ತದೆ ಎಂದು ವಿವರಿಸಿದರು.

ನಾಡಿನ ಏಕತೆಗೆ ಯಾವುದೇ ಧಕ್ಕೆಯಾಗದಂತೆ ನಮ್ಮೊಳಗಿರುವ ಸಮಸ್ಯೆ ನಿವಾರಿಸಿಕೊಳ್ಳಬೇಕಿದೆ. ಅಭಿವೃದ್ಧಿ ದಷ್ಟಿಯಿಂದ ಕರ್ನಾಟಕದ ಯಾವುದೇ ಪ್ರದೇಶ ಹಿಂದುಳಿಯಬಾರದು. ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಪರಿಗಣಿಸಿ, ಅನುದಾನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಎಲ್ಲರೂ ಕೂಡಿ ಏಕೀಕೃತ ಕರ್ನಾಟಕದ ಅಸ್ಮಿತೆ ಕಾಪಾಡಲು ಶ್ರಮಿಸೋಣ ಎಂದು ಕರೆಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next