Advertisement

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ 2 ದಿನ ಜೈಲು!

12:48 AM Jul 26, 2019 | Team Udayavani |

ಹೈದರಾಬಾದ್‌: “ದಂಡ ಕಟ್ಟಿದರಾಯ್ತು ಬಿಡಿ’ ಎಂಬ ಉಡಾಫೆಯಿಂದ ಸಂಚಾರಿ ನಿಯಮಗಳನ್ನು ಉಲ್ಲಂ ಸುವ ವಾಹನ ಸವಾರರಿಗೆ ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯವೊಂದು ಬಿಸಿ ಮುಟ್ಟಿಸಿದೆ. ಏಕಮುಖ ಸಂಚಾರವಿದ್ದರೂ ಅದನ್ನು ಲೆಕ್ಕಿಸದೆ ವಿರುದ್ಧ ದಿಕ್ಕಿನಿಂದ ರಸ್ತೆಗೆ ವಾಹನಗಳನ್ನು ನುಗ್ಗಿಸಿದ್ದ ಆರು ವಾಹನ ಚಾಲಕರಿಗೆ 2 ದಿನಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ಜತೆಗೆ, ತಲಾ 50 ರೂ.ಗಳ ದಂಡವನ್ನೂ ಜಡಿದಿದೆ. ಜು. 17ರಿಂದ 22ರವರೆಗಿನ ಅವಧಿಯಲ್ಲಿ ಹೈದರಾ ಬಾದ್‌ನ ವಿವಿಧ ಭಾಗಗಳಲ್ಲಿ ಇವರು ಸಂಚಾರಿ ನಿಯಮ ಉಲ್ಲಂ ಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next