Advertisement
ಬಿಹಾರದ ಮುಂಗೇರ್ ಜಿಲ್ಲೆಯ ಸುಮಿತ್ ಕುಮಾರ್ ಸಿಂಗ್ ಮತ್ತು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ದಯಾರಾಮ್ ಎಂಬವರನ್ನು ಚಾರ್ಜ್ ಶೀಟ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಕಳೆದ ವರ್ಷದ ಜುಲೈನಿಂದ ಸೆಪ್ಪಂಬರ್ ಅವಧಿಯಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನವಾಹಕ ನೌಕೆ ಯೊಳಗೆ ಅಕ್ರಮವಾಗಿ ನುಗ್ಗಿ, ಅಲ್ಲಿದ್ದ ಪ್ರೊಸೆಸರ್‌ಗಳು, ರ್ಯಾಮ್, ಸಾಲಿಡ್ ಸ್ಟೇಟ್ ಡ್ರೈವ್‌ಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಕದಿಯ ಲಾಗಿತ್ತು. 2019ರ ಸೆಪ್ಪಂಬರ್‌ನಲ್ಲಿ ಈ ಪ್ರಕರಣದ ವಿಚಾರಣೆ ಆರಂಭಿಸಿದ ಎನ್‌ಐಎ, ಸುಮಾರು 9 ತಿಂಗಳ ಕಾಲ ವಿವಿಧ ರಾಜ್ಯಗಳಲ್ಲಿ ವ್ಯಾಪಕ ತನಿಖೆ ನಡೆಸಿ, ಕೊನೆಗೂ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿತು. ಬಿಹಾರ ಮತ್ತು ರಾಜಸ್ಥಾನದಲ್ಲಿ ಇಬ್ಬರನ್ನೂ ಸೆರೆಹಿಡಿದು ತನಿಖೆ ನಡೆಸಿ ದಾಗ, ಆರೋಪಿಗಳು ತಪ್ಪೊಪ್ಪಿಕೊಂಡಿ ದ್ದರು. ವಿಮಾನವಾಹಕ ನೌಕೆಯ ಪೇಂಟಿಂಗ್ ಕೆಲಸ ಮಾಡುವ ವೇಳೆ ಈ ಕೃತ್ಯ ಎಸಗಿದ್ದರು ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. Advertisement
ವಿಮಾನವಾಹಕ ನೌಕೆಯ ಹಾರ್ಡ್‌ವೇರ್ ಕಳ್ಳತನ; ಇಬ್ಬರು ಆರೋಪಿಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ
01:11 AM Sep 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.