Advertisement

ಹಾಸನದ 2 ಪ್ರದೇಶಗಳು 28 ದಿನ ಸೀಲ್‌ಡೌನ್‌

07:53 AM May 25, 2020 | Lakshmi GovindaRaj |

ಹಾಸನ: ಬೆಂಗಳೂರು ಪ್ರಯಾಣದ ಹಿನ್ನೆಲೆಯಿಂದ ಹಾಸನ ನಗರದ ಇಬ್ಬರು ನಿವಾಸಿಗಳಲ್ಲಿ ಕೋವಿಡ್‌ 19 ಸೋಂಕು ಕಂಡುಬಂದಿದೆ. ಸೋಂಕಿತ ರಿಬ್ಬರು ವಾಸವಿದ್ದ ಎರಡು ಪ್ರದೇಶ ಗಳನ್ನು ಕಂಟೈನ್‌ಮೆಂಟ್‌ ಝೋನ್‌ ಗಳೆಂದು  ಘೋಷಣೆ ಮಾಡಿದ್ದು, ಭಾನು ವಾರ ಸೀಲ್‌ಡೌನ್‌ ಮಾಡಲಾಗಿದೆ.

Advertisement

ಹಾಸನದ ಬಿ.ಕಾಟೀಹಳ್ಳಿ ನಿವಾಸಿ ಕೆಎಸ್‌ಆರ್‌ಪಿ ಪೇದೆ ಸರ್ಕಾರಿ ವಾಹನ ದಲ್ಲಿಯೇ ಬೆಂಗಳೂರಿಗೆ ಕರ್ತವ್ಯ ನಿಮಿತ್ತ ಹೋಗಿ ಬಂದಿದ್ದರು. ಅವರಲ್ಲಿ ಕೋವಿಡ್‌ 19  ಪಾಸಿಟಿವ್‌ ಕಂಡು ಬಂದಿದೆ. ಹಾಗಾಗಿ ಇಂದಿರಾ ನಗರ ಪ್ರದೇಶವನ್ನು ಸೀಲ್‌ಲ್‌ಡೌನ್‌ ಮಾಡ ಲಾಗಿದೆ. ಪೇದೆಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದ್ದು, ಪೇದೆಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಆಂಬ್ಯುಲೆನ್ಸ್‌ನಲ್ಲಿ  ಕರೆದೊಯ್ದು ಕ್ವಾರಂಟೈನ್‌ ಮಾಡಲಾಗಿದೆ.

ಹಾಸನದ ಉತ್ತರ ಬಡಾವಣೆಯ ಮಹಿಳೆಯೊಬ್ಬರು ಬೆಂಗಳೂರಿಗೆ ಹೋಗಿ ಬಂದಿದ್ದು, ಅವರಲ್ಲಿಯೂ ಕೋವಿಡ್‌ 19 ಸೋಂಕು ಕಂಡು ಬಂದಿದೆ. ಹಾಗಾಗಿ ಆಕೆ ವಾಸಿಸುತ್ತಿದ್ದ ಸಾಲಗಾಮೆ  ರಸ್ತೆ  ಅರಳೀಕಟ್ಟೆ ಸರ್ಕಲ್‌ನಿಂದ ಉತ್ತರ ಬಡಾವಣೆಯನ್ನು ಸೀಲ್‌ಡೌನ್‌ ಮಾಡಿದ್ದು, ಆಕೆಯ ಪ್ರಥಮ ಹಾಗೂ ದ್ವೀತಿಯ ಸಂಪರ್ಕದಲ್ಲಿದ್ದವರನ್ನೂ ಆ್ಯಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಕರೆ ದೊಯ್ದು ಕ್ವಾರಂಟೈನ್‌ ಮಾಡಲಾಯಿತು.

ಸೋಂಕಿತರು ಪತ್ತೆ ಆಗಿದ್ದೇಗೆ?: ಈ ಎರಡು ಪಾಸಿಟಿವ್‌ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು, ಶಂಕಿತರಿಬ್ಬರಲ್ಲಿ ಕೆಮ್ಮು, ಜ್ವರ ಇದ್ದುದರಿಂದ ಕೋವಿಡ್‌ 19 ಆಸ್ಪತ್ರೆಗೆ ಸೇರಿಸಲಾಗಿತ್ತು. ಪರೀಕ್ಷೆ ಮಾಡಿದಾಗ  ಕೋವಿಡ್‌ 19 ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿದೆ. ಅವರು ವಾಸವಿದ್ದ ಪ್ರದೇಶಗಳನ್ನು ಕಂಟೈನ್‌ ಮೆಂಟ್‌ಝೋನ್‌ ಗಳೆಂದು ಘೋಷಿಸಲಾಗಿದೆ. ಈ ನಿರ್ಬಂಧಿತ ವಲಯದ ಆದೇಶವು 28 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದರು.

ಸಾರ್ವಜನಿಕರ ಪ್ರವೇಶ ನಿಷೇಧ: ಕಂಟೈನ್‌ಮೆಂಟ್‌ ಝೋನ್‌ಗಳಿಗೆ ಸಾರ್ವಜನಿಕರು ಒಳಗೆ ಹೋಗುವು ದಾಗಲಿ, ಆ ಪ್ರದೇಶದಲ್ಲಿರುವವರು ಹೊರಗೆ ಬರುವುದಾಗಲಿ ಸಂಪೂರ್ಣ ನಿರ್ಬಂಧಿಸಲಾಗಿದೆ. ಪ್ರತಿ ದಿನ ಆಶಾ ಕಾರ್ಯಕರ್ತೆಯರು  ನಿರ್ಬಂಧಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಅಗತ್ಯ ವಸ್ತುಗಳನ್ನು ನಿಯೋಜಿತ ಸಿಬ್ಬಂದಿ ಪೂರೈಸಲಿದ್ದಾರೆ ಎಂದು ಹೇಳಿದರು.

Advertisement

ನಗರಸಭೆ ವ್ಯಾಪ್ತಿಯ 14ನೇ ವಾರ್ಡಿನ ಅರಳೀಕಟ್ಟೆ ವೃತ್ತದ ಬಳಿ ಇರುವ ಉತ್ತರ  ಬಡಾವಣೆಯ ಸೀಲ್‌ ಡೌನ್‌ ಮಾಡಿರುವ ಭಾಗದ ಜನರು ಯಾವುದೇ ವಸ್ತುಗಳನ್ನು ಕೊಂಡು ಕೊಳ್ಳಲು ಮನೆಯಿಂದ ಹೊರ ಬರು ವಂತಿಲ್ಲ. ಅವಶ್ಯಕತೆ ಇದ್ದಲ್ಲಿ ದುಬ್ಬೇ ಗೌಡ ಮೊ. 9731504899 ಮತ್ತು ಜಗದಾಂಬ ಮೊ. 9606349246  ಇವರನ್ನು ಮೊಬೈಲ್‌ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಆಯುಕ್ತ‌ ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next