Advertisement

ಚೀನದಲ್ಲಿ 18 ಹೊಸ ಪ್ರಕರಣ ಪತ್ತೆ

10:40 AM Jun 23, 2020 | mahesh |

ಬೀಜಿಂಗ್‌: ಚೀನದಲ್ಲಿ ಹೊಸ ಕೋವಿಡ್‌ -19 ಪ್ರಕರಣ ಗಳು ದಾಖಲಾಗುವುದು ಮುಂದುವರಿದಿದ್ದು, ರವಿವಾರ 18 ಕೇಸುಗಳು ಪತ್ತೆಯಾಗಿವೆ. ಅವುಗಳಲ್ಲಿ 9 ರಾಜಧಾನಿ ಬೀಜಿಂಗ್‌ನಲ್ಲಿಯೇ ಪತ್ತೆಯಾಗಿವೆ ಎಂದು ಇಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.

Advertisement

ಶನಿವಾರ ಚೀನದಲ್ಲಿ 26 ಕೋವಿಡ್ ವೈರಸ್‌ ಪ್ರಕರಣ ಪತ್ತೆಯಾಗಿದ್ದು, ಅವುಗಳಲ್ಲಿ 22 ಬೀಜಿಂಗ್‌ನಲ್ಲಿ ಕಂಡುಬಂದಿವೆ. ಬೀಜಿಂಗ್‌ನ ಸಗಟು ಆಹಾರ ಮಾರುಕಟ್ಟೆಯಲ್ಲಿ ಜೂ. 11ರಂದು ಹೊಸ ಕೊವಿಡ್‌-19 ಪ್ರಕರಣ ದಾಖಲಾದ ಬಳಿಕ ಪ್ರತಿದಿನ ಹೆಚ್ಚು ಹೆಚ್ಚು ಕೇಸುಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ಪ್ರಕರಣಗಳು ವ್ಯಾಪಕವಾಗುತ್ತಿರುವ ಕಾರಣ ಸ್ಥಳೀಯ ಅಧಿಕಾರಿಗಳು ರಾಜಧಾನಿಯಲ್ಲಿ ಜನರ ಚಲನವಲನಗಳನ್ನು ನಿರ್ಬಂಧಿಸುತ್ತಿದ್ದಾರೆ. ಸ್ಥಳೀಯ ಸೋಂಕುಗಳು ಪತ್ತೆಯಾದ ಅನಂತರ ವೈರಸ್‌ ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂ. 21ರಂದು ಏಳು ಲಕ್ಷಣರಹಿತ ಕೋವಿಡ್‌ -19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಆದರೆ ಸೋಂಕಿಗೆ ಒಳಗಾದವರಿಗೆ ಯಾವುದೇ ರೋಗಲಕ್ಷಣಗಳು ಇದಲ್ಲದಿರುವ ಕಾರಣ ಅವರನ್ನು ಕೊರೊನಾ ಸೋಂಕಿತರ ಪಟ್ಟಿಗೆ ಚೀನ ಸೇರಿಸಿಲ್ಲ ಎನ್ನಲಾಗಿದೆ. ಚೀನದಲ್ಲಿ ಈ ವರೆಗೆ ಒಟ್ಟು 83,396 ಕೊರೊನಾ ಪಾಸಿಟಿವ್‌ ಕೇಸುಗಳು ಪತ್ತೆಯಾಗಿದ್ದು, 4,634 ಮಂದಿ ಮೃತಪಟ್ಟಿದ್ದಾರೆ. 78,413 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 349 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹತ್ತು ಮಂದಿಯ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗಿದ್ದು, 339 ಮಂದಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮಾರ್ಚ್‌ ಬಳಿಕ ಚೀನದಲ್ಲಿ ಸೋಂಕಿತರ ಪ್ರಮಾಣ ಇಳಿಮುಖವಾಗಿತ್ತು. ಜೂನ್‌ 2ನೇ ವಾರದಲ್ಲಿ ಮತ್ತೆ ಹೊಸ ಪ್ರಕರಣಗಳು ದಾಖಲಾಗಲಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next