Advertisement

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

11:30 AM Jul 02, 2024 | |

ನವದೆಹಲಿ: ಭಾರತ ಸರ್ಕಾರ ಕಚ್ಚಾ ಪೆಟ್ರೋಲಿಯಮ್‌(Cuude Petroleum) ಮೇಲಿನ ವಿಂಡ್‌ ಫಾಲ್‌ (windfall Tax) ತೆರಿಗೆಯನ್ನು ಪ್ರತಿ ಮೆಟ್ರಿಕ್‌ ಟನ್‌ ಗೆ 3,250 ರೂಪಾಯಿಯಿಂದ 6,000 ಸಾವಿರ ರೂ.ಗೆ ಏರಿಕೆ ಮಾಡಿದ್ದು, ಹೊಸ ದರ ಜುಲೈ 2ರಿಂದಲೇ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

Advertisement

ಡೀಸೆಲ್‌, ಏವಿಯೇಷನ್‌ ಟರ್ಬೈನ್‌ ಇಂಧನದ ಮೇಲಿನ ವಿಂಡ್‌ ಫಾಲ್‌ ತೆರಿಗೆಯನ್ನು ಪ್ರತಿ ಎರಡು ವಾರಗಳಿಗೊಮ್ಮೆ ಪರಿಶೀಲಿಸಿ ಅದನ್ನು ಶೂನ್ಯ ತೆರಿಗೆಯಲ್ಲಿ ಇರಿಸಲಾಗುತ್ತದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

ಈ ಬಾರಿ ಕೇಂದ್ರ ಸರ್ಕಾರ ಕಚ್ಛಾ ಪೆಟ್ರೋಲಿಯಮ್‌ ಮೇಲೆ ಶೇ.160ರಷ್ಟು ವಿಂಡ್‌ ಫಾಲ್‌ ತೆರಿಗೆಯನ್ನು ಹೆಚ್ಚಳ ಮಾಡಿದೆ. ಜೂನ್‌ 15ರಂದು ಭಾರತ ಸರ್ಕಾರ ಕಚ್ಛಾ ಪೆಟ್ರೋಲಿಯಮ್‌ ಮೇಲಿನ ವಿಂಡ್‌ ಫಾಲ್‌ ತೆರಿಗೆಯನ್ನು ಪ್ರತಿ ಟನ್‌ ಗೆ 5,200ರಿಂದ 3,250 ರೂಪಾಯಿಗೆ ಇಳಿಕೆ ಮಾಡಿತ್ತು.

ಏನಿದು ವಿಂಡ್‌ ಫಾಲ್‌ ತೆರಿಗೆ?

Advertisement

ತೈಲ ಬೆಲೆ ಬ್ಯಾರೆಲ್‌ ಗೆ 70 ಡಾಲರ್‌ ಗಿಂತ ಹೆಚ್ಚಳವಾದಾಗ ಈ ತೆರಿಗೆ ಅನ್ವಯಿಸುತ್ತದೆ. ಈ ತೆರಿಗೆಯಿಂದ ಬರುವ ಆದಾಯವನ್ನು ನಂತರ ಗ್ರಾಹಕರ ಇಂಧನಕ್ಕೆ ಸಬ್ಸಿಡಿ ನೀಡಲು ಬಳಸಲಾಗುತ್ತದೆ. ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಅನಿರೀಕ್ಷಿತ ಮಟ್ಟದ ಲಾಭಗಳಿಸಿದಾಗ ಅವುಗಳಿಗೆ ಸರ್ಕಾರ ವಿಧಿಸುವ ಒಂದು ವಿಧದ ತೆರಿಗೆಯನ್ನೇ ವಿಂಡ್‌ ಫಾಲ್‌ ಟ್ಯಾಕ್ಸ್‌ ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next