Advertisement

ಗುಜರಾತ್ ನಲ್ಲಿ 120 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಭಯೋತ್ಪಾದನಾ ನಿಗ್ರಹ ದಳ

10:05 AM Nov 15, 2021 | Team Udayavani |

ಗಾಂಧಿನಗರ: ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಗುಜರಾತ್ ನ ಮೋರ್ಬಿ ನಗರದ ಜಿಂಜುಡಾ ಗ್ರಾಮದಲ್ಲಿ ಕೋಟಿ ಮೌಲ್ಯದ 120 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement

“ಗುಜರಾತ್ ಪೊಲೀಸರ ಮತ್ತೊಂದು ಸಾಧನೆ. ಗುಜರಾತ್ ಪೊಲೀಸರು ಡ್ರಗ್ಸ್ ನಿರ್ಮೂಲನೆಗೆ ಮುಂಚೂಣಿಯಲ್ಲಿದ್ದಾರೆ. ಗುಜರಾತ್ ಎಟಿಎಸ್ ಸುಮಾರು 120 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ” ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

ಇದನ್ನೂ ಓದಿ:ರಿಕ್ಷಾ ಚಾಲಕನಿಗೆ ತನ್ನ ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ ಅಜ್ಜಿ: ಯಾಕೆ ಗೊತ್ತಾ?

ಸೆಪ್ಟೆಂಬರ್‌ ನಲ್ಲಿ ಕಚ್‌ನ ಮುಂಡ್ರಾ ಬಂದರಿನಿಂದ ಸುಮಾರು 21,000 ಕೋಟಿ ರೂಪಾಯಿ ಮೌಲ್ಯದ ಸುಮಾರು 3,000 ಕಿಲೋಗ್ರಾಂಗಳಷ್ಟು ಹೆರಾಯಿನ್ ನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ವಶಪಡಿಸಿಕೊಂಡ ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

Advertisement

ಅರೆ-ಸಂಸ್ಕರಿತ ಟಾಲ್ಕ್ ಕಲ್ಲುಗಳನ್ನು ಸಾಗಿಸುವ ಎರಡು ಸರಕು ಕಂಟೈನರ್‌ ಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಕಂಡುಬಂದಿದೆ. ಡ್ರಗ್ಸ್ ಅಫ್ಘಾನಿಸ್ತಾನದಿಂದ ರವಾನೆಯಾಗಿತ್ತು.

ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಳಿ ಇರುವ ಪ್ರಕರಣದಲ್ಲಿ ಚೆನ್ನೈ ಮೂಲದ ದಂಪತಿ ಮತ್ತು ಕೊಯಮತ್ತೂರಿನಿಂದ ಮತ್ತೊಬ್ಬ ಆರೋಪಿಯನ್ನು ಡಿಆರ್‌ಐ ಬಂಧಿಸಿದೆ.

ವಶಪಡಿಸಿಕೊಂಡ ಹೆರಾಯಿನ್ ಅನ್ನು ಕಂದಹಾರ್ ಮೂಲದ ಹಸನ್ ಹುಸೇನ್ ಲಿಮಿಟೆಡ್ ರಫ್ತು ಮಾಡಿತ್ತು. ವಿಜಯವಾಡ ಮೂಲದ ಆಶಿ ಟ್ರೇಡಿಂಗ್ ಕಂಪನಿಯು ಇರಾನ್‌ ನ ಬಂದರ್ ಅಬ್ಬಾಸ್ ಪೋರ್ಟ್ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ಆಮದು ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next