Advertisement

Ayodhya: ರಾಮ ಮಂದಿರಕ್ಕೆ ಹೈದರಾಬಾದ್‌ ಕಂಪೆನಿಯಿಂದ 118 ಚಿತ್ತಾರದ ಬಾಗಿಲುಗಳು

12:08 AM Dec 28, 2023 | Team Udayavani |

ಹೈದರಾಬಾದ್‌: ಅಯೋಧ್ಯೆಯ ರಾಮ ಮಂದಿರಕ್ಕೆ ಅಗತ್ಯವಾಗಿರುವ ಬಾಗಿಲಿನ ಕೆಲಸಗಳು ಹೈದರಾಬಾದ್‌ನಲ್ಲಿ ಬಿರುಸಿನಿಂದ ಸಾಗಿದೆ. ಮುತ್ತಿನ ನಗರಿಯ ಕಂಪೆನಿಯೊಂದು ಅದರ ಹೊಣೆ ಹೊತ್ತುಕೊಂಡಿದೆ. ಒಟ್ಟು 118 ಬಾಗಿಲುಗಳು ದೇಶದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕೆತ್ತನೆಗಳೊಂದಿಗೆ ಮೂಡಿ ಬರಲಿದೆ.

Advertisement

“ರಾಮ ಮಂದಿರದ ಗರ್ಭಗುಡಿ ಸೇರಿದಂತೆ ದೇಗುಲಕ್ಕೆ ಒಟ್ಟು 118 ಬಾಗಿಲುಗಳನ್ನು ಸಿದ್ಧಪಡಿಸಲಾಗುತ್ತಿದೆ. ಈಗ ಪ್ರಸ್ತುತ 9 ಅಡಿ ಎತ್ತರದ 18 ಬಾಗಿಲುಗಳಿಗೆ ಗೋಲ್ಡ್‌ ಪ್ಲೇಟಿಂಗ್‌ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜ.1ರ ನಂತರ ಅವುಗಳನ್ನು ಅಳವಡಿಸಲಾಗುತ್ತದೆ’ ಎಂದು ಅನುರಾಧ ಟಿಂಬರ್ನ ಎಂಡಿ ಶರತ್‌ ಬಾಬು ತಿಳಿಸಿದ್ದಾರೆ.

ನಮ್ಮ 50 ಮಂದಿ ಕುಶಲಕರ್ಮಿಗಳು ಅಯೋಧ್ಯೆಯಲ್ಲಿ ನೆಲೆಸಿದ್ದು, ಕೆತ್ತನೆ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಇವರೊಂದಿಗೆ 50 ಸಹಾ ಯಕರು ಸಾಥ್‌ ನೀಡುತ್ತಿದ್ದಾರೆ.ಮೂರು ತಿಂಗ ಳಲ್ಲಿ ಈ ಬಾಗಿಲುಗಳ ಕೆತ್ತನೆ ಕಾರ್ಯ ಪೂರ್ಣ ಗೊಂಡಿದೆ. ನವಿಲು, ಆನೆ ಸೇರಿದಂತೆ ಸಂಸ್ಕೃತಿ ಯನ್ನು ಬಿಂಬಿಸುವ ಚಿತ್ರಗಳನ್ನು ಈ ಬಾಗಿಲು ಗಳ ಮೇಲೆ ಕೆತ್ತನೆ ಮಾಡಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next