Advertisement
ಈ ಅವ್ಯವಹಾರದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರು ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ನಡೆಸಬೇಕು. ಮುಖ್ಯಮಂತ್ರಿಗಳು ಕೂಡಲೇ ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಂದ ರಾಜೀನಾಮೆ ಪಡೆಯಬೇಕು. ಸೆ. 24ರಂದು ಇದರ ಕುರಿತು ನಾವು ಲೋಕಾಯುಕ್ತರಿಗೆ ದೂರು ಕೊಡಲಿದ್ದೇವೆ.
Related Articles
Advertisement
ಸರಕಾರವು ಶೇ. 60 ಮತ್ತು ಸಂಬಂಧಿತ ಸಂಸ್ಥೆಯು ಆಂತರಿಕ ಸಂಪನ್ಮೂಲದಿಂದ ಶೇ. 40 ಹಣ ಭರಿಸುತ್ತಿವೆ. ಡಾ| ಶರಣಪ್ರಕಾಶ್ ಪಾಟೀಲ್ , ಅಧಿಕಾರಿಗಳು, ದಿನೇಶ್ ಗುಂಡೂರಾವ್, ಉಪಕರಣ ಸರಬರಾಜು ಮಾಡಿದ ಸಂಸ್ಥೆಗೆ ಇದರ ಲಾಭ ಆಗಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಬಿಜೆಪಿ ಆರೋಪವೇನು? ಹಿಂದೆ 50 ಉಪಕರಣ ಪೂರೈಕೆ ಮಾಡಿದ ಕೇರಳ ವೈದ್ಯಕೀಯ ಸೇವಾ ನಿಗಮದ ಎಂ.ಎಸ್. ಕ್ರಿಯೇಟಿವ್ ಹೆಲ್ತ್ ಟೆಕ್ ಪ್ರೈ.ಲಿ. ಸಂಸ್ಥೆ ಇದೇ ಮಾಡ್ಯುಲರ್ ಥಿಯೇಟರ್ ಉಪಕರಣಕ್ಕೆ ಪ್ರತಿಯೊಂದಕ್ಕೆ 49.70 ಲಕ್ಷ ರೂ.ಗಳಿಗೆ ಟೆಂಡರ್‌ಗೆ ಹಾಕಿದ್ದರು. 3 ವರ್ಷ ವಾರಂಟಿ ಎಂದು ತಿಳಿಸಲಾಗಿತ್ತು. ಬೆಳಗಾವಿ ಸ್ಮಾರ್ಟ್ ಸಿಟಿ ಲಿ.ಯು ಕಿಮ್ಸ್ ಆಸ್ಪತ್ರೆಯ ಟ್ರೊಮಾ ಸೆಂಟರ್‌ಗಾಗಿ ಮಾಡ್ಯುಲರ್ ಥಿಯೇಟರ್‌ಗೆ 1.10 ಕೋಟಿಯಂತೆ ಶಿವೋನ್ ಇಂಡಿಯಾ ಕಂಪೆನಿಗೆ (50 ಲಕ್ಷ ರೂ.ಗಳ ಎಂ.ಎಸ್. ಕ್ರಿಯೇಟಿವ್ ಬಿಟ್ಟು) ಕಾರ್ಯಾದೇಶ ಮಾಡಿದೆ ಎಂದು ರವಿಕುಮಾರ್ ವಿವರ ನೀಡಿದರು. ವೈದ್ಯಕೀಯ ಶಿಕ್ಷಣ ಇಲಾಖೆಯು ಒಂದು ವರ್ಷ ವಾರಂಟಿ ಕೊಡುವ ಎಂ.ಎಸ್. ಲಕ್ಷ್ಮಣ್ಯ ವೆಂಚರ್ಸ್ ಪ್ರೈ.ಲಿ.ಗೆ ಪ್ರತೀ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗೆ 1,29,69,000 ರೂ. ಹಾಗೂ ಜಿಎಸ್‌ಟಿ 23,33,800 ರೂ. ಸೇರಿ ಒಟ್ಟು 1.52 ಕೋಟಿ ರೂ.ಗೆ ನೀಡಲಾಗಿದೆ. ಕೇರಳದ ಕಂಪೆನಿಗೆ ಟೆಂಡರ್ ನೀಡಿದ್ದರೆ ಪ್ರತೀ ಉಪಕರಣಕ್ಕೆ ಸುಮಾರು 50 ಲಕ್ಷ ರೂ. ತಗಲುತ್ತಿತ್ತು. ಕೇರಳದ ಸಂಸ್ಥೆಗೆ ಹೋಲಿಸಿದರೆ ಸುಮಾರು 3 ಪಟ್ಟು ಹೆಚ್ಚು ದರಕ್ಕೆ ಕೊಟ್ಟು ಹಗರಣ ನಡೆಸಲಾಗಿದೆ. ಒಂದು ಉಪಕರಣಕ್ಕೆ 1 ಕೋ.ರೂ. ಉಳಿತಾಯ ಆಗುತ್ತಿತ್ತು. 114 ಉಪಕರಣಗಳಲ್ಲಿ 117 ಕೋ.ರೂ. ಅವ್ಯವಹಾರ ಆಗಿದೆ. ಟೆಂಡರ್‌ನಲ್ಲಿ ಹತ್ತಾರು ಕೋ.ರೂ. ಕಿಕ್ ಬ್ಯಾಕ್ ಸಂದಾಯವಾಗಿದೆ. ಟೆಂಡರ್‌ನಲ್ಲಿ 4 ಕಂಪೆನಿಗಳು ಬಿಡ್ ಸಲ್ಲಿಸಿದ್ದು 3 ಕಂಪೆನಿಗಳನ್ನು ತಿರಸ್ಕರಿಸಿದ್ದಾರೆ. ಯಾವ್ಯಾವ ಕಂಪೆನಿ ಎಷ್ಟು ದರದ ಬಿಡ್ ಸಲ್ಲಿಸಿದ್ದವು ಎಂದು ಕೇಳಿದರೂ ಮಾಹಿತಿ ಕೊಟ್ಟಿಲ್ಲ ಎಂದು ಆರೋಪಿಸಿದರು.