Advertisement

ಶಿಲ್ಲಾಂಗ್‌:7 ಬಾಲಕರಿಂದ 11 ವರ್ಷದ ಬಾಲಕಿಯ ಗ್ಯಾಂಗ್‌ ರೇಪ್‌!

04:37 PM Jan 22, 2017 | Team Udayavani |

ಶಿಲ್ಲಾಂಗ್‌ : ಇಲ್ಲಿನ ಕಾಶಿ ಹಿಲ್ಸ್‌ ಜಿಲ್ಲೆಯ ಮೇವ್‌ಟನ್‌ ಎಂಬಲ್ಲಿ 7 ಮಂದಿ ಅಪ್ರಾಪ್ತ ವಯಸ್ಕ ಬಾಲಕರು 11 ವರ್ಷ ಪ್ರಾಯದ ಬಾಲಕಿಯ ಮೇಲೆ ಬರ್ಬರವಾಗಿ ಗ್ಯಾಂಗ್‌ ರೇಪ್‌ ಎಸಗಿರುವ ಕಳವಳಕಾರಿ ಘಟನೆ ಘಟನೆ ಮೇಘಾಲಯದಲ್ಲಿ ನಡೆದಿದೆ. 

Advertisement

ಬಾಲಕಿಯ ಮೇಲೆ ಮೊದಲು  ಡಿಸೆಂಬರ್‌ ತಿಂಗಳಿನಲ್ಲಿ ಭತ್ತದ ಗದ್ದೆಯಲ್ಲಿ ಅತ್ಯಾಚಾರ ನಡೆಸಿದ್ದು ,ಬಳಿಕ ಜನವರಿ 13 ರಂದು ಮತ್ತೆ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ. 

ಪೊಲೀಸರಿಗೆ ಈ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 6 ಮಂದಿ ಬಾಲಕರನ್ನು ವಶಕ್ಕೆ ಪಡೆದು ಬಾಲಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಎಲ್ಲರೂ 14 ರಿಂದ 16 ವರ್ಷ  ವಯಸ್ಸಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next