Advertisement

ಇರಾನ್‌: ಬಸ್ಸು ಮಗುಚಿ 11 ಶಾಲಾ ಬಾಲಕಿಯರ ದಾರುಣ ಸಾವು

12:13 PM Sep 01, 2017 | udayavani editorial |

ಟೆಹರಾನ್‌ : ಇರಾನ್‌ ನಲ್ಲಿ ಬಸ್ಸೊಂದು ಅಡಿ ಮೇಲಾಗಿ ಉರುಳಿ ಬಿದ್ದ ಭೀಕರ ಅವಘಡದಲ್ಲಿ 11 ಮಂದಿ ಶಾಲಾ ಬಾಲಕಿಯರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಒಟ್ಟು 12 ಮಂದಿ ಶಾಲಾ ಬಾಲಕಿಯರು ದಕ್ಷಿಣ ಇರಾನಿನ ಶಿರಾಜ್‌ ನಗರದಲ್ಲಿ ನಡೆಯಲಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರುಳುತ್ತಿದ್ದರು. ನಸುಕಿನ 4 ಗಂಟೆಯ ವೇಳಗೆ ಈ ಬಸ್ಸು ದುರಂತಕ್ಕೆ ಗುರಿಯಾಯಿತು. ಅವಘಡದಲ್ಲಿ ಒಟ್ಟು 30 ಮಂದಿ ಗಾಯಗೊಂಡಿದ್ದು ಇವರ ಪೈಕಿ ಹದಿಮೂರು ಮಂದಿಯ ಸ್ಥಿತಿ ಗಂಭೀರವಿದೆ. 

”12ರಲ್ಲಿ 11 ಶಾಲಾ ಬಾಲಕಿಯರು ಅಸುನೀಗಿದರು. ಒಬ್ಬಳು ಮಾತ್ರವೇ ಪವಾಡ ಸದೃಶವಾಗಿ ಬದುಕುಳಿದಳು” ಎಂದು ಇರ್ನಾ ಸುದ್ದಿ ಸಂಸ್ಥೆ  ತುರ್ತು ಸೇವಾ ದಳದ ಮುಖ್ಯಸ್ಥರಾಗಿರುವ ಎಜ್‌ರೇಜೆ ಅವರನ್ನು ಉಲ್ಲೇಖೀಸಿ ವರದಿ ಮಾಡಿದೆ. 

ಇರಾನ್‌ನಲ್ಲಿ  ರಸ್ತೆ ಸ್ಥಿತಿಗತಿ ಚೆನ್ನಾಗಿಯೇ ಇದೆ; ಆದರೆ ಸಾರಿಗೆ ಸುರಕ್ಷೆ ದಾಖಲೆಗಳು ಅತ್ಯಂತ ಕಳಪೆ ಮಟ್ಟದಲ್ಲಿವೆ. ನಿರ್ಲಕ್ಷ್ಯ ಹಾಗೂ ಅತಿ ವೇಗದ ವಾಹನ ಚಾಲನೆಗೆ ವರ್ಷಂಪ್ರತಿ ಇರಾನ್‌ನಲ್ಲಿ ಸಹಸ್ರಾರು ಮಂದಿ ಬಲಿಯಾಗುತ್ತಾರೆ.   

Advertisement

Udayavani is now on Telegram. Click here to join our channel and stay updated with the latest news.

Next