ರೋಮ್/ಚಂಡೀಗಡ: ಇಟಲಿಯ 101 ವರ್ಷದ ಅಜ್ಜಿ ಎರಡು ಬಾರಿ ಕೊರೊನಾ ದಾಳಿಯನ್ನು ಎದುರಿಸಿ ಗೆದ್ದು ಬಂದಿದ್ದರೂ, ಮತ್ತೂಮ್ಮೆ ಆಸ್ಪತ್ರೆಗೆ ಸೇರಿದ್ದಾರೆ. ಆದರೆ ಗಾಬರಿ ಪಡುವ ಅಗತ್ಯವಿಲ್ಲ, ಅಜ್ಜಿ ಸುರಕ್ಷಿತವಾಗಿದ್ದಾರೆ. ಪ್ರಸ್ತುತ ಮಾರಿಯಾ ಆರ್ಸಿಂಗರ್ ಹೆಸರಿನ ಅಜ್ಜಿ ಲೊಂಬಾರ್ಡಿ ಪ್ರದೇಶದ ಸೊಂಡಾಲೊದಲ್ಲಿರುವ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ. ಆದರೆ ಅವರಲ್ಲಿ ರುವ ರೋಗ ನಿರೋಧಕ ಶಕ್ತಿ ವೈದ್ಯರಿಗೇ ಅಚ್ಚರಿ ಮೂಡಿಸಿದೆ. ಈಕೆ ಸ್ಪೇನಿನ ಫ್ಲ್ಯೂ ಹಾಗೂ ಎರಡನೇ ವಿಶ್ವಯು ದ್ಧವನ್ನು ಕಂಡವರು ಎಂಬುದು ಗಮನಾರ್ಹ. ಆರ್ಸಿಂಗರ್ ಈ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿ ಆಸ್ಪತ್ರೆ ಸೇರಿದ್ದರು. ಸೆಪ್ಟೆಂಬ ರ್‌ನಲ್ಲಿ ಎರಡನೇ ಬಾರಿಗೆ, ನವೆಂಬರ್‌ನಲ್ಲಿ ಮೂರನೇ ಬಾರಿಗೆ ಸೇರಿಸಲಾಗಿದೆ. ವೈದ್ಯರ ಪ್ರಕಾರ, ಈ ಬಾರಿ ದಾಖಲಿಸಿಕೊಂಡಿ ರುವುದು ಕೇವಲ ಸುರಕ್ಷತೆ ದೃಷ್ಟಿಯಿಂದ ಮಾತ್ರ! ಶತಮಾನ ಕಳೆದಿರುವ ವ್ಯಕ್ತಿಗಳು ಕೊರೊ ನಾದಿಂದ ಪಾರಾಗಿರುವುದು ಹೊಸವಿಷಯವೇನಲ್ಲ. ಕೇರಳದ 103 ವರ್ಷದ ಪುರಕ್ಕತ್ ವೀಟಿಲ್ ಪರೀದ್, ಮಹಾರಾಷ್ಟ್ರದ ಆನಂದಿಬಾಯಿ ಪಾಟೀಲ್ (106) ಕೂಡಾ ಗುಣಮುಖರಾಗಿದ್ದಾರೆ.
ಮೊದಲ ಡೋಸ್ ಕ್ಯಾಪ್ಟನ್‌ಗೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೊನಾ ಲಸಿಕೆಯನ್ನು ಪಂಜಾಬ್‌ನಲ್ಲಿ ಬಳಕೆಗೆ ಶಿಫಾರಸು ಮಾಡಿದ ಬಳಿಕ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೊದಲ ಡೋಸ್ ಪಡೆಯಲಿದ್ದಾರೆ. ರಾಜ್ಯದಲ್ಲಿ 1.25 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಲಸಿಕೆ ನೀಡಲು ಗುರುತಿಸಲಾಗಿದೆ. ಇದೇ ವೇಳೆ, ಪಶ್ಚಿಮ ಬಂಗಾಳ ಸಚಿವ ಫಿರ್‌ಹಾದ್ ಹಕೀಮ್ ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗಕ್ಕೆ ಒಳಗಾಗಲಿದ್ದಾರೆ. ಅವರೇ ಮೊದಲ ಸ್ವಯಂ ಸೇವಕರು. ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.