Advertisement

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

11:42 PM Oct 01, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಗುರುವಾರ 10,070 ಮಂದಿಗೆ ಸೋಂಕು ತಗಲಿದೆ. ಜತೆಗೆ 7,144 ಮಂದಿ ಗುಣಮುಖರಾಗಿದ್ದು, 130 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 6.11 ಲಕ್ಷಕ್ಕೆ ಏರಿದ್ದು, ಸುಮಾರು 4.92 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 8,994ಕ್ಕೇರಿದೆ. ಇಂದಿಗೂ 1,10,412 ಮಂದಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಮಂಗಳವಾರ ಮೊದಲ ಬಾರಿ ಸೋಂಕು ಪ್ರಕರಣಗಳು ಹತ್ತು ಸಾವಿರದ ಗಡಿ ದಾಟಿದ್ದು, ಬುಧವಾರ 8,856ಕ್ಕೆ ಇಳಿದಿದ್ದವು. ಗುರುವಾರ ಮತ್ತೆ 10 ಸಾವಿರದ ಗಡಿ ದಾಟಿದೆ. ಇದಕ್ಕೆ ಹಿಂದೆಂದಿಗಿಂತಲೂ ಅತಿ ಹೆಚ್ಚು, ಅಂದರೆ 96,588 ಪರೀಕ್ಷೆಗಳು ನಡೆದಿರುವುದು ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next