ಕನಕಪುರ: ಮಾಸ್ಕ್ ಹಾಕದೇ ರಸ್ತೆಗಿಳಿದವಾಹನ ಸವಾರರು ಮತ್ತು ಪಾದಚಾರಿಗಳಿಗೆ ನಗರಸಭೆ ಅಧಿಕಾರಿಗಳುಸೋಮವಾರ ದಂಡಾಸ್ತ್ರ ಪ್ರಯೋಗಿಸಿ ಎಚ್ಚರಿಕೆ ನೀಡಿದರು.
ನಗರದ ನಗರಸಭೆ ಕಚೇರಿ ಮುಂಭಾಗ ಸುಡುವ ಬಿಸಿಲನ್ನೂ ಲೆಕ್ಕಿಸದೆಬೀದಿಗಿಳಿದ ನಗರಸಭೆ ಅಧಿಕಾರಿಗಳುಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿದ್ದಸಾರ್ವಜನಿಕರನ್ನು ಅಡ್ಡಗಟ್ಟಿ ದಂಡ ವಸೂಲಿ ಮಾಡಿದರು.
ಕೋವಿಡ್ ಕಳೆದ ಮಾರ್ಚ್ ತಿಂಗಳವರೆಗೂ ಬಹುತೇಕ ನಿಯಂತ್ರಣದಲ್ಲಿತ್ತು. ಕೋವಿಡ್ ಇಲ್ಲವೇ ಇಲ್ಲವೇನೋ ಎಂಬಂತೆ ಸಾರ್ವಜನಿಕರು ಮಾಸ್ಕ್ಸ್ಯಾನಿಟೈಸರ್, ಸಾಮಾಜಿಕ ಅಂತರಎಲ್ಲವನ್ನೂ ಮರೆತು ಓಡಾಡಲು ಆರಂಭಿಸಿದರು. ಬಹುತೇಕ ಕೋವಿಡ್ಪ್ರಕರಣ ತಾಲೂಕು ಮತ್ತು ಜಿಲ್ಲೆಗಳಲ್ಲಿಶೂನ್ಯ ಹಂತಕ್ಕೆ ತಲುಪಿತ್ತು. ಆದರೆ,ಎರಡನೇ ಅಲೆ ಮತ್ತೆ ಬಿರುಗಾಳಿಯಂತೆ ಎದ್ದಿದೆ. ತಾಲೂಕಿನಲ್ಲಿ 15 ದಿನಗಳಿಂದಈಚೆಗೆ ಪ್ರತಿದಿನ 20 ಪ್ರಕರಣದಾಖಲಾಗುತ್ತಿವೆ. ಎರಡನೇ ಅಲೆ ಎದ್ದಿರುವ ಕೊರೊನಾ ನಿಯಂತ್ರಣಕ್ಕೆ ಮತ್ತೆ ಸಜ್ಜಾಗಿರುವ ಸರ್ಕಾರ ಮರುಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಆದರೆ, ಸಾರ್ವಜನಿಕರು ಮಾತ್ರ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಎಲ್ಲವನ್ನೂ ಮರೆತು ಎಂದಿನಂತೆಓಡಾಡಲು ಆರಂಭಿಸಿದ್ದಾರೆ.ಸರ್ಕಾರದ ಮಾರ್ಗಸೂಚಿ ಮತ್ತು ಕೋವಿಡ್ ಬಗ್ಗೆ ಎಚ್ಚರಿಕೆ ನೀಡಲುನಗರಸಭೆ ಅಧಿಕಾರಿಗಳು, ಕಚೇರಿಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿಮಾಸ್ಕ್ ಹಾಕದ ವಾಹನ ಸವಾರರುಮತ್ತು ಪಾದಚಾರಿಗಳನ್ನು ಅಡ್ಡಗಟ್ಟಿಸ್ಥಳದಲ್ಲೇ ನೂರು ರೂಪಾಯಿ ದಂಡ ವಸೂಲಿ ಮಾಡಿದರು. ಎರಡು ತಾಸಿನಲ್ಲೇ10,800 ರೂ. ದಂಡ ವಸೂಲಿ ಮಾಡಿದ್ದಾರೆ.ಮಾಸ್ಕ್ ಹಾಕದೆ ದಂಡ ಕಟ್ಟಿದ ಬಹುತೇಕಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.