ಹರಪನಹಳ್ಳಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಬಿ90) ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಎರಡು ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಒಟ್ಟು 12 ನಿರ್ದೇಶಕರ ಸ್ಥಾನಗಳ ಪೈಕಿ 4 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ, 19 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಒಟ್ಟು 1018 ಮತದಾರರಿದ್ದು 2 ಗಂಟೆ ವೇಳೆಗೆ ಸುಮಾರು 50% ಮತದಾನ ನಡೆದಿದೆ, ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಹುರುಪಿನಿಂದ ಮತ ಚಲಾಯಿಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿ 8 ಜನರ 2 ಗುಂಪುಗಳು ಪ್ರತಿಸ್ಪರ್ಧಿಗಳಾಗಿದ್ದು, 2 ಗುಂಪುಗಳು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಎಂದು ಘೋಷಿಸಿಕೊಂಡಿದ್ದಾರೆ. ಉಳಿದ ಮೂವರು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದಾರೆ.
ಉದ್ದಾರ ರಂಗಪ್ಪ, ಉಮಾಮಹೇಶ್ವರಿ, ಕಳ್ಳಿಬಾವಿ ಶಫಿವುಲ್ಲಾ, ಗಾಟಿನ ಬಸವರಾಜ, ಎಚ್.ದೇವೇಂದ್ರಪ್ಪ, ನಾಲ್ಬಂದಿ ನಿಸಾರ, ಕೆ.ಮಹಬೂಬ್ ಬಾಷಾ, ಎಂ.ಸುಮಗಳಾ ಇವರು ಕಾಂಗ್ರೆಸ್ ನ ಒಂದು ಗುಂಪಿನ ಅಭ್ಯರ್ಥಿಗಳಾಗಿದ್ದಾರೆ.
ಇನ್ನೊಂದು ಗುಂಪಿನಲ್ಲಿ ಟಿ.ಅಹಮ್ಮದ್ ಹುಸೇನ್, ಚಿಕ್ಕೇರಿ ವೆಂಕಟೇಶ, ಜೋಗಿನ ಜಯಶ್ರೀ, ತಿಮ್ಮಾಲಪುರದ ರವಿಶಂಕರ, ಪೂಜಾರ ನಾಗಪ್ಪ, ಬಾವಿಕಟ್ಟಿ ಭರಮಪ್ಪ, ಜಿ.ಸುಜಾತ, ಜಿ.ಹನುಮಂತಪ್ಪ ಗುರುತಿಸಿಕೊಂಡಿದ್ದಾರೆ ಸಂಜೆ 4 ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದ್ದು, 4 ನಂತರ ಎಣಿಕೆ ಪ್ರಕ್ರಿಯೆ ಶುರುವಾಗಲಿದೆ ಯಾವ ಗುಂಪು ಮೇಲುಗೈ ಸಾಧಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ.