Advertisement

ಕಲಾಂ ನಿವಾಸದಲ್ಲಿ ಪ್ರಣವ್‌ಗೆ ವಾಸ್ತವ್ಯ ನಿಗದಿ

11:25 AM Apr 27, 2017 | Team Udayavani |

ಹೊಸದಿಲ್ಲಿ: ಹಾಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಧಿಕಾರದ ಅವಧಿ ಜುಲೈಯಲ್ಲಿ ಮುಕ್ತಾಯವಾಗಲಿದೆ. ಬಳಿಕ ಅವರ ವಾಸ್ತವ್ಯಕ್ಕಾಗಿ ಕೇಂದ್ರ ಸರಕಾರ ಮನೆಯನ್ನು ಈಗಾಗಲೇ ನಿಗದಿ ಮಾಡಿದೆ. ರಾಷ್ಟ್ರ ರಾಜಧಾನಿಯ ನಂ 10 ರಾಜಾಜಿ ಮಾರ್ಗ್‌ನಲ್ಲಿರುವ  ನಿವಾಸದಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಮಾಜಿ ರಾಷ್ಟ್ರಪತಿ ದಿ| ಅಬ್ದುಲ್‌ ಕಲಾಂ ಅವರು ಈ ನಿವಾಸದಲ್ಲಿದ್ದರು. ಇದೀಗ ಹಾಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗಾಗಿ ಕೆಲವೊಂದು ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next