Advertisement
ನರೇಂದ್ರ ಮೋದಿ2014ರ ಲೋಕಸಭಾ ಚುನಾವಣೆಗೂ ಮುನ್ನ ಎನ್‌ಡಿಎ, ನರೇಂದ್ರ ಮೋದಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿತು. ಅಬ್ ಕೀ ಬಾರ್ ಮೋದಿ ಸರ್ಕಾರ್ ಎಂಬ ಘೋಷಣೆ ಜನಪ್ರಿಯವಾಯಿತು. ಸೋಷಿಯಲ್ ನೆಟರ್ಕಿಂಗ್ ಸೈಟ್‌ಗಳಲ್ಲಿನ ಅದ್ಭುತ ಪ್ರಯೋಗಗಳ ಮೂಲಕ ಮೋದಿ ಅಲೆ ದೇಶಾದ್ಯಂತ ಹರಡಿತು. ಈ ಐದು ವರ್ಷಗಳಲ್ಲಿ ಅನೇಕ ಚುನಾವಣೆಗಳು ನಡೆದು ಹೋಗಿವೆ. ಈಗಲೂ ನರೇಂದ್ರ ಮೋದಿಯವರೇ ಎನ್‌ಡಿಎದ ಸ್ಟಾರ್ ಪ್ರಚಾರಕರು. ಲೋಕಸಭಾ ಚುನಾವಣೆಯ ಕೇಂದ್ರಬಿಂದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾರನ್ನು ಉತ್ತರಪ್ರದೇಶದ ಪ್ರಭಾರಿಯನ್ನಾಗಿಸಲಾಗಿತ್ತು. ಅವರ ನೇತೃತ್ವದಲ್ಲಿ ಎನ್‌ಡಿಎ ಉ.ಪ್ರದೇಶದ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆದ್ದಿತು. ಅದೇ ವರ್ಷವೇ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾದರು. ಈ 5 ವರ್ಷಗಳಲ್ಲಿ 27 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅವುಗಳಲ್ಲಿ ಬಿಜೆಪಿ 14ರಲ್ಲಿ ಗೆದ್ದರೆ, 13ರಲ್ಲಿ ಸೋಲು ಕಂಡಿತು. ಈ ಬಾರಿ ಚುನಾವಣಾ ಪ್ರಚಾರಗಳಲ್ಲಿ ಅಮಿತ್ ಶಾ ಹಿಂದಿಗಿಂತ ಹೆಚ್ಚು ತೀವ್ರವಾಗಿ ವಿಪಕ್ಷಗಳ ಮೇಲೆ ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ
ಬಿಜೆಪಿ ನೇತೃತ್ವದ ಎನ್‌ಡಿಎದ ವಿರೋಧದಲ್ಲಿ ಒಂದಾಗಿರುವ ಮಹಾಘಟಬಂಧನದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಮುಖ ಚಹರೆಯಾಗಿ ಹೊರಹೊಮ್ಮಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಹೊರತಾಗಿಯೂ ತೃಣಮೂಲ ಕಾಂಗ್ರೆಸ್ ಪಕ್ಷ 42 ಸ್ಥಾನಗಳಲ್ಲಿ 34 ಸೀಟುಗಳಲ್ಲಿ ಗೆದ್ದಿತ್ತು. ಜನವರಿ 18ರಂದು ಕೋಲ್ಕತಾದಲ್ಲಿ ವಿಪಕ್ಷಗಳ ದೊಡ್ಡ ರ್ಯಾಲಿಯನ್ನು ಆಯೋಜಿಸಿದ ಮಮತಾ ಬ್ಯಾನರ್ಜಿ 15ಕ್ಕೂ ಹೆಚ್ಚು ರಾಜಕೀಯ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದಿದ್ದರು.
Related Articles
ಕಾಂಗ್ರೆಸ್‌ನ ನವ ಸ್ಟಾರ್ ಪ್ರಚಾರಕಿಯಾಗಿರುವ ಪ್ರಿಯಾಂಗಾ ವಾದ್ರಾ ಇದೇ ವರ್ಷದ ಜನವರಿ 23ರಂದು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಅವರಿಗೆ ಉತ್ತರಪ್ರದೇಶದ ಪೂರ್ವ ಭಾಗಗಳಲ್ಲಿನ 41 ಸ್ಥಾನಗಳ ಜವಾಬ್ದಾರಿ ವಹಿಸಲಾಗಿದೆ. ಮೊದಲೆಲ್ಲ ಪ್ರಿಯಾಂಕಾ ಕೇವಲ ಅಮೇಠಿ ಮತ್ತು ರಾಯಬರೇಲಿಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಪರವಾಗಿ ಪ್ರಚಾರ ಮಾಡುತ್ತಿದ್ದರು. ಈಗ ಅವರು ಪೂರ್ವ ಉತ್ತರಪ್ರದೇಶವಷ್ಟೇ ಅಲ್ಲದೇ, ದೇಶದ ಇತರೆ ರಾಜ್ಯಗಳಲ್ಲೂ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ.
Advertisement
ನಿತೀಶ್ ಕುಮಾರ್40 ಲೋಕಸಭಾ ಸ್ಥಾನಗಳಿರುವ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹುದೊಡ್ಡ ಚಹರೆಯಾಗಿದ್ದಾರೆ. ಬಿಜೆಪಿಯ ಜೊತೆಗೆ 50-50 ಫಾರ್ಮುಲಾದ ಆಧಾರದಲ್ಲಿ ಕಣಕ್ಕಿಳಿಯಲಿದೆ ಅವರ ಪಕ್ಷ. ಎನ್‌ಡಿಎದ ಹಿರಿಯ ನಾಯಕರಾಗಿರುವ ನಿತೀಶ್ ಕುಮಾರ್, ಬಿಹಾರದ ಸ್ಟಾರ್ ಪ್ರಚಾರಕರೂ ಹೌದು. ಮುಖ್ಯಮಂತ್ರಿಯಾಗಿ ಇದು ಅವರ ಮೂರನೇ ಅವಧಿ. ವರ್ಷಗಳಿಂದ ಅವರು ಬಿಹಾರದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಈ ಬಾರಿ ಎನ್‌ಡಿಎದಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ. ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥರು, ಪ್ರಧಾನಿ ಮೋದಿ ನಂತರ ಬಿಜೆಪಿಯ ಪ್ರಭಾವಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಫಯರ್‌ಬ್ರಾಂಡ್ ಹಿಂದುತ್ವವಾದಿಯಾಗಿಯೂ ಗುರುತಿಸಿಕೊಂಡಿರುವ ಆದಿತ್ಯನಾಥ್‌ರು, ಬಿಗಿ ಆಡಳಿತಗಾರ ಎಂದೂ ಮೆಚ್ಚುಗೆ ಗಳಿಸಿದವರು. ಕಳೆದ ವರ್ಷ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಯೋಗಿ ಯವರಿಗೆ ತಮ್ಮದೇ ಕ್ಷೇತ್ರದಲ್ಲೇ ಬಿಜೆಪಿಯನ್ನು ರಕ್ಷಿಸಲಾಗಲಿಲ್ಲ. ಆದರೂ ಬಿಜೆಪಿಗೆ ಆದಿತ್ಯನಾಥರ ಮೇಲೆ ಭರವಸೆಯೇನೂ ಕುಗ್ಗಿಲ್ಲ. ಈ ಬಾರಿ ಬಿಜೆಪಿ ಪ್ರಚಾರದಲ್ಲಿ ಅವರ ಭೂಮಿಕೆ ಮುಖ್ಯವಾಗಲಿದೆ. ಎನ್. ಚಂದ್ರಬಾಬು ನಾಯ್ಡು
ತೆಲುಗು ದೇಶಂ ಪಕ್ಷದ ಪ್ರಮುಖ ಎನ್. ಚಂದ್ರಬಾಬು ನಾಯ್ಡು, ಪ್ರಸಕ್ತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. 25 ಲೋಕಸಭಾ ಸ್ಥಾನಗಳಿರುವ ಆಂಧ್ರಪ್ರದೇಶದಲ್ಲಿ ಅವರ ಪ್ರಮುಖ ಪಾತ್ರ ವಹಿಸಲಿದ್ದಾರೆ. ತೆಲುಗು ದೇಶಂ ಪಾರ್ಟಿ ಮೊದಲು ಎನ್‌ಡಿಎದ ಭಾಗವಾಗಿತ್ತು. ಆದರೆ ವಿಶೇಷ ರಾಜ್ಯದ ಮಾನ್ಯತೆಯ ವಿಷಯದಲ್ಲಿ ನಾಯ್ಡು ಎನ್‌ಡಿಎದಿಂದ ದೂರವಾದರು. ಈಗ ಅವರೂ ಕೂಡ ಮಹಾಘಟಬಂಧನದ ಬಹುದೊಡ್ಡ ಚಹರೆಯಾಗಿದ್ದಾರೆ. ರಾಹುಲ್ ಗಾಂಧಿ
ಡಿಸೆಂಬರ್ 2017ರಲ್ಲಿ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಮುಖ್ಯಸ್ಥೆಯ ಸ್ಥಾನದಿಂದ ಕೆಳಕ್ಕಿಳಿದದ್ದೇ, ರಾಹುಲ್ ಅಧ್ಯಕ್ಷರಾದರು. ಅವರು ತಮ್ಮ ಮೊದಲ ಭಾಷಣದಲ್ಲಿ “ನಾವು ಕಾಂಗ್ರೆಸ್ ಅನ್ನು ಹಿಂದೂಸ್ತಾನದ ಗ್ರಾಂಡ್ ಓಲ್ಡ್ ಮತ್ತು ಎಂಗ್ ಪಕ್ಷವನ್ನಾಗಿಸುತ್ತೇವೆ’ ಎಂದಿದ್ದರು. ಅಧ್ಯಕ್ಷರಾದ ನಂತರ ರಾಹುಲ್ ಗಾಂಧಿಗೆ 2018ರಲ್ಲಿ ಕೊನೆಗೂ ಯಶಸ್ಸು ಸಿಕ್ಕಿದ್ದು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಿದಾಗ. ಮಾಯಾವತಿ
ಬಹುಜನ ಸಮಾಜವಾದಿ ಪಾರ್ಟಿಯ ಅಧ್ಯಕ್ಷೆ ಮಾಯಾವತಿಯವರು ಒಂದೊಮ್ಮೆ ಉತ್ತರಪ್ರದೇಶದ ನೊಗ ಹೊತ್ತಿದ್ದವರು. ಪರಿಶಿಷ್ಟ ಜಾತಿಗೆ ಸೇರಿದ ಮಾಯಾವತಿಯವರ ಬತ್ತಳಿಕೆಯಲ್ಲಿ ಬಹುದೊಡ್ಡ ಮತಬ್ಯಾಂಕ್ ಕೂಡ ಇದೆ. ಆದಾಗ್ಯೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲೂ ಅವರ ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪೈಪೋಟಿ ತೀವ್ರವಾಗಿ ಇರಲಿದೆ ಎನ್ನಲಾಗುತ್ತದೆ. ಎಸ್‌ಪಿಯೊಂದಿಗಿನ ಮೈತ್ರಿಯ ನಂತರ ಬಿಎಸ್‌ಪಿ ಗಟ್ಟಿಯಾಗಿರುವಂತೆ ಕಾಣಿಸುತ್ತಿದೆ. ನವೀನ್ ಪಟ್ನಾಯಕ್
ಬಿಜು ಜನತಾದಳದ ಪ್ರಮುಖ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಡಿಶಾದ ಜನಪ್ರಿಯ ನಾಯಕ. ಒಡಿಶಾದ ವಿಕಾಸವೇ ತನ್ನ ಅಜೆಂಡಾ ಎಂದು ಹೇಳುವ ಅವರ ಪಕ್ಷವು, ಎನ್‌ಡಿಎ ಮತ್ತು ಮಹಾಘಟಬಂಧನದಿಂದ ದೂರವೇ ಉಳಿದಿದೆ. ನವೀನ್ ಅವರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅರವಿಂದ್ ಕೇಜ್ರಿವಾಲ್
ಕಳೆದ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಮೋದಿಯವರ ಎದುರಾಳಿಯಾಗಿ ಸ್ಪರ್ಧಿಸಿ, ರಾಷ್ಟ್ರನಾಯಕನಾಗುವ ಕನಸು ಜಾಹೀರುಗೊಳಿಸಿದ್ದರು ಕೇಜ್ರಿವಾಲ್. ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ವಿಧಾನಸಭಾ ಚುನಾವಣೆಗಳಲ್ಲಿ ಸಕ್ಷಮವಾಗಿ ಎದುರಿಸಿ 2ನೇ ಬಾರಿ ದೆಹಲಿಯ ಸಿಎಂ ಆದರು. ಆದರೆ ಈ ಬಾರಿ ಅವರು ತಮ್ಮ ಧ್ವನಿಯನ್ನು ತೀರಾ ತಗ್ಗಿಸಿದ್ದಾರೆ. ರಾಜ್ಯ ರಾಜಕಾರಣ ದತ್ತ ಹೆಚ್ಚು ಚಿತ್ತ ನೆಟ್ಟಿದ್ದಾರೆ. ಇಂದಿನ ಕೋಟ್
ನಿರಂತರವಾಗಿ ಮತ್ತು ಜೋರಾಗಿ ಸುಳ್ಳು ಹೇಳುತ್ತಾ ಹೋದರೆ, ಆ ಸುಳ್ಳು ಸತ್ಯವಾಗಿಬಿಡುತ್ತದೆ ಎಂದು ರಾಹುಲ್ ಗಾಂಧಿ ಭಾವಿಸುತ್ತಾರೆ.
ಪ್ರಕಾಶ್ ಜಾವಡೇಕರ್ ಬಿಜೆಪಿ ದೇಶವನ್ನು ಎರಡು ಭಾಗಗಳಾಗಿ ವಿಭಜಿಸುತ್ತಿದೆ. ಒಂದು, ಎಲ್ಲಾ ಲಾಭ ಪಡೆಯುವ “ಸೂಟ್ ಬೂಟ್’ ವಲಯ. ಇನ್ನೊಂದು ನೋಟ್‌ಬಂದಿ, ಗಬ್ಬರ್‌ಸಿಂಗ್ ತೆರಿಗೆಯೆನ್ನು ಎದುರಿಸುವ ರೈತರು, ಕಾರ್ಮಿಕರ ವಲಯ.
ರಾಹುಲ್ ಗಾಂಧಿ 10 ಲಕ್ಷ
ಈ ಬಾರಿ ದೇಶಾದ್ಯಂತ 10 ಲಕ್ಷ ಮತದಾನ ಕೇಂದ್ರಗಳು ಕಾರ್ಯಾಚರಿಸಲಿವೆ.