Advertisement

GST: ಸಂಗ್ರಹದಲ್ಲಿ ಶೇ.10 ಏರಿಕೆ- ಸೆಪ್ಟೆಂಬರ್‌ನಲ್ಲಿ 1.62 ಲಕ್ಷ ರೂ. ಸಂಗ್ರಹ

10:14 PM Oct 01, 2023 | Pranav MS |

ನವದೆಹಲಿ: ಸೆಪ್ಟೆಂಬರ್‌ ತಿಂಗಳಲ್ಲಿ 1.62 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಳವಾಗಿದೆ. ಜಿಎಸ್‌ಟಿ ಸಂಗ್ರಹವು 1.60 ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು 4ನೇ ಬಾರಿ ಎಂದು ಕೇಂದ್ರ ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

Advertisement

ಸೆಪ್ಟೆಂಬರ್‌ನಲ್ಲಿ ಒಟ್ಟಾರೆ ಜಿಎಸ್‌ಟಿ ಆದಾಯವು 1,62,712 ಕೋಟಿ ರೂ.ಗಳು. ಈ ಪೈಕಿ 29,818 ಕೋಟಿ ರೂ. ಕೇಂದ್ರ ಜಿಎಸ್‌ಟಿಯಾದರೆ, 37,657 ಕೋಟಿ ರೂ. ರಾಜ್ಯ ಜಿಎಸ್‌ಟಿ ಮತ್ತು 83,623 ಕೋಟಿ ರೂ. ಸಮಗ್ರ ಜಿಎಸ್‌ಟಿಯಾಗಿದೆ. ಇದರ ಜೊತೆಗೆ 11,613 ಕೋಟಿ ರೂ. ಸೆಸ್‌ ಕೂಡ ಸಂಗ್ರಹವಾಗಿದೆ ಎಂದೂ ಇಲಾಖೆ ತಿಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next