Advertisement

Mumbai-Goa highway; ಎಸ್‌ಟಿ ಬಸ್‌ -ಟ್ರಕ್‌ ಡಿಕ್ಕಿ; ಓರ್ವ ಸಾವು, 28 ಮಂದಿ ಗಾಯ

06:33 PM Sep 17, 2023 | Team Udayavani |

ಥಾಣೆ: ರಾಜ್ಯ ಸಾರಿಗೆ (ಎಸ್‌ಟಿ) ಬಸ್‌ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬಯಿ-ಗೋವಾ ಹೆದ್ದಾರಿಯಲ್ಲಿ ರವಿವಾರ ವ್ಯಕ್ತಿಯೊಬ್ಬರು ಮೃತಪಟ್ಟು 28 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ತಾಲೇಗಾಂವ್‌ ಗ್ರಾಮದ ಮಂಗಾವ್‌ ಬಳಿ ಈ ಘಟನೆ ನಡೆದಿದೆ ಎಂದು ರಾಯಗಢ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಈ ದುರ್ಘ‌ಟನೆಯಲ್ಲಿ ಪ್ರಯಾಣಿಕ ಡೊಂಬಿವಲಿ ನಿವಾಸಿ ವಿನೋದ್‌ ತರಳೆ (38) ಮೃತಪಟ್ಟರೆ, ಅವರ ಪತ್ನಿ ವೈಷ್ಣವಿ ಮತ್ತು 15 ವರ್ಷದ ಮಗ ಅಥರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಬತ್ತು ಮಹಿಳೆಯರು, ಮೂವರು ಬಾಲಕಿಯರು ಸೇರಿದಂತೆ 28 ಪ್ರಯಾಣಿಕರು ಮತ್ತು ಐವರು ಯುವಕರು ಗಾಯಗೊಂಡಿದ್ದಾರೆ ಎಂದು ಹೇಳಿದರು.ಘಟನೆಯ ನಂತರ ಎಂಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರನ್ನುಬೇರೆ ಬಸ್‌ ವ್ಯವಸ್ಥೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next