Advertisement

1.68 ಲಕ್ಷ ರೂ. ಅಕ್ರಮ ಮದ್ಯ ವಶ

03:09 PM Feb 24, 2022 | Team Udayavani |

ರಾಯಚೂರು: ಆಂಧ್ರ, ತೆಲಂಗಾಣಕ್ಕೆ ಮಂಗಳವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ 1.68 ಲಕ್ಷ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಿರುವ ಯರಗೇರಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಮಹಿಂದ್ರ ಸ್ಕಾರ್ಪಿಯೋ ವಾಹನದಲ್ಲಿ ಯರಮರಸ್‌ ಕ್ಯಾಂಪ್‌ ಮೂಲದ ವೆಂಕಟೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ವಾಹನ ಸಮೇತ 432 ಲೀಟರ್‌ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್‌ಪಿ, ಡಿಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ಅಮರೇಶ ಜಿ.ಕೆ, ಮಲ್ಲಪ್ಪ, ಮಲ್ಲೇಶ, ಸಂತೋಷ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next