Advertisement

ಕನ್ನಡ ಅಭಿಮಾನದ ಭಾಷೆಯಾಗಲಿ

06:01 PM Nov 05, 2021 | Team Udayavani |

ಸಿರುಗುಪ್ಪ: ಕನ್ನಡ ನಮ್ಮೆಲ್ಲರ ಭಾಷೆಯಾದರೆಮಾತ್ರ ಅದು ಉನ್ನತಮಟ್ಟಕ್ಕೇರಲು ಸಾಧ್ಯಎಂದು ಉಪನ್ಯಾಸಕ ಎಂ. ಪಂಪಾಪತಿಹೇಳಿದರು. ನಗರದ ಕಸಾಪ ಕಚೇರಿಯಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ನಮ್ಮ ಭಾಷೆ ಬಗ್ಗೆ ನಮಗೆ ಅಭಿಮಾನ ಇದ್ದರೆ ಮಾತ್ರ ಭಾಷೆ ಬೆಳೆಯಲು ಸಾಧ್ಯ.

Advertisement

ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗನುತಮ್ಮ ಮನೆ ಹಬ್ಬದಂತೆ ಆಚರಿಸಬೇಕುಎಂದರು. ಕಸಾಪ ತಾಲೂಕು ಅಧ್ಯಕ್ಷಎಸ್‌.ಎಂ.ನಾಗರಾಜಸ್ವಾಮಿ ಮಾತನಾಡಿ,ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆತರಬೇಕು. ಕಲ್ಯಾಣ ಕರ್ನಾಟಕ ಭಾಗದಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆಸಿಗಬೇಕು.

ಬ್ಯಾಂಕ್‌ ನೇಮಕಾತಿಗಳಲ್ಲಿ ಕೇಂದ್ರಸರ್ಕಾರ ಕನ್ನಡದಲ್ಲಿ ಪರೀಕ್ಷೆ ನಡೆಸಬೇಕು. ರೈಲ್ವೆಇಲಾಖೆಯಲ್ಲಿ ಪತ್ರ ವ್ಯವಹಾರ ಕನ್ನಡದಲ್ಲಿಜಾರಿಗೆ ಬರಬೇಕು. ಕರ್ನಾಟಕದಲ್ಲಿ ಕನ್ನಡನಾಮಫಲಕಗಳು ಕಡ್ಡಾಯಗೊಳಿಸಬೇಕೆಂದುತಿಳಿಸಿದರು. ರಂಗಭೂಮಿ ಕಲಾವಿದಬೀರಹಳ್ಳಿ ರಾಮರೆಡ್ಡಿ, ಜಾನಪದ ಸಾಹಿತಿ ಡಾ|ಚೇತನ್‌ಕುಮಾರ್‌, ಕನ್ನಡಪರ ಸಂಘಟನೆ ಹೋರಾಟಗಾರ ಕಂಬಳಿ ಮಲ್ಲಿಕಾರ್ಜುನರನ್ನು ಸನ್ಮಾನಿಸಲಾಯಿತು.

ತಾಲೂಕು ಕಸಾಪ ಗೌರವಕಾರ್ಯದರ್ಶಿಗಳಾದ ಎಂ. ಬಸವನಗೌಡ,ಕೆ.ಎಂ. ಚಂದ್ರಕಾಂತ, ವಿನಯಕುಯಮಾರ್‌,ನಾಮ ಜಗದೀಶ, ಎಸ್‌.ರμ, ಮರೇಗೌಡ,ಬಸವರಾಜಯ್ಯ, ವಿಜಯರಂಗಾರೆಡ್ಡಿ,ತೋಟಗಾರಿಕೆ ಇಲಾಖೆ ಅ ಧಿಕಾರಿ ವಿಶ್ವನಾಥ,ಗೌತಮಬುದ್ಧ ಟ್ರಸ್ಟ್‌ನ ತಾಲೂಕು ಅಧ್ಯಕ್ಷಗಿರೀಶ, ಕಲಾವಿದ ದೇಶನೂರು ನಾಗರಾಜ,ಮುಖಂಡ ಮಲ್ಲಿಕಾರ್ಜುನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next