Advertisement

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

06:17 PM Apr 11, 2020 | Mithun PG |

ಕೋವಿಡ್-19  ಸೋಂಕು ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದು ಅನೇಕ ದೇಶಗಳು ಲಾಕ್  ಡೌನ್ ಆಗಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ.  ಶಾಲಾ-ಕಾಲೇಜು ಮುಚ್ಚಲ್ಪಟ್ಟಿದ್ದರೆ,  ಹಲವು ಕಂಪೆನಿಗಳು ಹಣಕಾಸು ಹಿಂಜರಿತದ ದೆಸೆಯಿಂದ ಕಚೇರಿಯ ಖರ್ಚು ಕಡಿಮೆ ಮಾಡುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ.

Advertisement

ಈ ಸಂದರ್ಭದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಾಠ ಮಾಡಲು ಜೂಮ್ ಅಪ್ಲಿಕೇಶನ್​ ನ ಮೊರೆ ಹೋಗಿದ್ದಾರೆ. ವರ್ಕ್ ಫ್ರಮ್ ಹೋಮ್ ಮಾಡುವ ನೌಕಕರು ಕೂಡ ಈ ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಈ ಮೂಲಕ ತಮ್ಮ ಆಫೀಸು ಕೆಲಸವನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ಆದ ಬಳಿಕ ಜೂಮ್ ಆ್ಯಪ್‌ ಹೆಚ್ಚು ಜನಪ್ರಿಯವಾಗಿದ್ದು, ಮಾಹಿತಿಗಳ ಪ್ರಕಾರ 50 ಮಿಲಿಯನ್​ಗೂ ಹೆಚ್ಚಿನ ಜನರು ಈ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್​ ಮೊರೆ ಹೋಗುತ್ತಿದ್ದಾರೆ.

ಹಾಗಾದರೇ ಏನಿದು ಜೂಮ್ ಆ್ಯಪ್, ಇದರ ವಿಶೇಷತೆಗಳೇನು? ಕೆಲವೇ ದಿನಗಳಲ್ಲಿ ಹೇಗೆ ಪ್ರಚಲಿತವಾಯಿತು… ? 

ಲಾಕ್ ಡೌನ್ ಅವಧಿಯಲ್ಲಿ ಭಾರೀ ಸದ್ದು ಮಾಡಿದ ಆ್ಯಪ್ ಎಂದರೆ ಜೂಮ್. ಇದು ಅನ್ ಲೈನ್ ವಿಡಿಯೋ ಕಾನ್ಪರೆನ್ಸಿಂಗ್ ವ್ಯವಸ್ಥೆಯನ್ನು ಹೊಂದಿದೆ. ಜಾಗತಿಕವಾಗಿ ಲಾಕ್ ಡೌನ್ ಘೋಷಣೆಯಾದ ತಕ್ಷಣ  ಮೀಟಿಂಗ್ ಪ್ಲ್ಯಾಟ್ ಫಾರ್ಮ್ ಗೆ ಭರ್ಜರಿ ಬೇಡಿಕೆ ಬಂದ ಪರಿಣಾಮ, ಕಳೆದ ತಿಂಗಳಲ್ಲಿ ಈ ಆ್ಯಪ್ ವಾಟ್ಸಾಪ್, ಟಿಕ್ ಟಾಕ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಯೂಟ್ಯೂಬ್ ಮುಂತಾದ ಆ್ಯಪ್ ಗಳನ್ನು ಹಿಂದಿಕ್ಕಿ ಭಾರತದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂ.1 ಸ್ಥಾನಕ್ಕೇರಿದೆ.  ಇದಕ್ಕೆ ಪ್ರಧಾನ ಕಾರಣವೆಂದರೆ ಇದರಲ್ಲಿ ಗರಿಷ್ಟ 100 ಮಂದಿ ಏಕಕಾಲಕ್ಕೆ ಆನ್ ಲೈನ್ ಮೂಲಕ ವಿಡಿಯೋ ಕಾಲ್ ಮಾಡಬಹುದು.

ಗೂಗಲ್ ಹ್ಯಾಂಗೌಟ್ಸ್ ಮೀಟ್, ಸ್ಕೈಪ್, ಸ್ಲ್ಯಾಕ್, ಮೈಕ್ರೋಸಾಫ್ಟ್ ಟೀಮ್ಸ್ ಇತ್ಯಾದಿ ಅನೇಕ ವಿಡಿಯೋ ಕಾಲಿಂಗ್ ಆ್ಯಪ್ ಗಳನ್ನು ಈ ಜೂಮ್ ಆ್ಯಪ್  ಹಿಂದಿಕ್ಕಿದೆ. ಇದರಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್‌ಗೆ ಸರಳ ಆಯ್ಕೆಗಳಿದ್ದು, ಕರೆಗೆ ಸೇರಿಕೊಳ್ಳಲು ನೀವು ಲಾಗಿನ್ ಆಗಬೇಕಾದ ಅವಶ್ಯಕತೆಯಿಲ್ಲ. ಕಂಪ್ಯೂಟರ್ ನಲ್ಲೂ ಬಳಸಬಹುದು. ವಿಡಿಯೋ ಕಾಲ್ ವೇಳೆ ನೆಟ್ ವರ್ಕ್ ತೀರಾ ದುರ್ಬಲವಾಗಿದ್ದರೆ ವಿಡಿಯೋ ಬಟನ್ ಆಫ್ ಮಾಡಿ, ಕಡಿಮೆ ಬ್ಯಾಂಡ್ ವಿಡ್ತ್ ಆಗತ್ಯವಿರುವ ಆಡಿಯೋವನ್ನೂ ಕೇಳಬಹುದು. ಹಲವರು ಏಕಕಾಲದಲ್ಲಿ ಭಾಗವಹಿಸಬಹುದಾದ್ದರಿಂದ ನಿಮಗೇನಾದರೂ ಮಾತನಾಡಬೇಕಿದ್ದರೆ ಕೈಯೆತ್ತುವ ಆಯ್ಕೆಯೊಂದು ಗೋಚರಿಸುತ್ತದೆ. ಅದರಲ್ಲೆ ಚಾಟಿಂಗ್ ಮಾಡುವ ಅವಕಾಶವೂ ಇದೆ.

Advertisement

ಬಳಕೆ ಹೇಗೆ?:  ಯಾರೂ ಮೊದಲು ವಿಡಿಯೋ ಕಾಲ್ ಮಾಡುತ್ತಾರೋ ಅವರು ಇತರರೊಂದಿಗೆ ಒಂದು ಐಡಿಯನ್ನು ಹಂಚಿಕೊಂಡಿರುತ್ತಾರೆ. ಅದನ್ನು ನಮೂದಿಸಿದ ತಕ್ಷಣ ಈ ವಿಡಿಯೋ ಕಾಲ್ ಗೆ ಜಾಯಿನ್ ಆಗಬಹುದು. ಉಚಿತ ವ್ಯವಸ್ಥೆಯಲ್ಲಿ 100 ಮಂದಿ ಗರಿಷ್ಟ 40 ನಿಮಿಷದ ಮೀಟಿಂಗ್ ನಲ್ಲಿ ಭಾಗವಹಿಸಬಹುದು. ಹೆಚ್ಚು ಜನರಿದ್ದರೆ ಮತ್ತು ಹೆಚ್ಚು ಸಮಯದ ಅಗತ್ಯವಿದ್ದರೆ ಹಣ ಪಾವತಿಯ ವ್ಯವಸ್ಥೆಯೂ ಇದೆ.

ಆದರೆ ಇತ್ತೀಚೆಗೆ ಜೂಮ್​ ಆ್ಯಪ್​ ಬಗ್ಗೆ ಆಘಾತಕಾರಿ ಸುದ್ದಿಯೊಂದು  ಹೊರಬಿದ್ದಿದೆ. ಈ ಆ್ಯಪ್ ಬಳಕೆದಾರರ ಮಾಹಿತಿಯನ್ನು ಕದಿಯುವುದು ಮಾತ್ರವಲ್ಲದೆ ಜೊತೆಗೆ ಸೆಕ್ಯೂರಿಟಿ ಬಗ್ ಇದರಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಬಳಕೆದಾರರನ ಧ್ವನಿ, ಇ-ಮೇಲ್ ವಿವರ, ಫೋಟೋ, ವಿಡಿಯೋಗಳನ್ನು ನಕಲು ಮಾಡುತ್ತಿದೆ ಎಂದು ಮಾಧ‍್ಯಮದ ವರದಿ ತಿಳಿಸಿದೆ.

ಭಾರತದ ರಾಷ್ಟ್ರೀಯ ಸೈಬರ್ ಭದ್ರತಾ ಏಜೆನ್ಸಿಯಾಗಿರುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ(CERT) ಈ ಬಗ್ಗೆ ಒಂದು ಎಚ್ಚರಿಕೆಯನ್ನೂ ನೀಡಿದೆ. ಸೂಕ್ಷ್ಮವಾದ ಕಚೇರಿ ಮಾಹಿತಿಯೂ ಇಲ್ಲಿ ಸೈಬರ್ ವಂಚಕರ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸುವಂತೆ ತಾಕೀತು ಮಾಡಿವೆ.  ಭದ್ರತಾ ಕಾರಣಕ್ಕಾಗಿ ಬಹುತೇಕ ಟೆಕ್‌ ಕಂಪನಿಗಳು ಜೂಮ್  ಆ್ಯಪ್‌ ಬಳಕೆಯನ್ನು ನಿಷೇಧಿಸಿವೆ. ಜತೆಗೆ ಫೇಸ್‌ಬುಕ್‌ಗೂ ಜೂಮ್ ಆ್ಯಪ್‌ ಡಾಟಾ ಕಳುಹಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಆ್ಯಪ್ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.

-ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next