Advertisement

ಷೇರು ಮಾರಾಟದ ಮೂಲಕ 1.11 ಬಿಲಿಯನ್‌ ಡಾಲರ್‌ ಸಂಗ್ರಹಣೆಗೆ ಮುಂದಾದ ಜೊಮ್ಯಾಟೊ

04:52 PM Apr 29, 2021 | Team Udayavani |

ನವ ದೆಹಲಿ : ಚೀನಾ ಮೂಲದ ಆಂಟ್‌ ಗ್ರೂಪ್‌ ಬೆಂಬಲಿತ  ಸಂಸ್ಥೆ ಜೊಮ್ಯಾಟೊ, ಷೇರು ಮಾರಾಟದ ಮೂಲಕ 8,250 ಕೋಟಿ ರೂ.  (ಸುಮಾರು 1.11 ಬಿಲಿಯನ್‌ ಡಾಲರ್‌) ಸಂಗ್ರಹಿಸಲು ಮುಂದಡಿಯಿಟ್ಟಿದೆ.

Advertisement

ಹೌದು, ಆನ್ ಲೈನ್ ಫುಡ್ ಸರ್ವಿಸ್ ಗೆ ಖ್ಯಾತನಾಮ ಸಂಸ್ಥೆ ಎಂದು ಕರೆಸಿಕೊಂಡಿರುವ ಜೊಮ್ಯಾಟೊ ಷೇರು ಮಾರುಕಟ್ಟೆ ಪ್ರವೇಶಿಸಲು ನಿರ್ಧರಿಸಿದ್ದು, ಐಪಿಒ ಅರ್ಜಿ ಸಲ್ಲಿಸಿಕೆ ಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆ ನೌಕ್ರಿ ಡಾಟ್ ಕಾಮ್‌ ನ ಮೂಲ ಕಂಪನಿಯಾದ ಇನ್ಫೋ ಎಡ್ಜ್, ಜೊಮ್ಯಾಟೊ ಮುಂಬರುವ ಐಪಿಒಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿತ್ತು.

ಓದಿ : ಕೇಂದ್ರದ ಕೋವಿಡ್ ಲಸಿಕಾ ನೀತಿ “ತಾರತಮ್ಯ” : ಕಾಂಗ್ರೆಸ್

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಹಠಾತ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಆನ್‌ ಲೈನ್‌ ಫುಡ್ ಡೆಲಿವರಿಗೆ ಬೇಡಿಕೆ ಹೆಚ್ಚಿದ್ದು, ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಐಪಿಒ ಪ್ರಾರಂಭಿಸಲು ಜೊಮ್ಯಾಟೊ ಮುಂದಾಗಿದೆ.

Advertisement

ಇನ್ನು, ಐಪಿಒದಲ್ಲಿ ಹೊಸದಾಗಿ 7,500 ಕೋಟಿ ರೂ. ಮೊತ್ತದ ಷೇರುಗಳನ್ನು ಜೊಮ್ಯಾಟೊ ಬಿಡುಗಡೆ ಮಾಡಲಿದ್ದು, ಈಗಾಗಲೇ ಇರುವ ಹೂಡಿಕೆದಾರರು 750 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಲಿದ್ದಾರೆ. ಕಂಪನಿಯಲ್ಲಿ ಅತೀ ಹೆಚ್ಚು ಷೇರುಗಳನ್ನು ಹೊಂದಿರುವ ಇನ್ಫೋ ಎಡ್ಜ್‌ 750 ಕೋಟಿ ರೂ. ಮೊತ್ತದ ಷೇರುಗಳನ್ನು ಮಾರಲಿದೆ.

2020 ರಲ್ಲಿ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗಿನ ಅವಧಿಯಲ್ಲಿ ಕಂಪನಿಯ ಆದಾಯವು 1,367.65 ಕೋಟಿ ರೂ. ಆಗಿತ್ತು. 2019-20ರ ಹಣಕಾಸು ವರ್ಷದಲ್ಲಿ ಜೊಮ್ಯಾಟೊ ಆದಾಯ 2,742.74 ಕೋಟಿ ರೂ.ಗಳಾಗಿದ್ದರೆ, 2020-21ರ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಕಂಪನಿಯ ಆದಾಯದಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಓದಿ : ಸಚಿವ ಉಮೇಶ ಕತ್ತಿ ‘ಸಾಯಲಿ’ ಹೇಳಿಕೆ ದುರ್ದೈವದ ಸಂಗತಿ : ಬಿ.ಸಿ.ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next