Advertisement

ಜಿಂದಾಬಾದ್‌ ಕೂಗಿದ ಪಾಕಿಸ್ಥಾನ ಮೀಡಿಯಾ

12:30 AM Feb 28, 2019 | Team Udayavani |

ಉಗ್ರರ ಮೇಲೆ ನಡೆಸಿದ ದಾಳಿಯಲ್ಲಿ ಸಾವುಗಳು ಸಂಭವಿಸಿಲ್ಲ, ಭಾರತ ನಮ್ಮ ಪ್ರತಿರೋಧಕ್ಕೆ ಹೆದರಿ ಓಡಿದೆ ಎಂದು ಮಂಗಳವಾರ ಹೇಳಿದ್ದ ಪಾಕ್‌ ಮಾಧ್ಯಮಗಳ ರಾಗ ಬುಧವಾರವೂ ಬದಲಾಗಲಿಲ್ಲ. ಸಂಪೂರ್ಣ ಪಾಕ್‌ ಪರವಾಗಿ ಸುದ್ದಿ ಪ್ರಕಟಿಸಿ ಸ್ಥಳೀಯ ಸರಕಾರವನ್ನು ಶಾಂತಿ ದೂತನೆಂಬಂತೆ ಹಾಡಿ ಹೊಗಳಿದ್ದವು. ಆದರೆ ಬುಧವಾರ ಬೆಳಗ್ಗೆ ಭಾರತದ ಗಡಿಯತ್ತ ಮುಖ ಮಾಡಿದ ಎಫ್ 16 ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿತು. 

Advertisement

ತಾಂತ್ರಿಕ ಸಮಸ್ಯೆಯ ಕಾರಣ ನೆಲಕ್ಕೆ ಅಪ್ಪಳಿಸಿದ ಭಾರತದ ಮಿಗ್‌ 21 ವಿಮಾನದ ಕುರಿತು ಮೊದಲು ಪಾಕ್‌ ಸೇನೆ ದಾಳಿಗೆ ಉರುಳಿತು ಎನ್ನಲಾಗುತ್ತಿತ್ತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಪಾಕ್‌ ಸೇನೆ ವಕ್ತಾರ ಮಿಗ್‌ 21 ಬಿದ್ದದ್ದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ವಿಚಿತ್ರವೆಂದರೆ ಇದಕ್ಕೆ ಕೆಲವು ಪಾಕ್‌ ಮಾಧ್ಯಮಗಳು ಹಳೆಯ ಯುದ್ಧವೊಂದರ ವಿಡಿಯೋಗಳನ್ನು ಬಿಡುಗಡೆಗೊಳಿಸಿ “ಸರ್‌ಪ್ರೈಸ್‌ ಟು ಇಂಡಿಯಾ’ ಎಂದವು. ಮೊದಲ ದಿನ ಇಮ್ರಾನ್‌ ಖಾನ್‌ ಶಾಂತಿಯ ರಾಯಭಾರಿ ಎಂದಿದ್ದ ಇದೇ ಮಾಧ್ಯಮಗಳು ಬುಧವಾರ ಇಮ್ರಾನ್‌ ಅವರನ್ನು ಪ್ರತೀಕಾರ ಸಲ್ಲಿಸಿದ್ದೀರೆಂದು ಅಭಿನಂದಿಸಿವೆ. ವಿಪರ್ಯಾಸ ಎಂದರೆ ಮಾತುಕತೆಗೆ ಪಾಕ್‌ ಸಿದ್ಧ ಎಂದು ಪ್ರಧಾನಿ ಹೇಳಿದ್ದರೂ ಅದು ಸುದ್ದಿ ಪ್ರಸಾರ ಮಾಡಲಿಲ್ಲ.

ಇನ್ನು ಪಾಕ್‌ನ ಎಫ್16 ಭಾರತದ ದಾಳಿಗೆ ಬಲಿಯಾದ ಸುದ್ದಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದರೂ ಪಾಕ್‌ ಅದು ಎಫ್ 16 ಅಲ್ಲ ಎಂದಿದೆ. ಅಲ್ಲಿನ ಐಎಸ್‌ಐ ದಾಳಿಗೆ ಒಳಗಾದ ಎಫ್ 16ನ ಚಿತ್ರಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ ಎಂದು ಮಾಧ್ಯಮಗಳಿಗೂ ಕಟ್ಟು ನಿಟ್ಟಿನ ಸೂಚನೆ ನೀಡಿದೆ. 

ಪಾಕ್‌ ಟ್ವಿಟ್ 
ಭಾರತ ಮಂಗಳವಾರ ಮತ್ತು ಬುಧವಾರ ನಮಗೆ ಬುದ್ಧಿ ಕಲಿಸಲು ಮುಂದಾಗಿತ್ತು. ಆದರೆ ನಮ್ಮ ವೀರ ಸೈನಿಕರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. 
ಜಹಾಂಗೀರ್‌ ಖಾನ್‌ ತರೀನ್‌

ನಮ್ಮ ವೀರ ಸೈನಿಕರಿಗೆ ದೀರ್ಘಾ ಪ್ರಣಾಮಗಳು. ಭಾರತದ ಯುದ್ಧ ವಿಮಾನವನ್ನು ಹೊಡೆದುರು ಳಿಸಿದ ವಾಯು ಸೇನೆಯ ಹಸನ್‌ ಸಿದ್ದಿಕ್ಕೀ ಅವರಿಗೆ ಅಭಿನಂದನೆಗಳು.
ಖಾಸಿಫ್ ಶಾ

Advertisement

ಪೀಸ್‌ ನಾಟ್‌ ವಾರ್‌, ಪೀಸ್‌ ನಾಟ್‌ ವಾರ್‌, ಪೀಸ್‌ ನಾಟ್‌ವಾರ್‌. ಆದರೆ ಭಾರತಕ್ಕೆ ಶಾಂತಿ ಬೇಡವಾದರೆ ನಾವು ಯಾವುದಕ್ಕೂ ಸಿದ್ಧ.
ಫ‌ರಾನ್‌ ಸಹೀದ್‌

ಇದು ಪಾಕಿಸ್ಥಾನ. ನಾವು ಭಾರತದ ಯೋಧನಿಗೆ ಚಹಾ ನೀಡಿ ಆಶ್ರಹಿಸಿದ್ದೇವೆ. ನಾವು ಮನುಷ್ಯತ್ವ ಹೊಂದಿ ದವರು. ನಾಯಿಗಳಾಗಿ ಬದುಕುತ್ತಿಲ್ಲ. ನಾವು ಮಾನ ವೀಯತೆಯ ನಂಬುವವರು. ನಮ್ಮ ಮೊದಲ ಪ್ರಾಶಸ್ತ್ಯ ಮಾನವೀಯತೆಗೆ ಮಾತ್ರ.
ಎಮ್ಮೆಸ್‌ ಇನ್ಫೋ

Advertisement

Udayavani is now on Telegram. Click here to join our channel and stay updated with the latest news.

Next