ಹೋಬಾರ್ಟ್: ಐಸಿಸಿ ಟಿ20 ವಿಶ್ವಕಪ್ 2022 ಕೂಟದ ಮೊದಲ ಸುತ್ತಿನ ಪಂದ್ಯಗಳು ಮುಗಿದಿದ್ದು, ಜಿಂಬಾಬ್ವೆ ತಂಡವು ಕೊನೆಯ ತಂಡವಾಗಿ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದೆ.
ಇಂದು ನಡೆದ ಸ್ಕಾಟ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಜಿಂಬಾಬ್ವೆಯು ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಗ್ರೂಪ್ ಬಿ ಯಲ್ಲಿ ಅಗ್ರಸ್ಥಾನಿಯಾದ ಜಿಂಬಾಬ್ವೆ ಸೂಪರ್ 12 ಹಂತದಲ್ಲಿ ಭಾರತವಿರುವ ಗುಂಪಿನಲ್ಲಿ ಆಡಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 132 ರನ್ ಮಾತ್ರ ಗಳಿಸಿತು. ಆರಂಭಿಕ ಆಟಗಾರ ಮುನ್ಸೆ 54 ರನ್, ಮೆಕ್ ಲಾಯ್ಡ್ 25 ರನ್ ಗಳಿಸಿದರು. ಆದರೆ ಸ್ಕಾಟ್ಲೆಂಡ್ ಇನ್ನಿಂಗ್ಸ್ ನಲ್ಲಿ ಒಂದೇ ಒಂದು ಸಿಕ್ಸರ್ ದಾಖಲಾಗಲಿಲ್ಲ. ಜಿಂಬಾಬ್ವೆಯ ಚತಾರ ಮತ್ತು ಎನ್ ಗರ್ವಾ ತಲಾ ಎರಡು ವಿಕೆಟ್ ಕಿತ್ತರು.
ಇದನ್ನೂ ಓದಿ:ಕೈಗಡಿಯಾರಗಳಿಂದ ಮಾಡಿದ ಮಿನಿ ಸ್ಕರ್ಟ್, ಕಲ್ಲುಗಳಿಂದ ಬಿಕಿನಿ ಟಾಪ್ – ಉರ್ಫಿ ಹೊಸ ಅವತಾರ
ಗುರಿ ಬೆನ್ನತ್ತಿದ ಜಿಂಬಾಬ್ವೆ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ನಾಯಕ ಇರ್ವಿನ್ ಮತ್ತು ಸಿಕಂದರ್ ರಜಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕ್ರೇಗ್ ಇರ್ವಿನ್ 58 ರನ್ ಗಳಿಸಿದರೆ, ರಜಾ ಕೇವಲ 23 ಎಸೆತಗಳಲ್ಲಿ 40 ರನ್ ಬಾರಿಸಿದರು. ಕೊನೆಗೆ 18.3 ಓವರ್ ಗಳಲ್ಲಿ ಜಿಂಬಾಬ್ವೆ ಐದು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಜಯ ಸಾಧಿಸಿತು.