Advertisement
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯ ರೈತರ ಜಮೀನಿನಲ್ಲಿ ಇರುವ ನೀಲಗಿರಿಯನ್ನು ಸ್ವಯಂ ಪ್ರೇರಿತವಾಗಿ ರೈತರು ತೆರವುಗೊಳಿಸಬೇಕು. ಸರ್ಕಾರಿ ಜಮೀನುಗಳಲ್ಲಿ ಇರುವ ನೀಲಗಿರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಬೇಕು. ಗ್ರಾಪಂಗಳ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
Related Articles
Advertisement
ಪದೋನ್ನತಿ ಇಲ್ಲ: ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 47 ಹುದ್ದೆಗಳಿಗೆ ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್ – 2 ಕಾರ್ಯದರ್ಶಿಗಳಿಗೆ ಪದೋನ್ನತಿ ನೀಡಲು ಆದೇಶ ನೀಡಲಾಗಿತ್ತು. ಇದರ ಜೊತೆಗೆ ನೇರ ನೇಮಕಾತಿಗೆ ಅರ್ಹರಿದ್ದ 16 ಹುದ್ದೆಗಳಿಗೆ ನೇಮಕಾತಿಗೆ ಅವಕಾಶ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಯಾವುದೇ ಹುದ್ದೆಗಳಿಗೆ ಪದೋನ್ನತಿ ಮತ್ತು ನೇಮಕಾತಿ ಮಾಡಬಾರದೆಂದು ಸರಕಾರ ಆದೇಶ ನೀಡಿದೆ. ಪುನಃ 47 ಹುದ್ದೆಗಳ ಪದೋನ್ನತಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಜಿಪಂ ಉಪಾಧ್ಯಕ್ಷ ಯಶೋದಮ್ಮ ಕೃಷ್ಣಮೂರ್ತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ ಅಂಬರೀಶ್ ಸೇರಿದಂತೆ ಜಿಪಂ ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಸ್ತುಕ್ರಮ ಎಚ್ಚರಿಕೆ : ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಡಿಸೆಂಬರ್ ಮೊದಲ ವಾರದಲ್ಲಿ ಗ್ರಾಪಂ ಚುನಾವಣೆಗೆಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಸರ್ಕಾರಿಜಮೀನುಗಳಲ್ಲಿ ಇರುವ ನೀಲಗಿರಿಯನ್ನು ಅರಣ್ಯ ಇಲಾಖೆ ವತಿಯಿಂದ ರವುಗೊಳಿಸಬೇಕು.ನರೇಗಾ ಯೋಜನೆಯಡಿ 56 ಕೋಟಿ ರೂ.ಹಣ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಬೇಕು. ಸಮರ್ಪಕವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ರೀತಿಯ ಹಲವಾರು ಯೋಜನೆಗಳು ಬರುತ್ತದೆ. ನರೇಗಾ ಯೋಜನೆಯಲ್ಲಿಕೋಟ್ಯಂತರ ರೂ. ಬಳಕೆಯಾಗುತ್ತದೆ. ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಕಾಮಗಾರಿಗಳ ಗುಣಮಟ್ಟವನ್ನು ಜನಪ್ರತಿನಿಧಿಗಳು ಪರಿಶೀಲಿಸಬೇಕು. –ಎಸ್.ಮುನಿಸ್ವಾಮಿ, ಸಂಸದ
ರಾಜ್ಯದಲ್ಲಿ ಕೋವಿಡ್‌ಟೆಸ್ಟ್ ಪರೀಕ್ಷೆಯಲ್ಲಿಕೋಲಾರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ರ್ಯಾಪಿಡ್‌ಟೆಸ್ಟ್‌ನಲ್ಲಿಹತ್ತು ನಿಮಿಷದಲ್ಲಿ ಹಾಗೂ ಆರ್‌ಟಿಸಿಪಿಆರ್ ಟೆಸ್ಟ್‌ನಲ್ಲಿ 48 ಗಂಟೆಗಳಲ್ಲಿ ವರದಿಬರುತ್ತದೆ.ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಆದರೆ ಸಂಬಂಧಿಸಿದ ಅಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು.– ಎಂ.ಆರ್.ರವಿಕುಮಾರ್, ಜಿಪಂ ಸಿಇಒ