ತಿರುವನಂತಪುರಂ: ಸದ್ಯ ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿರುವ ನೆರೆಯ ರಾಜ್ಯ ಕೇರಳದಲ್ಲಿ ಇದೀಗ ಮತ್ತೊಂದು ವೈರಸ್ ಪತ್ತೆಯಾಗಿದೆ. ತಿರುವನಂತಪುರಂನ 24 ವರ್ಷದ ಮಹಿಳೆಯಲ್ಲಿ ‘ಜೈಕಾ’ ಎಂಬ ವೈರಸ್ ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಈಕೆಗೆ ಜೂನ್ 28ರಿಂದ ಇದರ ಲಕ್ಷಣಗಳು ಕಂಡುಬಂದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ಜೂನ್ 7ಕ್ಕೆ ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.
ಜೈಕಾದ ಲಕ್ಷಣಗಳು ಡೆಂಗ್ಯೂ ಜ್ವರದಂತೆ ಹೋಲುತ್ತದೆ. ಜ್ವರ, ಕಾಲು ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ. ಈ ಮಹಿಳೆಯ ತಾಯಿಗೂ ವಾರದ ಹಿಂದೆ ಇಂತಹ ಗುಣಲಕ್ಷಣಗಳು ಕಂಡುಬಂದಿತ್ತು.
ಇದನ್ನೂ ಓದಿ:ಸಚಿವರಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಫೇಸ್ ಬುಕ್ ಖಾತೆ ಹ್ಯಾಕ್!
ಇನ್ನೂ 13 ಮಂದಿಗೆ ಈ ಜೈಕಾ ವೈರಸ್ ತಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ನಿಂದ ಅವರುಗಳ ವರದಿಗಾಗಿ ಕಾಯಲಾಗುತ್ತಿದೆ. ನಂತರ ಖಚಿತವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೇರಳದಲ್ಲಿ ಗುರುವಾರ 13,772 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಆ ರಾಜ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ 1,10,136ಕ್ಕೆ ಏರಿಕೆಯಾಗಿದೆ.