Advertisement

ಝಣ ಝಣ ಕಾಂಚಾಣ: ಹಣ ಮುಖ್ಯವೋ? ದೇಶ ಮುಖ್ಯವೋ?

10:10 AM Apr 28, 2017 | |

ಮಗನ ಹೊಸ ಚಿತ್ರ ಸೆಟ್ಟೇರುತ್ತಿರುವ ಖುಷಿಯಲ್ಲಿದ್ದರು ಮೇಜರ್‌ ಶ್ರೀನಿವಾಸ್‌ ಪೂಜಾರ್‌. ಹಾಲ್‌ ತುಂಬಾ ಓಡಾಡುತ್ತಾ ಬಂದ ಹಿತೈಷಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜೊತೆಗೆ ತಮ್ಮ ಮಿಲಿಟರಿ ಸ್ನೇಹಿತರನ್ನು ಆಹ್ವಾನಿಸಿದ್ದರು. ಅವರೆಲ್ಲರನ್ನೂ ವೇದಿಕೆಗೆ
ಕರೆದು ಪರಿಚಯ ಕೂಡಾ ಮಾಡಿಕೊಟ್ಟರು. ಹೀಗೆ ಶ್ರೀನಿವಾಸ್‌ ಅವರ ಖುಷಿಗೆ ಕಾರಣವಾಗಿದ್ದು ಅವರ ಮಗ ಸಂದೇಶ್‌ ನಾಯಕರಾಗಿ
ನಟಿಸುತ್ತಿರುವ “ಝಣ್‌ ಝಣಾ ಝಣ್‌’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. ಹೊಸಬರ ತಂಡವೇ ಸೇರಿಕೊಂಡು ಈ
ಸಿನಿಮಾ ಮಾಡುತ್ತಿದ್ದು, ಹಣದ ಹಿಂದೆ ಬೀಳುವ ಯುವಕರ ಕಥೆಯನ್ನು ಹೇಳಲು ಹೊರಟಿದ್ದಾರೆ. ಶಿವಕುಮಾರ್‌ ತಂತಿ ಈ ಸಿನಿಮಾದ ನಿರ್ದೇಶಕರು. ಇದು ಇವರಿಗೆ ಮೊದಲ ಚಿತ್ರ. ಕಾರ್ಪೋರೇಟ್‌ ಕ್ಷೇತ್ರದಲ್ಲಿದ್ದ ಇವರು ಒಂದಷ್ಟು ಜಾಹೀರಾತುಗಳನ್ನು ಮಾಡಿದ್ದಾರೆ. ಈಗ ಆ ಎಲ್ಲಾ ಅನುಭವಗಳನ್ನು ಒಟ್ಟು ಸೇರಿಸಿ ಈ ಸಿನಿಮಾ ಮಾಡುತ್ತಿದ್ದಾರೆ.

Advertisement

ಹಣ ಮಾಡಬೇಕೆಂಬ ಯುವಕರ ತಂಡಕ್ಕೆ ದೇಶದ್ರೋಹಿಗಳಿಂದ ಅಂದುಕೊಂಡಷ್ಟು ಹಣ ಸಿಗುತ್ತದೆ. ಆ ನಂತರ ಆ ಯುವಕರ ತಂಡ 
ದೇಶದ್ರೋಹಿಗಳ ಜೊತೆ ಸೇರುತ್ತಾ ಅಥವಾ ಅವರನ್ನು ಪೊಲೀಸರಿಗೆ ಒಪ್ಪಿಸುತ್ತಾ ಎಂಬುದು ಎಂಬ ಲೈನ್‌ನೊಂದಿಗೆ ಇಡೀ ಸಿನಿಮಾ
ಸಾಗುತ್ತದೆಯಂತೆ. ಇಷ್ಟು ಹೇಳಿದ ಮೇಲೆ ಮುಂದೇನಾಗಬಹುದೆಂಬುದನ್ನು ನೀವು ನಿರೀಕ್ಷಿಸಬಹುದು. ಚಿತ್ರದಲ್ಲಿ ಕಾಮಿಡಿ, ಸಸ್ಪೆನ್ಸ್‌
ಇರುವುದರಿಂದ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರವನ್ನು ದಿ ಸರಗಮ್‌ ಟೀಮ್‌ ನಿರ್ಮಿಸುತ್ತಿದೆ.
ಸಾಫ್ಟ್ವೇರ್‌ ಕ್ಷೇತ್ರದ ಮೂವರು ಸೇರಿ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಡಬೇಕೆಂಬ ಉದ್ದೇಶದಿಂದ ಸಿನಿಮಾ ಮಾಡುತ್ತಿದೆಯಂತೆ ಸರಗಮ್‌ ಅಂಡ್‌ ಟೀಂ. ಚಿತ್ರದ ನಾಯಕ ಸಂದೇಶ್‌ಗೆ ಈ ಹಿಂದೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನವಾದ ಪಾತ್ರ ಇಲ್ಲಿ ಸಿಕ್ಕಿದೆಯಂತೆ. ಇಡೀ ಸಿನಿಮಾ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಮೂಲಕ ಪ್ರೇಕ್ಷಕರಿಗೆ ಮಜಾ ಸಿಗುತ್ತದೆ ಎಂಬ ವಿಶ್ವಾಸ ಅವರದು. ನಾಯಕ ಅಸ್ಮಾ ಕೂಡಾ “ಝಣ್‌ ಝಣಾ ಝಣ್‌’ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಂಡರು. ಚಿತ್ರಕ್ಕೆ ಅಭಿಷೇಕ್‌ ಜಿ.ರಾಯ್‌ ಸಂಗೀತ, ಮನೋಹರ್‌ ಛಾಯಾಗ್ರಹಣ ವಿದೆ.

Advertisement

Udayavani is now on Telegram. Click here to join our channel and stay updated with the latest news.

Next