Advertisement

Zero shadow day: ಖಗೋಳ ವಿದ್ಯಮಾನ: ನಮ್ಮ ನೆರಳು ನಮಗೆ ಕಾಣದ ದಿನ ಶೂನ್ಯ ನೆರಳು ದಿನ

03:45 PM Aug 18, 2023 | Team Udayavani |

ಕಡೂರು: ಸೂರ್ಯನ ಕ್ಷೀಣತೆಯು ಆ ಸ್ಥಳ-ಪ್ರದೇಶದ ಅಕ್ಷಾಂಶಕ್ಕೆ ಸಮಾನವಾದಾಗ ಶೂನ್ಯ ನೆರಳು ದಿನ ಎಂದು ಪರಿಗಣಿಸಬಹುದಾಗಿದೆ ಎಂದು ಪ್ರಜ್ಞಾ ಇಂಗ್ಲೀಷ್ ಶಾಲೆಯ ಕಾರ್ಯದರ್ಶಿ ಎನ್.ಪಿ.ಮಂಜುನಾಥ್ ಪ್ರಸನ್ನ ಮಕ್ಕಳಿಗೆ ತಿಳಿಸಿದರು.

Advertisement

ಪ್ರಜ್ಞಾಶಾಲೆಯ ಆವರಣದಲ್ಲಿ ಶುಕ್ರವಾರ ಪ್ರಯೋಗಿಕವಾಗಿ ಶಾಲಾ ಮಕ್ಕಳನ್ನು ವೃತ್ತಕಾರವಾಗಿ ನಿಲ್ಲಿಸಿ ಈ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆ ಮಾಡುವುದರ ಮೂಲಕ ಶೂನ್ಯ ನೆರಳಿನ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರು.

ಶೂನ್ಯ ನೆರಳು? ಯಾಕೆ ಹೀಗೆ ಆಗುತ್ತದೆ? ಇದು ಯಾವ ಸಮಯದಲ್ಲಿ ಸಂಭವಿಸಲಿದೆ? ಇದರ ಪ್ರಾಮುಖ್ಯತೆ ಏನು? ಈ ಎಲ್ಲಾ ವಿಷಯಗಳ ಬಗ್ಗೆ ಮಂಜುನಾಥ್ ಪ್ರಸನ್ನ ಮತ್ತು ಶಾಲೆಯ ವಿಜ್ಷಾನ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಿದರು.

ಶೂನ್ಯ ನೆರಳು ಒಂದು ವಿಶಿಷ್ಟ ಮತ್ತು ಕುತುಹಲಕಾರಿ ಆಕಾಶದಲ್ಲಿ ನಡೆಯುವ ಘಟನೆಯಾಗಿದ್ದು, ಇದು ವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಸೂರ್ಯ ನೇರವಾಗಿ ನಮ್ಮ ನೆತ್ತಿಯ ಮೇಲೆ ಬಂದಾಗ ಶೂನ್ಯ ನೆರಳು ಸಂಭವಿಸುತ್ತದೆ. ಆದ್ದರಿಂದ ಆ ದಿನ ಭೂಮಿಯ ಮೇಲ್ಮೈಯಲ್ಲಿ ಯಾವುದೇ ಲಂಬ ವಸ್ತುವಿನ ನೆರಳನ್ನು ಕಾಣಲು ಸಾಧ್ಯವಿಲ್ಲ.

ಇತರೆ ದಿನಗಳಲ್ಲಿ ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ನಮ್ಮ ನೆತ್ತಿಯ ಮೇಲಿರುವುದಿಲ್ಲ. ಸೂರ್ಯ ಸಾಮಾನ್ಯವಾಗಿ ಎತ್ತರದಲ್ಲಿ ಸ್ವಲ್ಪ ಕಡಿಮೆ, ಸ್ವಲ್ಪ ಉತ್ತರಕ್ಕೆ ಆಥವಾ ಸ್ವಲ್ಪ ದಕ್ಷಿಣಕ್ಕೆ ಚಲಿಸುತ್ತಾನೆ.

Advertisement

ಶೂನ್ಯ ನೆರಳು ದಿನದಂದು ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದು ಆಥವಾ ಉತ್ತುಂಗವನ್ನು ತಲುಪುತ್ತಾನೆ. ಆದ್ದರಿಂದ ನೆರಳಿನ ಉದ್ದವು ಅದನ್ನು ನೋಡಲಾಗದಷ್ಟು ಕಡಿಮೆಯಾಗುತ್ತದೆ. ಇದನ್ನೆ ಶೂನ್ಯ ನೆರಳು ಎನ್ನುತ್ತಾರೆ ಎಂಬ ಮಾಹಿತಿ ನೀಡಿದರು.

ಶೂನ್ಯ ನೆರಳು ದಿನ ಭೂಮಿಯು ಸ್ವಲ್ಪ ಮಟ್ಟಿಗೆ ವಾಲಿದ ಅಕ್ಷ ರೇಖೆಯನ್ನು ಹೊಂದಿದೆ. ಈ ವಾಲಿದ ಅಕ್ಷ ರೇಖೆ ಮತ್ತು ಸೂರ್ಯನ ಸುತ್ತ ಭೂಮಿಯ ಕಕ್ಷೆ ಅಥವಾ ತಿರುಗುವಿಕೆಯೂ ಶೂನ್ಯ ನೆರಳು ದಿನ ಸಂಭವಿಸಲಿಕ್ಕೆ ಕಾರಣವಾಗುತ್ತದೆ.

2023ರ ಮೊದಲ ಶೂನ್ಯ ನೆರಳು ಏಪ್ರಿಲ್ 25ರಂದು ಮಧ್ಯಾಹ್ನ 12.17ಕ್ಕೆ ಸಂಭವಿಸಿತ್ತು. ಇದೀಗ ಅಗಷ್ಟ್ 18 ರಂದು ಸಂಭವಿಸಿದೆ. ಕಟ್ಟಡ, ಮರ ಮುಂತಾದ ಎತ್ತರದ ರಚನೆಗಳು ನೆಲದ ಮೇಲೆ ಯಾವುದೇ ನೆರಳು ಬೀರುವುದಿಲ್ಲ. ಸೂರ್ಯನು ಪ್ರಕಾಶಮಾನವಾಗಿಯೆ ಇರುತ್ತದೆ.

ವಿದ್ಯಾರ್ಥಿಗಳು, ವಿಜ್ಞಾನಾಸಕ್ತರು ಮತ್ತು ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಂಡರು. ಬೆಂಗಳೂರಿನ ವಿಜ್ಞಾನ ಖಗೋಳ ಕೇಂದ್ರಗಳಲ್ಲಿ ಈ ರೀತಿಯ ವಿದ್ಯಮಾನ ನೋಡಲು ವಿಶೇಷ ವ್ಯವಸ್ಥೆ ಮಾಡುತ್ತಾರೆ ಎಂಬ ಮಾಹಿತಿ ನೀಡಿದರು.

ಶಾಲೆಯ ಪ್ರಾಂಶುಪಾಲ ಕ್ಲಾರಡಿ ಮೊಲೊ, ಉಪ ಪ್ರಾಂಶುಪಾಲೆ ಮಧುಶಾಲಿನಿ, ಶಿಕ್ಷಕರಾದ ಶಿಲ್ಪ.ಜಿ.ಕೆ., ಸೋಮ ಶೇಖರಯ್ಯ, ಸೌಮ್ಯ ಮತ್ತು ವಿದ್ಯಾರ್ಥಿಗಳಿದ್ದರು.

ಕಡೂರು ಪ್ರಜ್ಞಾ ಶಾಲೆಯ ಮಕ್ಕಳಿಗೆ ಸೂನ್ಯ ನೆರಳು ದಿನವನ್ನು ಮಕ್ಕಳಿಗೆ ಪ್ರಯೋಗಿಕವಾಗಿ ಮನದಟ್ಟು ಮಾಡಿಕೊಡಲಾಯಿತು. ಎನ್.ಪಿ.ಮಂಜುನಾಥ್ ಪ್ರಸನ್ನ ಮತ್ತು ಮಕ್ಕಳು ವೃತ್ತಕಾರದಲ್ಲಿ ನಿಂತು ನೆರಳನ್ನು ಕಾಣದೆ ಖಗೋಳದ ವಿಸ್ಮಯವನ್ನು ಕಂಡುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next