Advertisement

ಹೀರೋಗಿಂತ “ಝೀರೊ’ನೇ ಮೆಚ್ಚಿದರು…: Watch

04:30 PM Nov 03, 2018 | |

ಶಾರುಖ್​ ಖಾನ್ ಅಭಿನಯದ ಬಹು ನಿರೀಕ್ಷಿತ “ಝೀರೊ’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಶಾರೂಖ್​​​​ 52ನೇ ಬರ್ತ್​ಡೇ​​​ಗೆ ಸ್ಪೆಷಲ್​ ಗಿಫ್ಟ್​​ ಆಗಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದೆ. 3.14 ನಿಮಿಷದ ಟ್ರೈಲರ್​ನಲ್ಲಿ ಕುಬ್ಜನ ವೇಷದಲ್ಲಿ ಶಾರುಖ್​ ಕಾಣಿಸಿಕೊಂಡಿದ್ದಾರೆ.

Advertisement

ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಅಬ್ಬರಿಸುತ್ತಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ಮೊದಲ ಸ್ಥಾನದಲ್ಲಿದೆ. ಚಿತ್ರವನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಶಾರೂಖ್​​​​ ಖಾನ್​​, ಬಾವ್ವಾ ಸಿಂಗ್​​​​ ಪಾತ್ರದಲ್ಲಿ ಮಿಂಚಿದ್ದಾರೆ. ಅಲ್ಲದೇ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಲೀಡ್​​ ರೋಲ್​ನಲ್ಲಿ ಅಭಿನಯಿಸಿದ್ದಾರೆ.

ಇನ್ನು ಈ ಹಿಂದೆ 2012 ರಲ್ಲಿ ಬಿಡುಗಡೆಯಾದ “ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಶಾರೂಖ್ ಖಾನ್, ಅನುಷ್ಕಾ ಮತ್ತು ಕತ್ರಿನಾ ಕೈಫ್ ತೆರೆಯನ್ನು ಹಂಚಿಕೊಂಡಿದ್ದರು. ಇದೀಗ ಮತ್ತೆ “ಝೀರೋ’ ಸಿನಿಮಾದ ಮೂಲಕ ಈ ಮೂವರು ಸಿನಿ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಡಿಸೆಂಬರ್‌ 21ಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next