Advertisement

ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಪರಿಚಯಿಸಿದ ಫ್ಲಿಪ್ ಕಾರ್ಟ್

12:30 PM Aug 05, 2021 | Team Udayavani |

ಬೆಂಗಳೂರು: ಇತ್ತೀಚೆಗೆ ಶಾಪ್ಸಿಯನ್ನು ಆರಂಭಿಸಿದ್ದ ಇ-ಕಾಮರ್ಸ್ ಫ್ಲಿಪ್ ಕಾರ್ಟ್ ಇದೀಗ ಶೂನ್ಯ-ಕಮೀಷನ್ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. ಫ್ಯಾಶನ್, ಗ್ರಾಸರಿ ಮತ್ತು ಗೃಹೋಪಯೋಗಿ ಉತ್ಪನ್ನಗಳ ವಿಭಾಗದಲ್ಲಿ ಸೂಕ್ತವಾದ ಮಾರಾಟಗಾರರು ಮತ್ತು ಆಯ್ಕೆಗಳನ್ನು ತರಲು ಇದು ನೆರವಾಗುತ್ತದೆ ಎಂದು ತಿಳಿಸಿದೆ.

Advertisement

ಈ ಯೋಜನೆಯಿಂದಾಗಿ ವಿಸ್ತಾರವಾದ ಉತ್ಪನ್ನಗಳ ಶ್ರೇಣಿ ಮತ್ತು ಕೆಟಲಾಗ್ ಗಳನ್ನು ಹೆಚ್ಚು ಮಾಡುವುದು ಮತ್ತು ಚಿಕ್ಕ ನಗರಗಳು ಮತ್ತು ಪಟ್ಟಣಗಳಲ್ಲಿ ಇ-ಕಾಮರ್ಸ್ ಅನ್ನು ಬೆಳವಣಿಗೆ ಮಾಡುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.

ಫ್ಲಿಪ್ ಕಾರ್ಟ್ ಗೆ 2 ಮತ್ತು 3 ನೇ ಶ್ರೇಣಿಯ ನಗರ ಪಟ್ಟಣಗಳಲ್ಲಿ ಶೇ.70 ರಷ್ಟು ಗ್ರಾಹಕರಿದ್ದಾರೆ. ಶಾಪ್ಸಿಯೊಂದಿಗೆ ಫ್ಲಿಪ್ ಕಾರ್ಟ್ ಈ ಪ್ರಮಾಣವನ್ನು ಶೇ.90ಕ್ಕೆ ಹೆಚ್ಚಳ ಮಾಡುವ ಉದ್ದೇಶವನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ಸಾಮಾಜಿಕ ವಾಣಿಜ್ಯ ವೈಶಿಷ್ಟ್ಯತೆಗಳೊಂದಿಗೆ ಗ್ಯಾಮಿಫಿಕೇಶನ್ ನೆರವಾಗುತ್ತದೆ.

ಇದನ್ನೂ ಓದಿ:ಹೊಸ ಸ್ಯಾಮ್‍ ಸಂಗ್‍ ಗೆಲಾಕ್ಸಿ ಎ22 5ಜಿ ಹೀಗಿದೆ ನೋಡಿ

ಅಂತಹ ಒಂದು ವೈಶಿಷ್ಟ್ಯತೆಯೆಂದರೆ ಶಾಪ್ ಮತ್ತು ಗಳಿಕೆ. ಅಲ್ಲಿ ಬಳಕೆದಾರರು ಒಂದು ನಿರ್ದಿಷ್ಟ ಸಾಪ್ತಾಹಿಕ/ಮಾಸಿಕ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೋತ್ಸಾಹಕಗಳನ್ನು ಅನ್ ಲಾಕ್ ಮಾಡಲು ಸಾಧ್ಯವಾಗುತ್ತದೆ.

Advertisement

ಕಳೆದ ಒಂದು ದಶಕದಲ್ಲಿ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಹೆಚ್ಚಿಸುವ ಉಪಕ್ರಮಗಳನ್ನು ತೆಗೆದುಕೊಂಡಿದೆ. ಶೂನ್ಯ ಕಮೀಷನ್ ಕಾರ್ಯತಂತ್ರಕ್ಕೆ ಪೂರಕವಾಗಿ ಮಾರಾಟಗಾರರು ಈಗಾಗಲೇ ಫ್ಲಿಪ್ ಕಾರ್ಟ್ ನ ಜಾಹೀರಾತು ತಂತ್ರಜ್ಞಾನ ಪ್ಲಾಟ್ ಫಾರ್ಮ್ ಅನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ, ಫ್ಲಿಪ್ ಕಾರ್ಟ್ ನ ಕಡಿಮೆ ಬೆಲೆಯ ಲಾಜಿಸ್ಟಿಕ್ ನೆಟ್ ವರ್ಕ್ ಮತ್ತು ಫ್ಲಿಪ್ ಕಾರ್ಟ್ ಪೇ ಲೇಟರ್ ನಂತಹ ಕೈಗೆಟುಕುವ ಅಂಶಗಳಿವೆ.

ಶಾಪ್ಸಿಯನ್ನು ಆರಂಭಿಸಿದ ಕೇವಲ ಒಂದು ತಿಂಗಳಲ್ಲೇ ಇದರ ವ್ಯಾಪ್ತಿಗೆ 2 ಲಕ್ಷಕ್ಕೂ ಅಧಿಕ ರೀಸೆಲ್ಲರ್ ಗಳು ಸೇರ್ಪಡೆಗೊಂಡಿದ್ದಾರೆ. ಹಬ್ಬದ ಸೀಸನ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶಾಪ್ಸಿ ಮುಂದಿನ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು 20 ಪಟ್ಟು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಹಲವಾರು ವೈಶಿಷ್ಟ್ಯತೆಗಳನ್ನು ಪರಿಚಯಿಸುವುದರ ಜತೆಗೆ ಉದ್ಯಮಿಗಳು ಯಾವುದೇ ಬಂಡವಾಳಗಳಿಲ್ಲದೇ ಆನ್ ಲೈನ್ ಮೂಲಕ ತಮ್ಮ ವ್ಯವಹಾರಗಳನ್ನು ಆರಂಭಿಸುವಂತಹ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಿಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next