Advertisement

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 300ಕ್ಕೂ ಅಧಿಕ ಸ್ಥಾನ: ಅಮಿತ್‌ ಶಾ

11:28 AM Feb 24, 2017 | Team Udayavani |

ಹೊಸದಿಲ್ಲಿ : ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 300ಕ್ಕೂ ಮಿಕ್ಕಿದ ಸ್ಥಾನಗಳನ್ನು ಗೆದ್ದು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಝೀ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

“ಈ ಚುನಾವಣೆಯಲ್ಲಿ ಎಸ್‌ಪಿ – ಕಾಂಗ್ರೆಸ್‌ ಹಿಂದೆ ಬಿದ್ದಿವೆ. ಅವುಗಳಿಗಿಂತ ಬಿಎಸ್‌ಪಿ ಉತ್ತಮ ನಿರ್ವಹಣೆ ತೋರೀತು; ಆದರೆ ಬಿಜೆಪಿ ಇವೆಲ್ಲಕ್ಕಿಂತ ಉಜ್ವಲವಾದ ನಿರ್ವಹಣೆ ತೋರಿ 300ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ಅಮಿತ್‌ ಶಾ ಹೇಳಿದರು. 

ಉತ್ತರ ಪ್ರದೇಶದಲ್ಲಿ ಎಲ್ಲ ಸಮುದಾಯವರಿಗೆ ಸಮಾನ ಪ್ರಮಾಣದಲ್ಲಿ ವಿದ್ಯುತ್‌ ಸಿಗುತ್ತಿಲ್ಲ; ಇಂತಹ ತಾರತಮ್ಯ ಎಸಗುತ್ತಿರುವ ಅಧಿಕಾರಸ್ಥರೇ ಕೋಮು ರಾಜಕಾರಣ ಮಾಡುತ್ತಿರುವುದು . ಫ‌ತೇಪುರದಲ್ಲಿ ನಡೆದ ಈಚಿನ ಚುನಾವಣಾ ರಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ “ಕಬರಸ್ಥಾನ’ ಮತ್ತು “ಶಂಶಾನ್‌’ ಹೇಳಿಕೆಗಳು  ಅತ್ಯಂತ ಪ್ರಸ್ತುತವಾಗಿವೆ ಎಂದು ಅಮಿತ್‌ ಶಾ ನುಡಿದರು .

ಕಳೆದ 15 ವರ್ಷಗಳಿಂದ ಎಸ್‌ಪಿ ಮತ್ತು ಬಿಎಸ್‌ಪಿ ಆಳ್ವಿಕೆಯಿಂದಾಗಿ ಉತ್ತರ ಪ್ರದೇಶ ಇಂದು ಅಭಿವೃದ್ಧಿಯಲ್ಲಿ  ತೀರ ಹಿಂದುಳಿದ ರಾಜ್ಯವಾಗಿದೆ. ಮಾತ್ರವಲ್ಲದೆ ಉತ್ತರ ಪ್ರದೇಶವು ದೇಶದಲ್ಲೇ ನಂಬರ್‌ ಒನ್‌ ಅತ್ಯಾಚಾರ, ಕೊಲೆ ಮತ್ತು ಅರಾಜಕತೆಯ ರಾಜ್ಯವಾಗಿದೆ. ಅಂತೆಯೇ ಉತ್ತರ ಪ್ರದೇಶದ ಜನರು ಎಸ್‌ಪಿ ಮತ್ತು ಬಿಎಸ್‌ಪಿಯಿಂದ ಬೇಸತ್ತಿದ್ದು ಈ ಬಾರಿ ಅವರು ಬಿಜೆಪಿಗೆ ಮತ ಹಾಕಲು ತೀರ್ಮಾನಿಸಿದ್ದಾರೆ; ಅದಕ್ಕೆ ಪ್ರತಿಯಾಗಿ ಬಿಜೆಪಿಯು ರಾಜ್ಯದಲ್ಲಿ ಅಭಿವೃದ್ಧಿ ಪರ ಆಡಳಿತೆಯನ್ನು ನೀಡಲಿದೆ ಎಂದು ಶಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next