ಬ್ಯಾಂಕ್‌ನೊಳಗೆ ಉದ್ಯೋಗಿಯಾಗಿದ್ದುಕೊಂಡೇ ಏನೇನು ಮಾಡಬಹುದು, ಹಣಕಾಸಿನ ವ್ಯವಹಾರದಲ್ಲಿ ಹೇಗೆಲ್ಲಾ ಆಟವಾಡಬಹುದು ಎಂಬ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಬಂದಿರುವ ಚಿತ್ರ “ಜೀಬ್ರಾ’.
ಈ ಚಿತ್ರದ ಮೂಲ ಬ್ಯಾಂಕ್ ಮತ್ತು ಅಲ್ಲಿನ ಉದ್ಯೋಗಿಗಳು. ಬ್ಯಾಂಕ್ ವ್ಯವಹಾರದ ಬಗ್ಗೆ ತುಂಬಾನೇ ತಿಳಿದುಕೊಂಡವರಿಗೆ ಈ ಚಿತ್ರ ಸ್ವಲ್ಪ ಬೇಗ ಕನೆಕ್ಟ್ ಆಗಬಹುದು. ಆದರೆ, ಒಂದು ಥ್ರಿಲ್ಲರ್ ಚಿತ್ರವಾಗಿ “ಜೀಬ್ರಾ’ ರಂಜಿಸುತ್ತಾ ಸಾಗುತ್ತದೆ. ಬ್ಯಾಂಕ್ ಉದ್ಯೋಗಿ ಸೂರ್ಯ ಹೇಗೆ ತಾನು ಸಿಲುಕಿರುವ ಸಮಸ್ಯೆಯಿಂದ ಹೊರಬರುತ್ತಾನೆ ಮತ್ತು ಅದಕ್ಕೆ ತನ್ನ ಬ್ಯಾಂಕ್ ವ್ಯವಹಾರವನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂಬಲ್ಲಿಂದ ಕಥೆ ಆರಂಭವಾಗುತ್ತದೆ. ಹಾಗಂತ ಕಥೆ ಇಷ್ಟಕ್ಕೆ ಮುಗಿಯಲ್ಲ, ಇದು ಮುಂದೆ ಒಬ್ಬ ಗ್ಯಾಂಗ್‌ಸ್ಟರ್‌ಗೆ ಕನೆಕ್ಟ್ ಆಗುತ್ತದೆ. ಅಲ್ಲಿಂದ ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳುತ್ತದೆ.
ನಿರ್ದೇಶಕರು ತುಂಬಾ ಜಾಣ್ಮೆಯಿಂದ ಇಡೀ ಸಿನಿಮಾವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಇದು ರೆಗ್ಯುಲರ್ ಬ್ಯಾಂಕ್ ವ್ಯವಹಾರದಾಚೆ ಮಾಡಿರುವ ಸಿನಿಮಾ. ಜೊತೆಗೆ ಗ್ಯಾಂಗ್‌ಸ್ಟರ್ ಲಿಂಕ್ ಬೇರೆ ಇದೆ. ಎರಡನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಒಂದಷ್ಟು ಲಾಜಿಕ್ ಇಲ್ಲದ ಅಂಶಗಳು, ಊಹೆಗೂ ನಿಲುಕದ ದೃಶ್ಯಗಳಿವೆ. ಅವೆಲ್ಲವನ್ನು ಹೊರತುಪಡಿಸಿದ್ದಾರೆ “ಜೀಬ್ರಾ’ ರೈಡ್ ಥ್ರಿಲ್ ನೀಡುತ್ತದೆ.
ನಾಯಕರಾದ ಸತ್ಯದೇವ್ ಬ್ಯಾಂಕ್‌ನೊಳಗಿನ “ಕಿಲಾಡಿ’ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಇಲ್ಲಿ ಪವರ್‌ಫುಲ್ ಗ್ಯಾಂಗ್‌ಸ್ಟರ್ ಆಗಿ ಮತ್ತೂಮ್ಮೆ ರಗಡ್ ಆಗಿ ಮಿಂಚಿದ್ದಾರೆ. ಉಳಿದಂತೆ ಅಮೃತಾ, ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ
ರವಿಪ್ರಕಾಶ್ ರೈ