Advertisement

ಹೊಸ ಚಿತ್ರಕ್ಕೆ ಝೈದ್‌ ಖಾನ್‌ ರೆಡಿ

05:30 PM May 13, 2023 | Team Udayavani |

“ಬನಾರಸ್‌’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಝೈದ್‌ ಖಾನ್‌ ಈಗ ಎರಡನೇ ಸಿನಿಮಾಕ್ಕೆ ಅಣಿಯಾಗಿದ್ದಾರೆ. ಈಗಾಗಲೇ ಹೊಸ ಸಿನಿಮಾದ ಕಥೆ ಕೇಳಿ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಝೈದ್‌ ಖಾನ್‌ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

Advertisement

ಅಂದಹಾಗೆ, ಝೈದ್‌ ನಟನೆಯ ಹೊಸ ಚಿತ್ರವನ್ನು ಪುನೀತ್‌ ರುದ್ರನಾಗ್‌ ನಿರ್ದೇಶಿಸಲಿದ್ದಾರೆ. ಈ ಹಿಂದೆ ಯುವರಾಜ್‌ಕುಮಾರ್‌ ಅವರಿಗಾಗಿ “ಯುವ ರಣಧೀರ ಕಂಠೀರವ’ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಆ ಚಿತ್ರದ ಫ‌ಸ್ಟ್‌ಲುಕ್‌ ಕೂಡಾ ಬಿಡುಗಡೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಮುಂದುವರೆಯಲಿಲ್ಲ. ಈಗ ಝೈದ್‌ ಖಾನ್‌ಗೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಅಂದಹಾಗೆ, ಝೈದ್‌ ಕೂಡಾ ಈ ಕಥೆ ಕೇಳಿ ಇಷ್ಟಪಟ್ಟಿದ್ದು, ಇದೊಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಆಗಿ ಎಲ್ಲರಿಗೂ ಇಷ್ಟವಾಗಲಿದೆ ಎಂಬ ನಂಬಿಕೆ ಝೈದ್‌ ಖಾನ್‌ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next