Advertisement

ಯೂಕಿ ಸೆಮಿಗೆ

12:23 AM May 12, 2017 | Team Udayavani |

ಕಾರ್ಶಿ(ಉಜ್ಬೇಕಿಸ್ಥಾನ): ಭಾರತೀಯ ಯುವ ಟೆನಿಸ್‌ ಆಟಗಾರ, ವಿಶ್ವದ 273ನೇ ಶ್ರೇಯಾಂಕಿತ ಯೂಕಿ ಭಾಂಬ್ರಿ ಕಾರ್ಶಿ ಎಟಿಪಿ ಚಾಲೆಂಜರ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರನಿಗೆ ಆಘಾತ ನೀಡಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಯೂಕಿ ಅಗ್ರ 100 ರೊಳಗಿನ ಶ್ರೇಯಾಂಕದ ಆಟಗಾರನ ವಿರುದ್ಧ ಇದೇ ಮೊದಲ ಬಾರಿ ಗೆಲುವು ಸಾಧಿಸಿದ್ದಾರೆ.

Advertisement

ಯೂಕಿ ಭಾಂಬ್ರಿ 6-2, 6-4 ರಿಂದ 96ನೇ ರ್‍ಯಾಂಕಿನ ಉಕ್ರೇನ್‌ನ ಸೆರ್ಗಿ ಸ್ಟಖೋವಸ್ಕಿ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್‌ನ ಆರಂಭದಿಂದಲೇ ಉತ್ತಮ ಸರ್ವ್‌ ಮೂಲಕ ಯೂಕಿ ಗಮನ ಸೆಳೆದರು. ಹೀಗಾಗಿ ಸುಲಭದಲ್ಲಿಯೇ ಸೆಟ್‌ ವಶಪಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next