Advertisement
ತಮ್ಮ ಯೂಟ್ಯೂಬ್ ವಿಡಿಯೋಗಳಿಂದ ಖ್ಯಾತಿಯಾಗಿರುವ ಧ್ರುವ್ ರಾಠಿ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿಡಿಯೋಗಳು ಇಂಟರ್ ನೆಟ್ ನಲ್ಲಿ ಸದ್ದು ಮಾಡಿದೆ. ಧ್ರುವ್ ರಾಠಿ ಅವರನ್ನು ಬೆಂಬಲಿಸುವ ಒಂದು ವರ್ಗವಿದ್ದರೆ, ಅವರನ್ನು ವಿರೋಧಿಸುವ ವರ್ಗ ಕೂಡ ಒಂದಿದೆ.
Related Articles
Advertisement
ವೈರಲ್ ಆಗುತ್ತಿರುವ ಪೋಸ್ಟರ್ ನಲ್ಲಿ ಏನಿದೆ?: ಕಳೆದ ಎರಡೂ – ಮೂರು ದಿನಗಳಿಂದ ವಾಟ್ಸಾಪ್ ನಲ್ಲಿ ಪೋಸ್ಟರ್ ವೊಂದು ಹರಿದಾಡುತ್ತಿದೆ.
ಮೋದಿ-ವಿರೋಧಿ, ಬಿಜೆಪಿ-ವಿರೋಧಿ, ಆರ್‌ಎಸ್‌ಎಸ್-ವಿರೋಧಿ, ಸನಾತನ ವಿರೋಧಿ (ಮಹೇಶ್ವರಿ ಇಲ್ಲ) ಹಿಂದೂ ಎಂಬ ವೇಷವನ್ನು ಹಾಕಿರುವ ಧ್ರುವ್ ರಾಠಿ ಅವರ ಸತ್ಯ ಇಲ್ಲಿದೆ. ಈತನ ನಿಜವಾದ ಹೆಸರು ಬದ್ರು ರಶೀದ್, ಪೂರ್ಣ ಹೆಸರು ಬದ್ರುದ್ದೀನ್ ರಶೀದ್ ಲಾಹೋರಿ. ಈತ ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ್ದಾನೆ. ಈತನ ಪತ್ನಿ ಜೂಲಿ (ಕ್ರಿಶ್ಚಿಯನ್ ಹೆಸರು) ಈಕೆ ಕೂಡ ಪಾಕಿಸ್ತಾನಿ ಮತ್ತು ಈಕೆಯ ನಿಜವಾದ ಹೆಸರು ಜುಲೈಖಾ (ಪಾಕಿಸ್ತಾನಿ ಮುಸ್ಲಿಂ). ಇವರು ಕರಾಚಿಯ ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂನ ಅಲಿಶನ್ ಬಂಗಲೆಯ ಬಳಿ ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ISI ಮತ್ತು ಪಾಕಿಸ್ತಾನಿ ಸೇನೆಯ Y+ ಮತ್ತು Z+ ಭದ್ರತೆಯನ್ನು ಒದಗಿಸಲಾಗಿದೆ” ಎಂದು ಬರೆದಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಹರಿದಾಡಿದೆ.
ಧ್ರುವ್ ರಾಠಿ ಹೇಳಿದ್ದೇನು:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧ್ರುವ್ ರಾಠಿ, “ನಾನು ಮಾಡಿದ ವಿಡಿಯೊಗಳಿಗೆ ಅವರ ಬಳಿ ಉತ್ತರವಿಲ್ಲ ಆದ್ದರಿಂದ ಅವರು ಈ ನಕಲಿ ಸುದ್ದಿಯನ್ನು ಹರಡುತ್ತಿದ್ದಾರೆ. ನನ್ನ ಹೆಂಡತಿಯ ಕುಟುಂಬವನ್ನು ಇದಕ್ಕೆ ಎಳೆದು ತರುತ್ತಿದ್ದೀರಿ ಎಂದರೆ ನೀವೆಷ್ಟು ಹತಾಶರಾಗಿದ್ದೀರಿ? ಎಂದು ಗೊತ್ತಾಗುತ್ತದೆ. ನೀವಿಲ್ಲಿ ಈ ಐಟಿ ಸೆಲ್ ಉದ್ಯೋಗಿಗಳ ಅಸಹ್ಯಕರ ನೈತಿಕ ಮಾನದಂಡವನ್ನು ನೋಡಬಹುದು” ಎಂದು ರಾಠಿ ಹೇಳಿದ್ದಾರೆ.
ಧ್ರುವ್ ರಾಠಿ ಯೂಟ್ಯೂಬ್ ಚಾನೆಲ್ ಸರ್ಕಾರದ ನೀತಿಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಡಿಯೋಗಳಿಂದ ವ್ಯಾಪಕವಾಗಿ ಗಮನ ಸೆಳೆಯುತ್ತದೆ.ಇವರ ಚಾನೆಲ್ ಗೆ 18 ಮಿಲಿಯನ್ ಸಬ್ ಸ್ಕ್ರೈಬರ್ಸ್ ಇದ್ದಾರೆ.