ಕೊಪ್ಪಳ : ಜಗತ್ತಿಗೆ ಕಂಟಕವಾಗಿ ಕಾಡುತ್ತಿರುವ ಕೋವಿಡ್ ಮಹಾಮಾರಿಯಿಂದ ಶಾಲಾ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿತ್ತು. ಶಾಲೆಯ ಬಾಗಿಲು ಬಂದ್ ಆದವು. ಆನ್ ಲೈನ್ ಶಿಕ್ಷಣ ಶುರುವಾದರೂ ಕೂಡ ಅದು ಎಲ್ಲ ವಿದ್ಯಾರ್ಥಿಗಳಿಗೆ ತಲುಪುದು ಕಷ್ಟವಾಯಿತು. ಅದರಲ್ಲೂ ಆನ್ ಲೈನ್ ತರಗತಿಗಳಿಗೆ ಬೇಕಾದ ಮೊಬೈಲ್ ಕೊಂಡುಕೊಳ್ಳಲು ಆಗದಂತಹ ಅದೆಷ್ಟೋ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯದ ಕುರಿತು ಚಿಂತಾಕ್ರಾಂತರಾದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಬ್ಬರ ಇವರು ಬಡ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುತ್ತಿದ್ದಾರೆ.
ಹೌದು, ಇಲ್ಲಿವರೆಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿಲ್ಲ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಪೆಟ್ಟು ಬೀಳಲಾರಂಭಿಸಿದೆ. ಇದನ್ನು ಮನಗಂಡ ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮದ ಇಬ್ಬರು ಯುವಕರು ತಮ್ಮ ಶಿಕ್ಷಣದ ಜೊತೆಗೆ ತಮ್ಮ ಸುತ್ತಲಿನ ಮಕ್ಕಳಿಗೆ ಎರಡು ವರುಷದಿಂದ ಉಚಿತವಾಗಿ ಅಭ್ಯಾಸ ಮಾಡಿಸುತ್ತಿದ್ದಾರೆ.
ಈ ಯುವಕರು ಹಲವು ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮದ ಇಬ್ಬರು ಯುವಕರು ತಮ್ಮ ಶಿಕ್ಷಣದ ಜೊತೆಗೆ ತಮ್ಮ ಸುತ್ತಲಿನ ಮಕ್ಕಳಿಗೆ ಎರಡು ವರುಷದಿಂದ ಉಚಿತವಾಗಿ ಅಭ್ಯಾಸ ಮಾಡಿಸುತ್ತಿದ್ದಾರೆ.
ಇದು ತಮ್ಮ ತಮ್ಮ ಕೆಲಸಗಳಲ್ಲಿ ಅವಿರತವಾಗಿ ಶ್ರಮಿಸುವ ಕಾಲ.ಇಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರು ಇದ್ದಾರೆ, ತಮಗಾಗಿ ಬದುಕು ಸವೆಸುವರು ಇದ್ದಾರೆ. ಎರಡು ವರುಷದಿಂದ ನಮ್ಮ ಜೀವನ ಶೈಲಿಯ ಮೇಲೆ ಪ್ರಭಾವ ಬೀರಿರುವ ಕಾಣದ ವೈರಸ್ ಎಲ್ಲ ಕ್ಷೇತ್ರದಲ್ಲಿ ಕೆಟ್ಟ ಪ್ರಭಾವ ಬೀರಿದೆ. ಅದಕ್ಕಿಂತ ಹೆಚ್ಚಿನದಾಗಿ ಭಾರತದ ಮುಂದಿನ ಭವಿಷ್ಯ,ನಮ್ಮೆಲ್ಲರ ಮುಂದಿನ ಕನಸುಗಳಾದ ಮಕ್ಕಳ ಜೀವನದ ಮೇಲೆ ತುಂಬ ಪರಿಣಾಮ ಬೀರಿದೆ. ಆನಲೈನ್ ಕ್ಲಾಸ್,ವಿದ್ಯಾಗಮ, ಸವೇಂದ ಹೀಗೆ ಹಲವು ಯೋಜನೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನ ಮಾಡಿದರೂ ಅದು ಸಂಪೂರ್ಣವಾಗಿ ಎಲ್ಲ ಮಕ್ಕಳನ್ನು ತಲುಪಲು ಕಷ್ಟ ಸಾದ್ಯವಾಗಿತ್ತು..ಇಂತಹ ಪರಿಸ್ಥಿತಿಯಲ್ಲಿ ಮುತ್ತುರಾಜ ಮಠದ ಮತ್ತು ಶಿದ್ಲಿಂಗಪ್ಪ ಮಡಿವಾಳರ ಇಬ್ಬರು ಯುವಕರು ತಮ್ಮ ಶಿಕ್ಷಣದ ಜೊತೆಗೆ ತಮ್ಮ ಸುತ್ತಲಿನ ಮಕ್ಕಳಿಗೆ ಎರಡು ವರುಷದಿಂದ ಉಚಿತವಾಗಿ ಅಭ್ಯಾಸ ಮಾಡಿಸುತ್ತಿದ್ದಾರೆ.
ಯಾವುದೇ ಅಪೇಕ್ಷೆ ಇಲ್ಲದೆ ತಮ್ಮದೆ ಖರ್ಚಿನಲ್ಲಿ ಸುಮಾರು 60 ರಿಂದ 100 ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ನಿಸ್ವಾರ್ಥ ಸಮಾಜಸೇವೆ ಊರಿನ ಹಿರಿಯರು, ವಿದ್ಯಾರ್ಥಿಗಳ ಪೋಷಕರು ಧನ್ಯವಾದ ತಿಳಿಸುತ್ತಿದ್ದಾರೆ.