Advertisement

ಯುವಕರ ದಾರಿ ತಪ್ಪಿಸುತ್ತಿದೆ ಬಿಜೆಪಿ: ಬಸನಗೌಡ

09:36 AM Feb 01, 2018 | Team Udayavani |

ಉಡುಪಿ: ರಾಜ್ಯದಲ್ಲಿ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷವು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಕೋಮು ಗಲಭೆ ಸೃಷ್ಟಿಸಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ಇದಕ್ಕೆ ತಕ್ಕ ಪಾಠವನ್ನು ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್‌ ಕಲಿಸಲಿದೆ ಎಂದು ಕರ್ನಾ ಟಕ ಪ್ರದೇಶ ಯುವಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಬಸನಗೌಡ ಬಾದ್ರಳ್ಳಿ ಅವರು ಹೇಳಿದರು.

Advertisement

ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಉಡುಪಿಯ ಕಿದಿಯೂರು ಹೊಟೇಲ್‌ ಶೇಷಶಯನ ಸಭಾಂಗಣದಲ್ಲಿ ಜ. 31ರಂದು ನಡೆದ “ಯುವ ದೃಷ್ಟಿ’ ಮಂಗಳೂರು ವಲಯ ಯುವಕಾಂಗ್ರೆಸ್‌ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಸಂಘ ಪರಿವಾರ ಮತ್ತು ಅದರ ಅಂಗಪಕ್ಷವನ್ನು ಸಮರ್ಥವಾಗಿ ಎದುರಿಸಲು ಯುವ ಕಾಂಗ್ರೆಸ್‌ ಸಜ್ಜು ಗೊಂಡಿದೆ. ಮಂಗಳೂರು ಚಲೋ ಮೊದಲಾದ ಕಾರ್ಯಕ್ರಮಗಳ ಬದಲು ಉದ್ಯೋಗಕ್ಕಾಗಿ ಚಲೋ ಕಾರ್ಯಕ್ರಮ ವನ್ನು ಬಿಜೆಪಿ ಮಾಡಲಿ. ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವಂತಹ ಕಾರ್ಯವನ್ನು ಬಿಜೆಪಿ ನಾಯಕರು ಮಾಡುತ್ತಲಿದ್ದಾರೆ. ಇತ್ತೀಚೆಗೆ ಬಿಜೆಪಿಯ ಕೆಲ ನಾಯಕರು ನಾಲಗೆಯನ್ನು ಎಲ್ಲೆಂದರಲ್ಲಿ ಹರಿಯ ಬಿಟ್ಟಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ಯುವಕಾಂಗ್ರೆಸ್‌ ಕಲಿಸಲಿದೆ ಎಂದ ವರು ತಿಳಿಸಿದರು.

ರಾಷ್ಟ್ರೀಯ ಯುವಕಾಂಗ್ರೆಸ್‌ ಕಾರ್ಯದರ್ಶಿಗಳಾದ ರವೀಂದ್ರದಾಸ್‌, ಜೇಬಿ ಮಥರ್‌, ಕಾರ್ಯಾಗಾರದ ವಲಯ ಉಸ್ತುವಾರಿ ಉಮೇಶ್‌ ಬೋರೇಗೌಡ, ರಾಜ್ಯ ಯುವಕಾಂಗ್ರೆಸ್‌ ಉಪಾಧ್ಯಕ್ಷರಾದ ರಾಜೇಂದ್ರ ಆರ್‌., ಶಿವಕುಮಾರ್‌, ಯುವಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್‌ ವಿ. ಅಮೀನ್‌, ದ.ಕ. ಜಿಲ್ಲಾಧ್ಯಕ್ಷ ಮಿಥುನ್‌ ರೈ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್‌ ಅಜೀಜ್‌ ಹೆಜಮಾಡಿ, ಸುಹೈಲ್‌ ಕಂದಕ್‌, ಅಭಿಷೇಕ್‌, ಚೈತನ್ಯ ರೆಡ್ಡಿ, ಯುವಕಾಂಗ್ರೆಸ್‌ ಕಾರ್ಯದರ್ಶಿ ಲಿಯಾಕತುಲ್ಲಾ ಖಾನ್‌, ರಂಜಿತ್‌ ತ್ರಿಭುವನ್‌, ಪ್ರಸನ್ನ, ಕಿರಣ್‌, ಜಿಲ್ಲಾ ಯುವಕಾಂಗ್ರೆಸ್‌ ಮುಂದಾಳುಗಳಾದ ವಿಘ್ನೇಶ್‌ ಕಿಣಿ, ಹಬೀಬ್‌ ಅಲಿ, ಸುಜಯ ಪೂಜಾರಿ ಹಾಗೂ ವಿವಿಧ ಜಿಲ್ಲೆಗಳ ಯುವಕಾಂಗ್ರೆಸ್‌ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

ಉಡುಪಿ, ದ. ಕ. ಜಿಲ್ಲೆ ಸಹಿತ ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾಸನದ ಯುವಕಾಂಗ್ರೆಸ್‌ ಪ್ರತಿನಿಧಿಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು. ದಿಲ್ಲಿಯ ಜವಾಹರ್‌ಲಾಲ್‌ ನೆಹರೂ ನಾಯಕತ್ವ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

ಯುವಕರಿಗೆ ನಾಯಕತ್ವ , ಜವಾಬ್ದಾರಿ 
ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆಯವರು ಮಾತನಾಡಿ, ಯುವಕರು ದೇಶದ ಶಕ್ತಿ. ಅವರಿಂದ ದೇಶ ಬದಲಾದ ನಿದರ್ಶನಗಳಿದೆ. ಒಂದು ಕಾಲದಲ್ಲಿ ಸಂಜಯ್‌ ಗಾಂಧಿ ಬಲಿಷ್ಠರಾಗಿದ್ದರು. ಇದೀಗ ರಾಹುಲ್‌ ಗಾಂಧಿಯವರ ನೇತೃತ್ವದ ಯುವಪಡೆ ದೇಶ ಬದಲಿಸಲಿದೆ. ಬಿಜೆಪಿ ಪಕ್ಷವು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು, ಯುವಕರು ಕಾರ್ಯಕರ್ತರಾಗಿ ದುಡಿಯುವುದು ಮಾತ್ರವಲ್ಲ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಬೇಕಾಗಿದೆ. ಯುವಕರಿಂದಲೇ ಪಕ್ಷದಲ್ಲಿ ಯುವಚೈತನ್ಯ ಬರುತ್ತದೆ. ಯುವಕರು ಕೂಡ ತಾಳ್ಮೆ, ಪಕ್ಷ ನಿಷ್ಠೆಯಿಂದ ದುಡಿದಲ್ಲಿ ಅವಕಾಶಗಳು ಬರುತ್ತವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next