Advertisement

ಯುವ ಕಾಂಗ್ರೆಸ್‌ನಿಂದ ಪ್ರಧಾನಿಗೆ 10 ಪ್ರಶ್ನೆಗಳು 

12:00 AM Feb 20, 2019 | |

ಬೆಂಗಳೂರು: ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನ ನಡೆಸಿದ್ದು, ಪ್ರಧಾನಿ ಮೋದಿಯವರಿಗೆ ಯುವಕರ ಮೂಲಕ 10 ಪ್ರಶ್ನೆಗಳನ್ನು ಕೇಳಲು ಮುಂದಾಗಿದೆ. ಯುವ ಘಟಕದ ವತಿಯಿಂದ ಮನೆ ಮನೆಗೆ ತೆರಳಿ ಯುವಕರಿಂದ ಐದು ವರ್ಷದಲ್ಲಿ ಪ್ರಧಾನಿ ನೀಡಿರುವ ಘೋಷಣೆಗಳು ಜಾರಿಯಾಗದಿರುವ ಬಗ್ಗೆ ಪ್ರಶ್ನೆ ಕೇಳಿಸಿ, ಅದನ್ನು ರಾಷ್ಟ್ರೀಯ ಯುವ ಕಾಂಗ್ರೆಸ್‌ ಘಟಕಕ್ಕೆ ತಲುಪಿಸುವಂತೆ ಸೂಚಿಸಲಾಗಿದೆ.

Advertisement

ನೀವು ಭರವಸೆ ನೀಡಿರುವ 2 ಕೋಟಿ ಉದ್ಯೋಗ ಎಲ್ಲಿ ?

 ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ನಿಮ್ಮ ಭರವಸೆ ಎಲ್ಲಿಗೆ ಬಂತು ? ಬಡ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದೇಕೆ ?

 ನೀವು ಎಲ್ಲರ ಖಾತೆಗಳಿಗೆ ಹಾಕುತ್ತೇನೆ ಎಂದು ಹೇಳಿರುವ 15 ಲಕ್ಷ ರೂ. ಎಲ್ಲಿ ?

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಯಾವುದೇ ಕೆಲಸ ಮಾಡಲಿಲ್ಲವೇಕೆ ?

Advertisement

ಕರ್ನಾಟಕದ ಯುವಕರಿಗೆ ಕೇಂದ್ರದ ಪರೀಕ್ಷೆಗಳಲ್ಲಿ ಅವಕಾಶ ಕಿತ್ತುಕೊಂಡಿರುವುದೇಕೆ ?

ನೂರಾರು ಜನರನ್ನು ಸಾಯಿಸಿ, ವ್ಯಾಪಾರಿಗಳನ್ನು ಬೀದಿಗೆ ತಳ್ಳಿ, ಉದ್ಯೋಗ ನಷ್ಟ ಮಾಡಿದ ನೋಟ್‌ಬ್ಯಾನ್‌ ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ?

ಸಾಮಾನ್ಯ ಜನರ ಮೇಲೆ ದುಬಾರಿ ತೆರಿಗೆ ಏಕೆ ವಿಧಿಸಿದ್ದೀರಾ ? ಪೆಟ್ರೋಲ್‌ ಹಾಗೂ
ಡಿಸೇಲ್‌ ಬೆಲೆ ಏಕೆ ಕಡಿಮೆ ಮಾಡಿಲ್ಲ ? ನಿಮ್ಮ ಪ್ರಚಾರಕ್ಕಾಗಿ 5,785 ಕೋಟಿ ರೂ. ಖರ್ಚು ಮಾಡಿದ್ದು ಏಕೆ ?

ನೀವು ಹೇಳಿರುವ ಸ್ಮಾರ್ಟ್‌ ಸಿಟಿ,ಬುಲೆಟ್‌ ರೈಲು ಎಲ್ಲಿವೆ ?

 ಕಾವೇರಿ, ಮಹದಾಯಿ ಹಾಗೂ ಬರಪರಿಹಾರ ನಿಧಿಯ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಏಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೀರಾ ?

Advertisement

Udayavani is now on Telegram. Click here to join our channel and stay updated with the latest news.

Next