Advertisement
ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ರೆಡಿ ಟು ಕುಕ್ ಚಿಕನ್ ಮತ್ತು ಕಚ್ಚಾ ಮಾಂಸದ ಉತ್ಪನ್ನಗಳು ಸಾಲ್ಮೊನೆಲ್ಲಾ ಎಂಬ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತವೆ. ಈ ಬ್ಯಾಕ್ಟೀರಿಯಾ ಆಹಾರವನ್ನು ವಿಷವಾಗಿಸುವ ಜೊತೆಗೆ ಹಲವು ರೀತಿಯ ಅನಾರೋಗ್ಯಗಳನ್ನು ತಂದೊಡ್ಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಈ ಕುರಿತು ಅಧ್ಯಯನ ನಡೆಸಿರುವ ಭಾಭಾ ಅಟೋಮಿಕ್ ರಿಸರ್ಚ್ ಸೆಂಟರ್, ಮುಂಬಯಿನ ವಿವಿಧ ಭಾಗಗಳಲ್ಲಿರುವ ಸೂಪರ್ ಮಾರ್ಕೆಟ್ ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಿಂದ ರೆಡಿ ಟು ಕುಕ್ ಚಿಕನ್ ಹಾಗೂ ಫ್ರೀಜರ್‌ನಲ್ಲಿ ಇರಿಸಿದ ಕಚ್ಚಾ ಮಾಂಸದ 87 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಈ ಉತ್ಪನ್ನಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಅಡಗಿರುವುದು ಪತ್ತೆಯಾಗಿದೆ. Advertisement
ಸಿದ್ಧ ಮಾಂಸದಲ್ಲಿ ಇರುತ್ತೆ ಹಾನಿಕಾರಕ ಬ್ಯಾಕ್ಟೀರಿಯಾ!
08:45 AM Aug 22, 2017 | Karthik A |
Advertisement
Udayavani is now on Telegram. Click here to join our channel and stay updated with the latest news.