Advertisement

ಮೇಡಂ, ನಿಮ್‌ ಹೇರ್‌ ಫ‌ಸ್ಟ್‌ಕ್ಲಾಸ್‌, ಯಾವ ಶಾಂಪೂ ಹಾಕ್ತೀರಾ!?

03:45 AM Jul 04, 2017 | Harsha Rao |

ಕಾಲೇಜಿಗೆ ಸೇರಿದ ಮೊದಲ ದಿನ ಕಾರಿಡಾರಿನಲ್ಲಿ ಎದುರಾದಾಗೆಲ್ಲಾ “ಗುಡ್‌ ಮಾರ್ನಿಂಗ್‌’, “ಗುಡ್‌ ಆಫ್ಟರ್‌ ನೂನ್‌’ ಅಂತ ಭಕ್ತಿಯಿಂದ ಸಲ್ಯೂಟ್‌ ಹೊಡೆಯುವವರು, “ಮೇಡಂ… ನಮ್ಮ ಮಮ್ಮಿನೂ ಟೀಚರ್‌’ ಅಂತ ಮ್ಯಾಚಿಂಗ್‌ ಮಾಡಿಕೊಳ್ಳುವವರು, “ನಮ್ಮ ಡ್ಯಾಡಿ ಡಿಸಿ ಆಫೀಸಿನಲ್ಲಿದ್ದಾರೆ ಮಿಸ್‌’ ಅಂತ ಲೆವೆಲ್ಲು ತೋರಿಸುವವರು… ಇದ್ದೇ ಇರುತ್ತಾರೆ…

Advertisement

ಕಾಲೇಜಿನ ಮೊದಲ ದಿನ ವಿದ್ಯಾರ್ಥಿಗಳ ನೆನಪಿನ ಆಲ್ಬಮ್ಮಿನಲ್ಲಿ ಮರೆಯದ ನೆನಪಾಗಿ ದಾಖಲಾಗಿರುತ್ತದೆ. ತಮ್ಮಲ್ಲಿರುವ ಬೆಸ್ಟ್‌ ಡ್ರೆಸ್‌ ಹುಡುಕಿ, ಧರಿಸಿಕೊಂಡು ಕಾಲೇಜು ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದ ಹುಡುಗ, ಹುಡುಗಿಯರ ಕಣ್ಣಲ್ಲಿ ಕುತೂಹಲ, ಸಡಗರ, ಆಸೆ, ಕನಸು ಮತ್ತು ಮೊದಲ ದಿನ ಆವರಿಸಬಹುದಾದ ಭೀತಿ ತುಂಬಿರುತ್ತದೆ.

ನಮ್ಮ ಮಹಿಳಾ ಕಾಲೇಜಿನಲ್ಲಿ ಮೊದಲ ದಿನ ಗ್ಯಾದರಿಂಗ್‌ ಇರುತ್ತದೆ. ನಮ್ಮ ಡಿಪಾರ್ಟ್‌ಮೆಂಟಿಗೆ ಅಡ್ಮಿಷನ್‌ ಆದ ಹುಡುಗಿಯರಿಗೆ ಸದರಿ ವರ್ಷ ನಾವು ತೆಗೆದುಕೊಳ್ಳುವ ವಿಷಯಗಳ ಬಗ್ಗೆ ಸ್ಥೂಲವಾಗಿ ವಿವರಿಸಿ ಹೇಳುವುದು ನನ್ನ ವಾಡಿಕೆ. 

ಹಾಗೆ ಮಾತು ಮುಗಿಸಿ, ನನ್ನ ಕ್ಯಾಬಿನ್‌ಗೆ ಬಂದು ಕುಳಿತೆ. ಹುಡುಗಿಯೊಬ್ಬಳು ನನ್ನನ್ನೇ ಫಾಲೋ ಮಾಡಿರೋರು ಬಂದು, “ಮೇಡಂ ನೀವು ಎಷ್ಟು ಚೆನ್ನಾಗಿ ಇಂಗ್ಲಿಷ್‌ ಮಾತಾಡ್ತೀರ!’ ಅಂತ ಕಣ್ಣರಳಿಸಿದಳು.
ಹಳ್ಳಿಗಳಿಂದ ಬರುವ ಮಕ್ಕಳಿಗೆ ನನ್ನ ಇಂಗ್ಲಿಷ್‌ ಅದ್ಭುತ ಅನ್ನಿಸಿಬಿಡುವುದು ಸಹಜ. “ನನ್ನ ಸಬೆjಕ್ಟ್ ಇಂಗ್ಲಿಷ್‌ ಅಲ್ವಮ್ಮಾ… ಹಾಗಾಗಿ ಅದು ಅದ್ಭುತ’ ಅಂದೆ.

ಅವಳು ಅಲ್ಲಿಗೇ ನಿಲ್ಲಿಸದೆ, “ಮೇಡಂ ನಿಮ್ಮ ಹೇರ್‌ ತುಂಬಾ ಉದ್ದ ಇದೆ. ಯಾವ ಶಾಂಪೂ ಹಾಕ್ತೀರಾ?’ ಅಂದಳು ನಾಚಿಕೊಳ್ಳುತ್ತಾ.

Advertisement

ಒಂದು ದಶಕದಿಂದ ಬೀಚಿಂಗ್‌ ಪ್ರೊಫೇನ್ನಿನಲ್ಲಿರುವುದರಿಂದ ಕಣ್ಣು ಹೇಗೆ ಟ್ಯೂನ್‌ ಆಗಿದೆಯೆಂದರೆ, ಹುಡುಗಿಯರು ಏಣಿ ಇಲ್ಲದೆ ಹತ್ತಿಸುತ್ತಿದ್ದಾರಾ ಅಥವಾ ನಿಜವಾದ ಮೆಚ್ಚುಗೆ ಉಂಟಾಗಿದೆಯಾ ಎನ್ನುವುದು ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ.
ಈಗ ಬಂದ ಹುಡುಗಿ ಶಾಂಪೂ ಇಲ್ಲದೆ ತಲೆ ತಿಕ್ಕುತ್ತಿದ್ದಾಳೆ ಅನ್ನಿಸಿತು!

ಕಾಲೇಜಿಗೆ ಸೇರಿದ ಮೊದಲ ದಿನ ಕಾರಿಡಾರಿನಲ್ಲಿ ಎದುರಾದಾಗೆಲ್ಲಾ “ಗುಡ್‌ ಮಾರ್ನಿಂಗ್‌’, “ಗುಡ್‌ ಆಫ್ಟರ್‌ ನೂನ್‌’ ಅಂತ ಭಕ್ತಿಯಿಂದ ಸಲ್ಯೂಟ್‌ ಹೊಡೆಯುವವರು, “ಮೇಡಂ… ನಮ್ಮ ಮಮ್ಮಿನೂ ಟೀಚರ್‌’ ಅಂತ ಮ್ಯಾಚಿಂಗ್‌ ಮಾಡಿಕೊಳ್ಳುವವರು, “ನಮ್ಮ ಡ್ಯಾಡಿ ಡಿಸಿ ಆಫೀಸಿನಲ್ಲಿದ್ದಾರೆ ಮಿಸ್‌’ ಅಂತ ಲೆವೆಲ್ಲು ತೋರಿಸುವವರು… ಇದ್ದೇ ಇರುತ್ತಾರೆ. ಇಂಪ್ರಸ್‌ ಮಾಡಲು ಅದೆಷ್ಟು ದಾರಿಗಳು! ಆದರೆ, ಕೆಲವು ಹುಡುಗಿಯರು ಮಾತನಾಡದಿದ್ದರೂ ನಿಜವಾದ ಗೌರವ ಮತ್ತು ಬೆರಗು ತುಂಬಿ ನೋಡುತ್ತಿರುತ್ತಾರೆ. ಆ ಮುಖಗಳು ನೆನಪಿನಲ್ಲಿ ಹಾಗೆಯೇ ರಿಜಿಸ್ಟರ್‌ ಆಗಿಬಿಡುತ್ತವೆ.
ಒಮ್ಮೆ ಹುಡುಗಿಯೊಬ್ಬಳು, ಅದು ಹೇಗೋ ನನ್ನ ಜಾತಿ ಪತ್ತೆ ಹಚ್ಚಿ, “ಮೇಡಂ… ನಾನೂ ನಿಮ್ಮ ಕ್ಯಾಸ್ಟೇ’ ಎಂದು ಹೆಮ್ಮೆಯಿಂದ ಹೇಳಿದಳು. “ನನ್ನ ಮಕ್ಕಳನ್ನು ಶಾಲೆ ಸೇರಿಸುವಾಗ ಜಾತಿ ಕಾಲಂ ಅನ್ನು ಹಾಗೆಯೇ ಖಾಲಿ ಬಿಡುತ್ತೇನೆ, ಕಣಮ್ಮಾ’ ಎಂದೆ. “ಓಕೆ, ಮಿಸ್‌…’ ಎಂದು ಜಾಗ ಖಾಲಿ ಮಾಡಿದಳು!

– ಎಚ್‌.ಡಿ. ಸುನೀತಾ, ಸರ್ಕಾರಿ ಕಾಲೇಜು, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next