Advertisement

ನಿನ್ನ ತಿರಸ್ಕಾರವೇ ನನ್ನ ಗೆಲುವಿಗೆ ನಾಂದಿಯಾಯಿತು !

07:25 PM Feb 17, 2020 | mahesh |

ಕಾರಣವಿಲ್ಲದೇ ಸೋಲುವವಳು ನಾನಲ್ಲ. ಕಾರಣ ಹುಡುಕುವ ವೇಳೆಗಾಗಲೇ ಕಾಲವೂ ಸರಿದು ಹೋಗಿತ್ತು. ಕಾಲ ಯಾರನ್ನೂ ಕಾಯಲಿಲ್ಲ. ಒಂದಂತೂ ನಿಜ, ನೀನು ತೊರೆದ ಅರೆಘಳಿಗೆಯೇ, ನನ್ನೆಲ್ಲಾ ನಿರೀಕ್ಷೆಗಳು ಮೂಲೆಗೆ ಸೇರಿದ್ದವು.

Advertisement

ನೀ ತೊರೆದ ನಂತರ ಬದುಕಿನ ದಿಕ್ಕೇನೂ ಬದಲಾಗಲಿಲ್ಲ. ಬದಲಾಗಿ ನೀನಿಲ್ಲದಿದ್ದರೂ ಬದುಕಬಲ್ಲೆ ಎಂದು ನಿರ್ಧರಿಸಿದ್ದೆ. ಯಾರ ಅಪ್ಪಣೆಯಿಲ್ಲದೇ ಕಾಲದ ಜೊತೆಗೆ, ಭಾವನೆಗಳ ಜೀಕುವಿಕೆಯೊಂದಿಗೆ ಸಾಗುತ್ತಿದ್ದೆ.

ಇವತ್ತಿನ ನನ್ನ ಬದುಕಿನ ಧಾಟಿಯನ್ನು ನೋಡಿದಾಗ, ಅಬ್ಟಾ, ನೀ ತಿರಸ್ಕರಿಸಿ ಹೋದದ್ದು ಒಳ್ಳೆಯದೇ ಆಗಿದೆ ಎಂದು ಅನಿಸಿದ್ದೂ ಸುಳ್ಳಲ್ಲ. ಇವತ್ತಿನ ಏರುಗತಿಯಲ್ಲಿ ಸಾಗುತ್ತಿರುವ ಈ ಬದುಕಿನ ಹಿಂದಿರುವ ಸತ್ಯಯಾವುದೆಂದರೆ ನಿನ್ನ ಎದುರಲ್ಲಿ ಚೆನ್ನಾಗಿಯೇ ಬದುಕಬೇಕು ಎಂಬ ಛಲವೇ.

ಬದುಕಿನ ಹಳೆ ಅಧ್ಯಾಯವನ್ನು ತಿರುವಿ ಹಾಕಿದಾಗ, ನಿನ್ನನ್ನು ಒಪ್ಪಿಕೊಂಡ, ನನ್ನಷ್ಟು ಮೂರ್ಖರು ಯಾರೂ ಇಲ್ಲ ಅನಿಸಿತು. ಹಣಕ್ಕೆ ಬೆಲೆ ಕೊಟ್ಟವಳು ನಾನಲ್ಲ. ಒಂದಷ್ಟು ಭಾವನೆಗೆ ಬೆಲೆ ಕೊಡುವ ವ್ಯವಧಾನ ಕೂಡ ನಿನಗಿರಲಿಲ್ಲ. ಕೆಲವೊಮ್ಮೆ ಮೈ ಮನದ ಪ್ರಶ್ನೆಗಳ ಮಹಾಸಾಗರದಲ್ಲಿ ಮಿಂದೆಳುತ್ತಿತ್ತು. ಯಾರೂ ಊಹಿಸಲಾಗದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದೇನಾ ಅನಿಸುತ್ತಿತ್ತು….

ಇರಲಿ ಬಿಡು, ನಡೆದು ಹೋದ ಕಹಿ ಅಧ್ಯಾಯವನ್ನು ನೆನಪಿಸುವ ಮನಸ್ಸಿಲ್ಲ ನನಗೆ. ನಿನ್ನನ್ನು ನೆನಪಿನಿಂದ ಕಿತ್ತೆಸೆದ ಕಾಲ ಸರಿದುಹೋಗಿದೆ. ಇವತ್ತಿನ ನನ್ನ ಕಠೊರ ಮನಸ್ಥಿತಿಯ ಹಿಂದೆ ನಿನ್ನದೂ ಪಾಲಿದೆ ಎಂಬುದನ್ನು ಮರೆಯುವಂತಿಲ್ಲ. ಅಂದು ನೀ ಹೇಳದೇ ಹೊರಡದಿದ್ದರೆ, ಇಂದಿಗೂ ನನ್ನಲ್ಲಿ ಇಷ್ಟೊಂದು ಬದಲಾವಣೆಗಳು ಸಾಧ್ಯವಿತ್ತಾ? ಗೊತ್ತಿಲ್ಲ. ಬದುಕ ತುಂಬಾ ಅರಗಿಸಿಕೊಳ್ಳದಷ್ಟೂ ಕಹಿ ಅನುಭವಗಳ ಹೂರಣವನ್ನು ಕೊಟ್ಟು ಹೋಗಿದ್ದೀಯ.

Advertisement

ನನ್ನ ನೆನಪೆಂಬ ಮುಳ್ಳು, ನಿನ್ನನ್ನು ಕೆಲಬಾರಿಯಾದರೂ ಚುಚ್ಚಿದ್ದಿರಬಹುದು. ನಿನ್ನ ಮನೆಯಲ್ಲಿ ಸಂಪತ್ತು ಮಳೆಯಂತೆ ಸುರಿಯಬಹುದು. ಇಲ್ಲಿಯ ತನಕ ನನ್ನ ಬದುಕುವ ಛಲ ನಿನ್ನನ್ನು ಅಣುಕಿಸುವಂತೆ ಮಾಡಿದ್ದಿರಬಹುದು. ಏನೇ ಆಗಲಿ, ನೀನು ನಡೆದುಕೊಂಡ ರೀತಿಗೆ ನಾನು ಉತ್ತರ ನೀಡಿಯಾಗಿದೆ. ಸಾಧ್ಯವಾದರೆ ಅರಗಿಸಿಕೊ, ಇಲ್ಲವಾದರೆ ಮೌನವಾಗಿ ನಡೆದು ಬಿಡು.

ವ‌ಂದನೆಗಳೊಂದಿಗೆ,

ಸಾಯಿನಂದಾ ಚಿಟ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next