Advertisement
ವಕ್ಫ್ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಯಿಂದ ಅಧ್ಯಯನ ತಂಡ ರಚನೆ ಮಾಡಲಾಗಿದ್ದು, ನ. 21 ಅಥವಾ 22ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.
Related Articles
Advertisement
ಶಾಸಕ ಯತ್ನಾಳ್ ಬಿಜೆಪಿಯ ಹಿರಿ ಯರು. ಅವರು ನೈಜ ವರದಿ ತಂಡದಲ್ಲಿ ಪ್ರಮುಖರು ಇ¨ªಾರೆ. ಅವರನ್ನೂ ಒಳಗೊಂಡಂತೆ ನಾವು ಪ್ರವಾಸ ಮಾಡಲಿದ್ದೇವೆ. ಈ ವಿಷಯದಲ್ಲಿ ಗೊಂದಲ ಇಲ್ಲ. ಉಪ ಚುನಾವಣೆ ಮತದಾನಕ್ಕೆ ಮುಂಚಿತವಾಗಿ ಪಕ್ಷದ ಆಂತರಿಕ ಸಭೆ ಮಾಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಎಲ್ಲ ಅಭಿಪ್ರಾಯವನ್ನು ಮನ್ನಿಸಿ ದಿನಾಂಕ ನಿರ್ಧರಿಸಿದ್ದೇವೆ. ಚುನಾವಣೆ ವೇಳೆ ಆ ಕಡೆ ಗಮನ ಕೊಡುವುದು ಸಹಜ. ನಮ್ಮ ಹೋರಾಟ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲಯತ್ನಾಳ್ಗೆ ವಕ್ಫ್ ಸಂಬಂಧ ರೈತರ ಕಾಳಜಿ ಇರುವುದನ್ನು ನಾವು ನೋಡುತ್ತಿದ್ದೇವೆ. ಆ ಕಾಳಜಿ ಬಿಜೆಪಿಯಲ್ಲೂ ಇರುವುದ ರಿಂದ ಒಟ್ಟಾಗಿ ಹೋರಾಟ ಮಾಡಲಿ ದ್ದೇವೆ. ಇರುವವರನ್ನು ಕಳಕೊಂಡು ಕೆಲಸ ಮಾಡುವ ಆವಶ್ಯಕತೆ ಇಲ್ಲ. ಭಿನ್ನಾಭಿ ಪ್ರಾಯ ಇ¨ªಾಗಲೇ ಪಕ್ಷ ಸರಿದಾರಿಯಲ್ಲಿ ನಡೆಯುತ್ತದೆ. ಈಗಲೂ ಕೂಡ ಸರಿದಾರಿ ಯಲ್ಲಿ ನಡೆಯಲು ಅವರನ್ನೂ ಕೂಡ ಸೇರಿಸಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಬೆಲ್ಲದ್, ಕಾರಜೋಳ ಹೆಸರು ಸೇರ್ಪಡೆ
ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಈ ಹಿಂದೆ ರಚಿಸಿದ್ದ ಸತ್ಯಶೋಧನ ಸಮಿತಿ ಅಧ್ಯಕ್ಷ ರನ್ನೇ “ನಮ್ಮ ಭೂಮಿ ನಮ್ಮ ಹಕ್ಕು’ ಅಧ್ಯಯನ ಪ್ರವಾಸದ ತಂಡದಿಂದ ಹೊರ ಗಿಟ್ಟು ಮುಜುಗರಕ್ಕೆ ಈಡಾದ ಬಿಜೆಪಿ, ಕೊನೆಗೆ ಪಟ್ಟಿ ಪರಿಷ್ಕರಣೆ ಮಾಡಿದೆ.ಈ ಸಮಿತಿಯ ಅಧ್ಯಕ್ಷರಾಗಿದ್ದ ಸಂಸದ ಗೋವಿಂದ ಕಾರಜೋಳ ಅವರನ್ನು ಶುಕ್ರವಾರ ಬಿಡುಗಡೆ ಮಾಡಿದ ತಂಡದ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಅದೇ ರೀತಿ ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌ಗೂ ಸ್ಥಾನ ಕಲ್ಪಿಸಿರಲಿಲ್ಲ. ಈ ವಿಚಾರ ವಿವಾದದ ಸ್ವರೂಪ ಪಡೆಯ ಬಹುದೆಂಬುದು ಗೊತ್ತಾಗುತ್ತಿದ್ದಂತೆ ಪಟ್ಟಿ ಪರಿಷ್ಕರಣೆ ಮಾಡಿ, ಇವರಿಬ್ಬರನ್ನೂ ಸೇರ್ಪಡೆ ಮಾಡಲಾಗಿದೆ. ಕಣ್ತಪ್ಪಿನಿಂದ ಈ ರೀತಿಯಾಗಿದೆ. ಉದ್ದೇಶ ಪೂರ್ವಕ ವಲ್ಲ ಎಂದು ಬಿಜೆಪಿ ರಾಜ್ಯ ಘಟಕ ಸ್ಪಷ್ಟನೆ ನೀಡಿದೆ. ಹೇಗಿರಲಿದೆ ಪ್ರತಿಭಟನೆ? ಈ ವಾರದ ಪ್ರತಿಭಟನೆ ವೇಳೆ ಜನರಿಂದ ಅಹವಾಲು ಸ್ವೀಕಾರ
ಅಧ್ಯಯನ ತಂಡದಿಂದ ಸಮಸ್ಯೆಗಳ ಆಲಿಸುವಿಕೆ
ಬೆಳಗ್ಗೆಯಿಂದ ಸಂಜೆಯವರೆಗೆ ರೈತರ ಅಹವಾಲು ಸ್ವೀಕಾರ
ಪ್ರತೀ ತಂಡದಿಂದ ಡಿಸೆಂಬರ್ ಮೊದಲ ವಾರವೇ ಪ್ರವಾಸ ಆರಂಭ
ಕನಿಷ್ಠ 8-10 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಬಿಜೆಪಿ ತಂಡಗಳು
ಅಧಿವೇಶನದ ವೇಳೆ ಬೆಳಗಾವಿ ಯಲ್ಲಿ ಬೃಹತ್ ಪ್ರತಿಭಟನೆ
50ರಿಂದ 60 ಸಾವಿರ ಸಾರ್ವಜನಿಕರು, ರೈತರು ಭಾಗಿ
ಪ್ರತೀ ಜಿಲ್ಲೆ, ಹೋಬಳಿ, ಪಂಚಾಯತ್ ಮಟ್ಟದಲ್ಲಿ ವಕ್ಫ್ ಅಹವಾಲು ಸ್ವೀಕಾರ ಬಿಜೆಪಿ ಯಾತ್ರೆಯ ತಂಡದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಡುವ ಮೂಲಕ ಒಬ್ಬೊಬ್ಬರನ್ನೇ ಬಿಡುತ್ತಿದ್ದಾರೆ. ಅಪ್ಪ-ಮಕ್ಕಳು ಇದೇ ದಂಧೆ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ನಮ್ಮ ದೊಡ್ಡ ಹೋರಾಟ ನೋಡಿ ಅವರು ಮೂರು ತಂಡ ರಚಿಸಿದ್ದಾರೆ. ಅದಕ್ಕೆ ದಿನಾಂಕ ಏನೂ ಇಲ್ಲ. ಅವ್ವ-ಅಪ್ಪ ಇಲ್ಲ. ಯತ್ನಾಳ್ ಮಾಡಿದ್ದಾರೆ ಎಂದು ಅವರದ್ದೂ ಒಂದು ತಂಡ ರಚಿಸಿದ್ದಾರೆ.
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ