Advertisement

ಯುವ ಸಮುದಾಯವೇ ದೇಶದ ಭವಿಷ್ಯ: ಜಗ್ಗೇಶ್‌

12:26 PM Mar 27, 2018 | Team Udayavani |

ಯಲಹಂಕ: ಪ್ರಧಾನಿ ಮೋದಿ ಅವರ ದೃಢ ನಂಬಿಕೆ, ಉತ್ಸಾಹ, ಚೈತನ್ಯ ಮತ್ತು ನವೀನ ಚಿಂತನೆ ಹೊಂದಿರುವ ಯುವ ಸಮುದಾಯ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಶಾಸಕ, ನಟ ಜಗ್ಗೇಶ್‌ ಹೇಳಿದರು.

Advertisement

ಯಲಹಂಕ ಉಪನಗರದ ಶೇಷಾದ್ರಿ ಪುರಂ ಕಾಲೇಜಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ನವ ಬೆಂಗಳೂರಿ ನಿಂದ ನವ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಯುವ ಸಮುದಾಯ ದೇಶದ ಭವಿಷ್ಯ ಎಂದರು. ಶಾಸಕ ಎಸ್‌.ಆರ್‌. ವಿಶ್ವನಾಥ್‌ ಮಾತನಾಡಿ, ಬೆಂಗಳೂರು ತನ್ನ ಸಹಜ ಸೌಂದರ್ಯವನ್ನು ಉಳಿಸಿಕೊಂಡೇ ಪ್ರಗತಿ ಹೊಂದಬೇಕು ಎಂಬುದು ನಾಡಪ್ರಭು ಕೆಂಪೇಗೌಡರ ಕನಸಾಗಿತ್ತು.

ಆದರೆ ಕಳೆದ 5 ವರ್ಷಗಳಲ್ಲಿ ನಗರವನ್ನು ನಿರ್ಲಕ್ಷಿಸಲಾಗಿದೆ. ನಾವಿದನ್ನು ತಡೆಯಬೇಕಿದೆ. ಜತೆಗೆ ನಮ್ಮ ಪ್ರೀತಿಯ ಬೆಂಗಳೂರನ್ನು ಸುಂದರ ಮತ್ತು ಪ್ರಗತಿಯ ಸಂಕೇತವಾಗಿಸಬೇಕಿದೆ ಎಂದು ಕರೆ ನೀಡಿದರು. ಬಿಜೆಪಿ ಸಹ ವಕ್ತಾರ ಎ.ಎಚ್‌.ಆನಂದ್‌, ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್‌. ಎನ್‌.ರಾಜಣ್ಣ, ಬಿಬಿಎಂಪಿ ಸದಸ್ಯರಾದ ಸತೀಶ್‌, ಯಲಹಂಕ ಬಿಜೆಪಿ ಅಧ್ಯಕ್ಷ ದಿಬ್ಬೂರು ಜಯಣ್ಣ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next