Advertisement

ಯುವ ಜನತೆ ಜಾಲತಾಣಗಳ ದಾಸರಾಗದಿರಿ

07:25 AM Jan 29, 2019 | |

ಮೈಸೂರು: ಸಾಮಾಜಿಕ ಜಾಲತಾಣಗಳ ಬಳಕೆಯ ಅರಿವಿಲ್ಲದೆ, ಯುವಜನತೆ ಅವುಗಳಿಗೆ ದಾಸರಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ನಾಟಕ ಅಕಾಡೆಮಿ ಸದಸ್ಯರಾದ ಪತ್ರಕರ್ತ ಡಾ.ಗಣೇಶ ಅಮೀನಗಡ ಅಭಿಪ್ರಾಯಪಟ್ಟರು.

Advertisement

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಜಾಣ – ಜಾಣೆಯರ ಬಳಗವು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಮಾನವನ ಬದುಕಿನಲ್ಲಿ ಸಮಯ ಅತ್ಯಂತ ಮಹತ್ವವಾದುದು. ಹೀಗಾಗಿ ಸಾಮಾ ಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಿರಬೇಕು. ಬಳಸುವ ಮೊದಲೇ ಅದರ ಒಳಿತು ಕೆಡುಕುಗಳ ಬಗ್ಗೆ ಯೋಚಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಮೋಸ, ವಂಚನೆಗಳು ಹೆಚ್ಚುತ್ತಿವೆ.

ಎಷ್ಟೋ ಸಂದರ್ಭಗಳಲ್ಲಿ ಮೋಸ ಹೋದ ಮೇಲೆ ನಮ್ಮ ಅರಿವಿಗೆ ಬರುತ್ತದೆ. ಗಾಜಿನ ಮನೆಯಲ್ಲಿ ವಾಸಿಸುವ ರೀತಿಯಲ್ಲಿ ಇವುಗಳನ್ನು ಬಳಸುವಾಗ ಎಚ್ಚರವಿರಬೇಕು. ಪತ್ರಿಕೆಗಳು ಮಾಹಿತಿಯ ಜೊತೆಗೆ ಭಾಷಾ ಶುದ್ಧಿ, ಶಬ್ದಸಂಪತ್ತು ಹೆಚ್ಚಿಸುವುದರಿಂದ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿ ಕೊಳ್ಳಿ ಎಂದು ಹೇಳಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಸಮಾಜಮುಖೀಯಾಗಿ ಆಲೋಚಿಸಿ ಬರೆಯುವ ಪ್ರಬಂಧವು ಉತ್ತಮ ಬರವಣಿಗೆಯ ಸ್ಥಾನ ಪಡೆಯ ಬಲ್ಲದು. ಸ್ನೇಹಿತರೊಂದಿಗೆ ಚರ್ಚಿಸಿ, ವಿಮರ್ಶೆ ಮಾಡಿ ಬರೆದರೆ ಅದು ಆಕರ್ಷಕ ವಾಗಿಯೂ ವಿಮರ್ಶಾತ್ಮಕವಾಗಿಯೂ ಇರುತ್ತದೆ.

Advertisement

ಆದ್ದರಿಂದ ಯಾವುದೇ ವಿಷಯ ವನ್ನು ಮೊದಲು ನೀವೆ ಚೆನ್ನಾಗಿ ಮನನ ಮಾಡಿಕೊಂಡು ನಂತರ ಬರವಣಿಗೆ ರೂಪಕ್ಕಿ ಳಿಸಿದರೆ ಉತ್ತಮ ಬರವಣಿಗೆ ಹೊಮ್ಮಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next