Advertisement

ವೈವಾಹಿಕ ಸಂಬಂಧಕ್ಕೆ ಕೊಳ್ಳುಬಾಕ ಸಂಸ್ಕೃತಿ ಅಡ್ಡಿ: ಕೇರಳ ಹೈಕೋರ್ಟ್‌ ಆತಂಕ

08:14 PM Sep 01, 2022 | Team Udayavani |

ಕೊಚ್ಚಿ:  ಕೇರಳದಲ್ಲಿ ವೈವಾಹಿಕ ಸಂಬಂಧಗಳು “ಬಳಸಿ ಮತ್ತು ಬಿಸಾಡಿ’ ಎಂಬ ಗ್ರಾಹಕ ಸಂಸ್ಕೃತಿಯಿಂದ ಪ್ರಭಾವವಾದಂತಿದೆ ಎಂದು ಕೇರಳ ಹೈಕೋರ್ಟ್‌ ಕಳಕಳ ವ್ಯಕ್ತಪಡಿಸಿದೆ.

Advertisement

ಲಿವ್‌ ಇನ್‌ ರಿಲೀಶನ್‌ಶಿಪ್‌ ಪ್ರಕರಣಗಳು ಹೆಚ್ಚುತ್ತಿವೆ. ಸ್ವಾರ್ಥದ ಕಾರಣದಿಂದ ಅನೇಕರು ವಿಚ್ಛೇದನಕ್ಕೆ ಮುಂದಾಗುತ್ತಿರುವುದು ಟ್ರೆಂಡ್‌ ಆಗಿದೆ ಎಂದು ನ್ಯಾ.ಎ.ಮೊಹಮ್ಮದ್‌ ಮುಸ್ತಾಕ್‌ ಮತ್ತು ನ್ಯಾ.ಸೋಫಿ ಥಾಮಸ್‌ ನೇತೃತ್ವದ  ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.

“ಜವಾಬ್ದಾರಿ ಇಲ್ಲದ ಸ್ವತಂತ್ರ ಜೀವನಕ್ಕೆ ಮದುವೆ ಒಂದು ಮಾರಕ ಎಂದು ಯುವಜನತೆ ಭಾವಿಸಿದಂತಿದೆ. ಇಂಗ್ಲೀಷಿನ ವೈಫ್ ಪದಕ್ಕೆ ಈ ಹಿಂದಿನ “ವೈಸ್‌ ಇನ್ವೆಸ್ಟ್‌ಮೆಂಟ್‌ ಫಾರ್‌ ಎವರ್‌’ ಬದಲಾಗಿ “ವರಿ ಇನ್ವೈಟೆಡ್‌ ಫಾರ್‌ ಎವರ್‌’ ಎಂದು ಭಾವಿಸಿದಂತಿದೆ. ಬಳಸಿ ಮತ್ತು ಬಿಸಾಡಿ  ಎಂಬ ಗ್ರಾಹಕ ಸಂಸ್ಕೃತಿಯು ನಮ್ಮ ವೈವಾಹಿಕ ಸಂಬಂಧಗಳ ಮೇಲೆ ಪ್ರಭಾವ ಬೀರಿದೆ.  ತಮಗೆ ಸರಿಯನಿಸದೇ ಇದ್ದಾಗ ವಿದಾಯ ಹೇಳಲು ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜದಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ ಹೆಚ್ಚುತ್ತಿದೆ,’ ಎಂದು ನ್ಯಾಯಪೀಠ  ಅಭಿಪ್ರಾಯಪಟ್ಟಿದೆ.

ಅನ್ಯ ಮಹಿಳೆಯೊಂದಿಗಿನ ಸಂಬಂಧದ ಕಾರಣ ಪತ್ನಿಗೆ ವಿಚ್ಛೇದನ ನೀಡಲು ಪತಿಯೊಬ್ಬ ಅರ್ಜಿ ಸಲ್ಲಿಸಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೈಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿತಲ್ಲದೆ, ಮೇಲ್ಗಂಡ ಅಭಿಪ್ರಾಯ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next