Advertisement

ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

06:50 AM Jul 26, 2017 | Team Udayavani |

ಕುಂದಾಪುರ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ  ರೈತರ ಸಾಲವನ್ನು ಮಾಡುವಂತೆ ಆಗ್ರಹಿಸಿ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಹಾಗೂ  ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಇಂದು ಕುಂದಾಪುರ ಸ್ಟೇಟ್‌ ಬ್ಯಾಂಕ್‌ ಕಚೇರಿಯ ಎದುರು ಪ್ರತಿಭಟನೆ ನಡೆಸಿ  ಕೇಂದ್ರ ಸರಕಾರಕ್ಕೆ ಮನವಿಯನ್ನು  ಸಲ್ಲಿಸಿತು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಯುವ ಕಾಂಗ್ರೆಸ್‌ ನಾಯಕ ಹಾಗೂ ನಗರ ಪಾಧಿಕಾರದ ಅಧ್ಯಕ್ಷ ವಿಕಾಸ್‌ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿನ ಬರ, ರೈತರ ಸಂಕಷ್ಟಗಳನ್ನು ಮನಗಂಡ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು. ಇದರಿಂದಾಗಿ ಸುಮಾರು 8,165 ಕೋ.ರೂ. ಸಾಲಮನ್ನಾ ಆಗಲಿದ್ದು , ಸಹಕಾರಿ ಸಂಘಗಳ ಮೂಲಕ ಸಾಲಪಡೆದ ಸುಮಾರು 22 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಆದರೆ ಶೇ.80ರಷ್ಟು  ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದಿದ್ದು ಅವರು ಈ ಸಾಲಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಈ ಹಿನ್ನಲೆಯಲ್ಲಿ   ಕೇಂದ್ರ ಸರಕಾರ ರಾಷ್ಟ್ರೀಕೃತ , ಗ್ರಾಮೀಣ ಹಾಗೂ ಇತರ ಬ್ಯಾಂಕುಗಳಲ್ಲಿನ ರೈತರ ಸಾಲವನ್ನು  ಮನ್ನಾಗೊಳಿಸಿ ಕರ್ನಾಟಕದ ರೈತರ ಪಾಲಿಗೆ ನ್ಯಾಯಕೊಡಬೇಕು ಎಂದರು.

ಪ್ರತಿಭಟನೆಯ ನೇತೃತ್ವವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ  ಯುವ ಕಾಂಗ್ರೆಸ್‌ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ವಹಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ಅಮೀನ್‌, ಕಾಂಗ್ರೆಸ್‌ ಪಕ್ಷದ ಮುಖಂಡರುಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಣಿ ನಾರಾಯಣ ಆಚಾರ್‌,  ಗಣೇಶ್‌ ಶೇರುಗಾರ್‌, ವಿನೋದ್‌ ಕ್ರಾಸ್ತಾ,  ರೇವತಿ ಶೆಟ್ಟಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ್‌, ಹರಿಪ್ರಸಾದ್‌ ಶೆಟ್ಟಿ, ಚಂದ್ರ ಅಮೀನ್‌, ಕೇಶವ ಭಟ್ಟ, ಪ್ರಭಾಕರ ಕೋಡಿ, ಶಿವರಾಮ ಪುತ್ರನ್‌, ಶೋಭಾ ಸಚ್ಚಿದಾನಂದ, ಸಂಪತ್‌ ಶೆಟ್ಟಿ , ರಮೇಶ್‌ ಶೆಟ್ಟಿ, ಉಮೇಶ್‌, ಶಿವಾನಂದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next