Advertisement
ಬೇಸಿಗೆ ಬಂದರೆ ಸಾಕು ತಾಲೂಕಿನ 40ಕ್ಕೂಹೆಚ್ಚು ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಎದುರಾಗುತ್ತಿದೆ. ಎನ್‌ಆರ್‌ಬಿ ನಾಲೆ ಕೊನೆ ಭಾಗ, ಗುಡ್ಡಗಾಡು ಪ್ರದೇಶ,ರಸ್ತೆ ಸಂಚಾರವಿಲ್ಲದ ತಾಂಡಾ, ದೊಡ್ಡಿಗಳಲ್ಲಿನೀರಿನ ಅಭಾವ ದಿನೇ ದಿನೇ ಹೆಚ್ಚಾಗುತ್ತಿದೆ.
Related Articles
Advertisement
ಈ ಬಗ್ಗೆ ಅ ಧಿಕಾರಿಗಳು ಸರ್ಕಾರಕ್ಕೆಮಾಹಿತಿ ನೀಡಿದ್ದು, ಇದರ ನಿರ್ವಹಣೆಗಾಗಿ ಶುದ್ಧಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ.ಹಲವು ಕಡೆ ಯೋಜನೆ ನನೆಗುದಿಗೆಬಿದ್ದಿದ್ದರೆ, ಕೆಲಕಡೆ ನಿರ್ವಹಣೆ ಕೊರತೆಯಿಂದಮೂಲೆ ಸೇರಿವೆ.
ಬೆರಳೆಣಿಕೆ ಪ್ಲಾಂಟ್‌ಗಳು ಮಾತ್ರಕಾರ್ಯನಿರ್ವಹಿಸುತ್ತಿವೆ. ಜನರು ಅನಿವಾರ್ಯವಾಗಿಅರ್ಶೇನಿಕ ಹಾಗೂ ಪ್ಲೋರೈಡ್‌ಯುಕ್ತ ನೀರುಕುಡಿಯುತ್ತಿದ್ದಾರೆ. ಮೊಣಕಾಲು ನೋವು, ಕೀಲುಬೇನೆ, ಕಂದು ಹಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಹಳ್ಳಹಿಡಿದ ಯೋಜನೆಗಳು
ಕುಡಿವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ 30 ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ.ಅದರಲ್ಲಿ 17 ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, 13 ಘಟಕಗಳು ನಿರ್ವಹಣೆ ಕೊರತೆಯಿಂದನಿರುಪಯುಕ್ತವಾಗಿವೆ.
ಸುಮಾರು 20ಕ್ಕೂ ಹೆಚ್ಚು ಪ್ಲಾಂಟ್‌ಗಳು ಅರೆಬರೆಯಾಗಿವೆ. ಹೊಸ ಪ್ಲಾಂಟ್‌ಗಳಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರೂ ಸಂಬಂ ಧಿಸಿದ ಇಲಾಖೆಯಿಂದ ಅನುಮೋದನೆ ದೊರತಿಲ್ಲ.ಆಲ್ಕೋಡ್, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್, ನೀಲವಂಜಿ, ಸೂಗರಾಳ, ಗಣಜಲಿಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್ ನಿರುಪಯುಕ್ತವಾಗಿವೆ. ಕೊತ್ತದೊಡ್ಡಿ ಗ್ರಾಪಂನ ಹಳ್ಳಿಗಳಿಗೆ ಶಾಶ್ವತಕುಡಿವ ನೀರು ಕಲ್ಪಿಸಲು 4.60 ಕೋಟಿ ರೂ. ವೆಚ್ಚದ ಯೋಜನೆ ಹಳ್ಳ ಹಿಡಿದಿದೆ. ಇದರಿಂದಯಮನೂರು, ಎಲ್.ದೊಡ್ಡಿ, ಲಿಂಗನದೊಡ್ಡಿ, ಮಲ್ಲೇನಾಯಕದೊಡ್ಡಿ, ಕರಡೋಣಿಯಲ್ಲಿನೀರಿನ ಸಮಸ್ಯೆಯಿದೆ.
ನಾಗರಾಜ ತೇಲ್ಕರ್