Advertisement
ಸೂರ್ಯನ ಬಿಂಬವನ್ನು ಪರದೆಯ ಮೇಲೆ ಮೂಡಿಸಲಾಗುತ್ತದೆ. ಗ್ರಹಣದ ನಾನಾ ಹಂತಗಳನ್ನು ಇಲ್ಲಿ ಕಾಣಬಹುದು. ಸೂರ್ಯನನ್ನು ನೇರವಾಗಿ ವೀಕ್ಷಿಸಲು 14 ವೆಲ್ಡರ್ ಗ್ಲಾಸ್‌ಗಳು ಇರಲಿವೆ. ಇವುಗಳ ಜತೆಗೆ ಸೂರ್ಯನ ಕುರಿತಾದ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಬಾರಿ ತಾರಾಲಯ ಡಾಟ್ ಓ ಆರ್‌ಜಿ (taralaya.org) ವೆಬ್‌ಸೈಟ್ ಲಿಂಕ್ ಮೂಲಕ ಕ್ಯೂಆರ್ ಕೋಡ್ ಬಳಸಿ ಯೂಟ್ಯೂಬ್‌ನಲ್ಲಿಯೂ ಸೂರ್ಯಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.
Related Articles
Advertisement
ಬರಿಗಣ್ಣಿನಿಂದ ನೋಡಿದರೆ ಹಾನಿ: ಗ್ರಹಣ ಸಂದರ್ಭದಲ್ಲಿ ಬರಿಗಣ್ಣಿನಲ್ಲಿ ಸೂರ್ಯನನ್ನು ವೀಕ್ಷಿಸುವುದರಿಂದ ಕಣ್ಣುಗಳಿಗೆ ಹಾನಿಯುಂಟಾಗುತ್ತದೆ ಎಂದು ನೇತ್ರ ತಜ್ಞರು ತಿಳಿಸಿದ್ದಾರೆ. ಸೂರ್ಯಗ್ರಹಣದ ಸಮಯದಲ್ಲಿ ಅಥವಾ ಸಾಮಾನ್ಯ ಬಿಸಿಲಿನಲ್ಲೂ ಸೂರ್ಯನನ್ನು ದಿಟ್ಟಿಸುವುದು ಶಾಶ್ವತವಾಗಿ ಅಕ್ಷಿಪಟಲವನ್ನು ಸುಟ್ಟು ಹಾಕುತ್ತದೆ, ಇದರಿಂದ ಶಾಶ್ವತ ಅಂಧತ್ವ ಉಂಟಾಗುತ್ತದೆ.
ಸೋಲಾರ್ ರೆಟಿನೋಪತಿ ಎನ್ನುವ ಈ ಸಮಸ್ಯೆ ಅಕ್ಷಿಪಟಲದ ಜೀವಕೋಶಗಳಿಗೆ ಹಾನಿಯುಂಟು ಮಾಡುತ್ತದೆ ಅದಕ್ಕೆ ಸೌರ ವಿಕಿರಣ ಮೆದುಳಿಗೆ ಚಿತ್ರಗಳನ್ನು ಕಳುಹಿಸುವ ವಿಧಾನಕ್ಕೆ ಹಾನಿಯುಂಟಾಗ ಬಹುದು. ಸೋಲಾರ್ ರೆಟಿನೋಪತಿಯಿಂದ ಬಾಧಿತ ರಾದವರು ದೃಷ್ಟಿ ಮಂದವಾಗುವುದು, ದೃಷ್ಟಿಯಲ್ಲಿ ತಡೆ, ಕಪ್ಪು ರಂಧ್ರಗಳು(ಸೆಂಟ್ರಲ್ ಸ್ಕೊಟೊಮಸ್), ಬೆಳಕಿನ ಸಂವೇದನೆ (ಫೋಟೋಫೋಬಿಯಾ),
ದೃಷ್ಟಿ ಗ್ರಹಿಕೆಯಲ್ಲಿ ತೊಂದರೆ(ಕ್ರೊಮಟೊಪ್ಸಿಯಾ) ಮತ್ತು ತಲೆನೋವುಗಳಿಗೆ ಒಳಗಾಗುತ್ತಾರೆ. ಆದ್ದರಿಂದ ಬರಿ ಗಣ್ಣನಿಂದ ಸೂರ್ಯಗ್ರಹಣ ವೀಕ್ಷಿಸುವುದು ಒಳ್ಳೆಯದಲ್ಲ. ಸೂರ್ಯಗ್ರಹಣವನ್ನು ಗ್ರಹಣದ ಕನ್ನಡಕ ಅಥವಾ ಸೋಲಾರ್ ಫಿಲ್ಟರ್‌ಗಳ ವೀಕ್ಷಿಸಬಹುದು ಎಂದು ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಸನ್‌ಗ್ಲಾಸ್‌ಗಳು, ಮನೆಯಲ್ಲಿ ನಿರ್ಮಿಸಲಾದ ಅಥವಾ ಪೊಲರೈಸ್ಡ್ ಫಿಲ್ಟರ್‌ಗಳು, ಎಕ್ಸ್-ರೇ ಫಿಲ್ಮ್, ಡೆವಲಪ್ ಆಗದ ಫಿಲ್ಮ್ ಅಥವಾ ಸ್ಮೋಕ್ಡ್ ಗ್ಲಾಸ್ ಮೂಲಕ ಸೂರ್ಯಗ್ರಹಣ ವೀಕ್ಷಣೆ ಸುರಕ್ಷಿತವಲ್ಲ ಏಕೆಂದರೆ ಇವು ನಿಮ್ಮ ಕಣ್ಣುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲಾರವು. ಫಿಲ್ಟರ್‌ಗಳನ್ನು ಹೊಂದಿಲ್ಲದ ಟೆಲಿಸ್ಕೋಪ್‌ಗಳು ಅಥವಾ ಬೈನಾಕ್ಯುಲರ್‌ಗಳು ಕೂಡಾ ಬಳಕೆಗೆ ಸುರಕ್ಷಿತವಲ್ಲ ಎಂದು ಅವರು ತಿಳಿಸಿದ್ದಾರೆ.
ತಾರಾಲಯದಲ್ಲಿ ಬೆಳಗ್ಗೆ 8 ರಿಂದ 11.15ರವರೆಗೆ ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಮೂರು ದಿನಗಳಿಂದ ಇರುವಂತೆ ಬುದವಾರ ಕೂಡ ಮೋಡ ಮುಚ್ಚಿದ ವಾತಾವರಣ ಮುಂದುವರಿದರೆ ಗ್ರಹಣ ಗೋಚರಿಸುವುದಿಲ್ಲ. -ಪ್ರಮೋದ್ ಗಲಿಗಲಿ, ನೆಹರು ತಾರಾಲಯದ ನಿರ್ದೇಶಕ