ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಶೇ.90ರಷ್ಟು ಈಡೇರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ(ಅಕ್ಟೋಬರ್ 29) ತಿಳಿಸಿದ್ದಾರೆ.
ಇದನ್ನೂ ಓದಿ:ಭಟ್ಕಳ: ಅರವಿಂದ ಸ್ವಾಮಿ ಅಭಿನಯಿಸುತ್ತಿರುವ ಮಲಯಾಳಂ ಸಿನಿಮಾ ಚಿತ್ರೀಕರಣ
2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಕ್ನೋದಲ್ಲಿ “ಮೇರಾ ಪರಿವಾರ್, ಬಿಜೆಪಿ ಪರಿವಾರ್ ” ಎಂಬ ಸದಸ್ಯತ್ವದ ಅಭಿಯಾನಕ್ಕೆ ಶಾ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದ ಕಡು ಬಡವರ ಪರವಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದೆ. ಆದರೆ ವಿರೋಧ ಪಕ್ಷಗಳು ಅನಾವಶ್ಯಕವಾಗಿ ಟೀಕೆ ಮಾಡುತ್ತಿರುವುದಾಗಿ ಅಮಿತ್ ಶಾ
ಆರೋಪಿಸಿದರು.
2017ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯೋಗಿಜೀ ಮತ್ತು ಅವರ ತಂಡ ಜನರಿಗೆ ನೀಡಿದ್ದ ಭರವಸೆಯಲ್ಲಿ ಶೇ.90ರಷ್ಟನ್ನು ಈಡೇರಿಸಿದೆ ಎಂಬುದನ್ನು ನಾನು ಇಂದು ಹೆಮ್ಮೆಯಿಂದ ಹೇಳುತ್ತೇನೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಯೋಗಿಜೀ ಸರ್ಕಾರ ಶೇ.100ರಷ್ಟು ಭರವಸೆಯನ್ನು ಈಡೇರಿಸಲಿದೆ ಎಂಬ ಭರವಸೆ ಜನರದ್ದಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಕಳೆದ 5 ವರ್ಷಗಳಿಂದ ಮನೆಯಲ್ಲಿ ಕುಳಿತಿರುವ ಜನರು(ಅಖಿಲೇಶ್) ತಮ್ಮ ಸರ್ಕಾರವನ್ನು ರಚಿಸುವ ಬಗ್ಗೆ ಕನಸು ಕಾಣುತ್ತಿದ್ದಾರೆ. ಆದರೆ ಅಖಿಲೇಶ್ ಯಾದವ್ ಉತ್ತರಪ್ರದೇಶದ ಜನರಿಗೆ ತಿಳಿಸಬೇಕು, ಅವರು ಎಷ್ಟು ದಿನ ವಿದೇಶದಲ್ಲಿ ನೆಲೆ ನಿಂತಿದ್ದಾರೆ. ಕೋವಿಡ್ 19 , ಪ್ರವಾಹದ ಸಂದರ್ಭದಲ್ಲಿ ಅಖಿಲೇಶ್ ಏನು ಮಾಡಿದ್ದಾರೆ, ಅವರು ತಮ್ಮ ಕುಟುಂಬಕ್ಕಾಗಿ ಮಾತ್ರ ಕಾರ್ಯನಿರ್ವಹಿಸಿದ್ದಾರೆ ಎಂದು ಶಾ ವಾಗ್ದಾಳಿ ನಡೆಸಿದರು.